ಮನೆಯಲ್ಲಿ ಇರುವ ಈ ಹಳೆಯ ಗ್ಯಾಜೆಟ್ಗಳು ತುಂಬಾ ಅಪಾಯಕಾರಿ. ಅದನ್ನು ತಕ್ಷಣ ನಿಮ್ಮ ಮನೆಯಿಂದ ತೆಗೆದುಹಾಕಬೇಕು.
Dangerous Electronic Gadgets: ನಾವು ಎಲ್ಲಾ ಕಡೆಯಿಂದ ಎಲೆಕ್ಟ್ರಾನಿಕ್ ಗ್ಯಾಜೆಟ್ಗಳಿಂದ ಸುತ್ತುವರೆದಿದ್ದೇವೆ. ವರ್ಷದಿಂದ ವರ್ಷಕ್ಕೆ ಹೊಸ ಹೊಸ ಗ್ಯಾಜೆಟ್ಗಳನ್ನು ಖರೀದಿಸುತ್ತೇವೆ, ಹೀಗಾದಾಗ ಹಳೆಯ ಗ್ಯಾಜೆಟ್ ಗಳು ಕೂಡಾ ಮನೆಯಲ್ಲಿಯೇ ಬಿದ್ದಿರುತ್ತವೆ. ಆದರೆ ನೆನಪಿರಲಿ, ಮನೆಯಲ್ಲಿ ಇರುವ ಈ ಹಳೆಯ ಗ್ಯಾಜೆಟ್ಗಳು ತುಂಬಾ ಅಪಾಯಕಾರಿ. ಅದನ್ನು ತಕ್ಷಣ ನಿಮ್ಮ ಮನೆಯಿಂದ ತೆಗೆದುಹಾಕಬೇಕು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಹಳೆಯ ವೈಫೈ ರೂಟರ್ಗಳ ಸಹಾಯದಿಂದ, ಸೈಬರ್ ಅಪರಾಧಿಗಳು ನಿಮ್ಮ ಹಣಕಾಸಿನ ಮಾಹಿತಿಯನ್ನು ಹ್ಯಾಕ್ ಮಾಡಬಹುದು. ಇದು ಅತ್ಯಂತ ಅಪಾಯಕಾರಿಯಾಗಿದೆ.
ಮನೆಯಲ್ಲಿರುವ ಮುರಿದ ಸಾಕೆಟ್ ಗಳು ಕೂಡಾ ಬಹಳ ಅಪಾಯಕಾರಿಯಾಗಿದೆ. ಇವುಗಳಿಂದ ವಿದ್ಯುತ್ ಆವಘಡದ ಸಾಧ್ಯತೆಗಳು ಹೆಚ್ಚಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ ಅವುಗಳನ್ನು ಸರಿಪಡಿಸಬೇಕು ಅಥವಾ ತೆಗೆದುಹಾಕಬೇಕು.
ಹಳೆಯದಾದ ವಿದ್ಯುತ್ ಕೇಬಲ್ ಗಳು ಅಪಾಯಕಾರಿಯಾಗಬಹುದು. ಇವು ಆಘಾತ, ಅಥವಾ ಬೆಂಕಿಯ ಅಪಘಾತಗಳಿಗೆ ಕಾರಣವಾಗಬಹುದು.
ಎಲ್ಲರ ಮನೆಯಲ್ಲೂ ಹಳೆಯ ಫೋನ್ಗಳ ಸಂಗ್ರಹವಿರುತ್ತದೆ. ಫೋನ್ಗಳು ಲಿಥಿಯಂ-ಐಯಾನ್ ಬ್ಯಾಟರಿಗಳನ್ನು ಹೊಂದಿದ್ದು ಅದು ಕಾಲಾನಂತರದಲ್ಲಿ ಊದಿಕೊಂಡು, ಸ್ಫೋಟಗೊಳ್ಳುವ ಸಾಧ್ಯತೆ ಇರುತ್ತದೆ.
ಇಯರ್ಫೋನ್ಗಳು ಮತ್ತು ಸ್ಪೀಕರ್ಗಳು ಮ್ಯಾಗ್ನೆಟ್ಗಳು, ತಾಮ್ರದ ಸುರುಳಿಗಳು, ಪ್ಲಾಸ್ಟಿಕ್ಗಳು ಮತ್ತು ಬ್ಯಾಟರಿಗಳಂತಹ ಬಹಳಷ್ಟು ಅಪಾಯಕಾರಿ ವಸ್ತುಗಳನ್ನು ಒಳಗೊಂಡಿರುತ್ತವೆ. ದೀರ್ಘಾವಧಿಯಲ್ಲಿ, ಈ ವಸ್ತುಗಳು ಸಾಕಷ್ಟು ಅಪಾಯಕಾರಿಯಾಗಿ ಪರಿಣಮಿಸಬಹುದು.