Astro Tips: ಉಪ್ಪಿನ ಈ ಪರಿಹಾರಗಳು ನಿಮ್ಮ ಅದೃಷ್ಟವನ್ನೇ ಬದಲಾಯಿಸಲಿವೆ!

Salt vastu tips: ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ

ನವದೆಹಲಿ: ಯಾವುದೇ ಒಬ್ಬ ವ್ಯಕ್ತಿಯು ಕಠಿಣ ಪರಿಶ್ರಮದ ಹೊರತಾಗಿಯೂ ಉತ್ತಮ ಫಲಿತಾಂಶ ಪಡೆಯದಿದ್ದರೆ, ಇದರ ಹಿಂದಿನ ಕಾರಣ ವಾಸ್ತು ದೋಷವಾಗಿರಬಹುದು. ಯಶಸ್ಸು ಪಡೆಯಲು ಮತ್ತು ಮನೆಯ ನಕಾರಾತ್ಮಕತೆ ನಿವಾರಿಸಲು ವಾಸ್ತು ದೋಷದಿಂದ ಮುಕ್ತಿ ಪಡೆಯುವುದು ಉತ್ತಮ. ಇದಕ್ಕಾಗಿ ಕೆಲವು ಕ್ರಮಗಳನ್ನು ನೀವು ತೆಗೆದುಕೊಳ್ಳಬಹುದು. ಈ ಪರಿಹಾರಗಳಲ್ಲಿ ಸಮುದ್ರದ ಉಪ್ಪು ಕೂಡ ಒಂದು. ಸಮುದ್ರದ ಉಪ್ಪು ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸುವ ಶಕ್ತಿ ಹೊಂದಿದೆ. ಈ ಪರಿಹಾರದಿಂದ ಮನೆಯಲ್ಲಿ ಆಶೀರ್ವಾದ ಮತ್ತು ಸಮೃದ್ಧಿ ಬರಲು ಪ್ರಾರಂಭಿಸುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಮನೆಯಲ್ಲಿ ಬಕೆಟ್‍ಗೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಸ್ನಾನ ಮಾಡಿ. ಇದು ನಿಮ್ಮ ದೇಹದೊಳಗಿನ ನಕಾರಾತ್ಮಕ ಶಕ್ತಿಯನ್ನು ನಿವಾರಿಸುತ್ತದೆ. ಇದರಿಂದ ನೀವು ಉಲ್ಲಾಸ ಮತ್ತು ಚೈತನ್ಯವನ್ನು ಅನುಭವಿಸುವಿರಿ. ಇದರಿಂದ ನಿಮಗೆ ಆಯಾಸವಾಗುವುದಿಲ್ಲ.

2 /5

ಪ್ರತಿದಿನ ಬೆಳಗ್ಗೆ ನಿಮ್ಮ ಕೈಯಲ್ಲಿ ಸ್ವಲ್ಪ ಉಪ್ಪನ್ನು ತೆಗೆದುಕೊಂಡು ದೇಹದ ಮೇಲೆ ಉಜ್ಜಿಕೊಳ್ಳಿ, ಬಳಿಕ ನೀರಿನಲ್ಲಿ ತೊಳೆಯಿರಿ. ಹೀಗೆ ಮಾಡುವುದರಿಂದ ಮನೆಯ ಋಣಾತ್ಮಕತೆ ದೂರವಾಗುತ್ತದೆ ಮತ್ತು ನೀವು ಬಯಸಿದ ಫಲಿತಾಂಶ  ಪಡೆಯಲು ಇದು ಸಹಕಾರಿಯಾಗಲಿದೆ.

3 /5

ಮಲಗುವ ಕೋಣೆಯಲ್ಲಿ 1 ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದರಲ್ಲಿ ಸ್ವಲ್ಪ ಉಪ್ಪು ಹಾಕಿ. ಈ ಉಪ್ಪು ನೀರನ್ನು ಪ್ರತಿದಿನ ಬದಲಾಯಿಸುತ್ತಿರಿ ಮತ್ತು ಹಳೆಯ ನೀರನ್ನು ವಾಶ್‌ರೂಮ್ ಅಥವಾ ಸಿಂಕ್‌ನಲ್ಲಿ ಹಾಕಿ. ಆದರೆ ಈ ಸಮಯದಲ್ಲಿ ಈ ನೀರು ನಿಮ್ಮ ದೇಹದ ಯಾವುದೇ ಭಾಗ ಅಥವಾ ಕೆಳಗೆ ಬೀಳಬಾರದು. ಹೀಗೆ ಮಾಡುವುದರಿಂದ ಮನೆಯ ಎಲ್ಲಾ ನೆಗೆಟಿವ್ ಎನರ್ಜಿ ಕೊನೆಗೊಳ್ಳುತ್ತದೆ.

4 /5

ಮನೆಯ ನೆಲವನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಒರೆಸಿರಿ. ಇದರಿಂದ ಋಣಾತ್ಮಕ ಶಕ್ತಿ ಹೊರಹೋಗುತ್ತದೆ. ಬಾತ್ರೂಮ್ನಲ್ಲಿ ಉಪ್ಪು ಅಥವಾ ಕಲ್ಲು ಉಪ್ಪನ್ನು ಬಳಸಿ. ಈ ಪರಿಹಾರವು ಸ್ನಾನಗೃಹದ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುತ್ತದೆ. ನಿಮಗೆ ಮಾನಸಿಕ ನೆಮ್ಮದಿಯನ್ನು ನೀಡುತ್ತದೆ.

5 /5

ಮನೆಯಲ್ಲಿಟ್ಟಿರುವ ಎಲ್ಲಾ ವಸ್ತುಗಳನ್ನು ಕಾಲಕಾಲಕ್ಕೆ ಉಪ್ಪು ನೀರಿನಿಂದ ಸ್ವಚ್ಛಗೊಳಿಸುತ್ತಿರಿ. ಈ ಕಾರಣದಿಂದ ಮನೆಯಲ್ಲಿ ಸಂಗ್ರಹವಾದ ಧೂಳು ಅಥವಾ ಕೊಳೆಯು ನಕಾರಾತ್ಮಕ ಶಕ್ತಿಯನ್ನು ಕೊನೆಗೊಳಿಸುತ್ತದೆ ಮತ್ತು ಧನಾತ್ಮಕ ಶಕ್ತಿ ಮನೆಯಲ್ಲಿ ಬರಲು ಪ್ರಾರಂಭಿಸುತ್ತದೆ. (ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ದೃಢಪಡಿಸುವುದಿಲ್ಲ.)