308 ಮಹಿಳೆಯರೊಂದಿಗೆ ಸೆಕ್ಸ್‌, ಇದರಲ್ಲಿ ನಟಿಯರೂ ಇದ್ದಾರೆ.. ಜೊತೆಗೆ 3 ಮದುವೆ.. ಈ ಸ್ಟಾರ್ ಹೀರೋ ಸಾಮಾನ್ಯನಲ್ಲ..!

Bollywood actress : ಸಿನಿಮಾ ಇಂಡಸ್ಟ್ರಿ ಒಂದು ಬಣ್ಣದ ಲೋಕ. ತೆರೆಯ ಮೇಲೆ ಮಿನುಗುವ ತಾರೆಗಳ ಬದುಕಿನ ಹಿಂದೆ ಹಲವು ಕರಾಳ ಕಥೆಗಳಿವೆ. ನಾಯಕ, ನಾಯಕಿಯರ ಜೀವನದಲ್ಲಿ ದುರಂತ ಘಟನೆಗಳಿವೆ. ಹಲವು ಸ್ಟಾರ್ ಹೀರೋಗಳ ವೈಯಕ್ತಿಕ ವಿಚಾರಗಳು ಆಗಾಗ ಸೆನ್ಸೇಷನಲ್ ಆಗುತ್ತಿರುತ್ತವೆ.. ಈ ಪೈಕಿ ಸ್ಟಾರ್‌ ನಟರೊಬ್ಬರ ಡೇಟಿಂಗ್‌, ಲವ್‌, ಮದುವೆ ಹಿನ್ನೆಲೆ ಪ್ರೇಕ್ಷಕರಿಗೆ ಶಾಕ್‌ ಮೂಡಿಸುತ್ತಿದೆ..

1 /9

ಮಾನ್ಯತಾ ದತ್ 2006 ರಲ್ಲಿ ಸಂಜಯ್ ದತ್ ಅವರನ್ನು ಮೊದಲು ಭೇಟಿಯಾದರು. ನಂತರ ಇಬ್ಬರೂ ಪರಸ್ಪರ ಸ್ನೇಹಿತರಾದರು. ನಂತರ ಸ್ನೇಹ ಪ್ರೀತಿಗೆ ತಿರುಗುತ್ತದೆ. ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಮಾನ್ಯತಾ ಅವರನ್ನು ಮದುವೆಯಾಗುವ ಮೊದಲು ಸಂಜಯ್ ದತ್ ಎರಡು ಮದುವೆಯಾಗಿದ್ದರು... ಯಸ್‌.. ನಾವು ಹೇಳಲು ಹೊರಟಿರುವುದು ಕೆಜೆಎಫ್‌ ಅಧೀರ ಸಂಜಯ್‌ ದತ್‌ ಜೀವನ ಕಥೆ..  

2 /9

ಸಂಜಯ್ ದತ್ ಅವರನ್ನು ಮದುವೆಯಾದ ನಂತರ ಮಾನ್ಯತಾ ಬಾಲಿವುಡ್‌ಗೆ ವಿದಾಯ ಹೇಳಿದರು. ಸಂಜಯ್ 1980 ರ ದಶಕದಿಂದ ಬಿ-ಟೌನ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ಈ ನಟ 130 ಕ್ಕೂ ಹೆಚ್ಚು ಚಲನಚಿತ್ರಗಳನ್ನು ನಟಿಸಿದ್ದಾರೆ. ವಿಶೇಷ ಅಂದ್ರೆ ಸಂಜಯ್‌ ಲವರ್‌ಗಳ ಸಂಖ್ಯೆ ಅವರ ಸಿನಿಮಾ ಸಂಖ್ಯೆಗಳಿಗಿಂತ ಹೆಚ್ಚು.  

3 /9

ಮಾನ್ಯತಾ ಸಂಜಯ್ ದತ್‌ಗಿಂತ 18 ವರ್ಷ ಚಿಕ್ಕವರು. ಆದರೆ ಇವರಿಬ್ಬರ ಪ್ರೀತಿ ಶ್ಲಾಘನೀಯ. ಸಂಜಯ್ ದತ್ ಅವರ ಕ್ಯಾನ್ಸರ್ ವಿರುದ್ಧ ಹೋರಾಡುವಾಗ ಮಾನ್ಯಾತಾ ಎದೆಗುಂದದೆ ಜೊತೆಗಿದ್ದರು. ಸಂಜು ಜೈಲಿಗೆ ಹೋದಾಗಲೂ ಹೆದರಲಿಲ್ಲ. ಈ ಜೋಡಿಗೆ ಶಹರಾನ್ ಮತ್ತು ಇಕ್ರಾ ಎಂಬ ಅವಳಿ ಮಕ್ಕಳಿದ್ದಾರೆ.  

4 /9

ಸಂಜಯ್ ತನ್ನ ಜೀವನದಲ್ಲಿ ಸುಮಾರು 308 ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾಗಿ ಹೇಳಿಕೊಂಡಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಆದರೆ ಈ 308 ಮಹಿಳೆಯರ ಲಿಸ್ಟ್‌ನಲ್ಲಿ ಬಾಲಿವುಡ್ ನಟಿಯರಿದ್ದಾರೆ ಎಂದು ತಿಳಿದರೆ ನಿಮಗೆ ಆಶ್ಚರ್ಯವಾಗುತ್ತದೆ. ಸಂಜು ದಾದಾ ತಮ್ಮ ಪೀಳಿಗೆಯ ಬಹುತೇಕ ಎಲ್ಲ ನಟಿಯರೊಂದಿಗೆ ಡೇಟಿಂಗ್ ಮಾಡಿದರು.  

5 /9

ಟೀನಾ ಮುನಿಮ್‌ನಿಂದ ಮಾಧುರಿ ದೀಕ್ಷಿತ್‌ವರೆಗೆ ಯಾರೂ ಅವನ ಪ್ರೀತಿಯ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. ರಿಚಾ ಶರ್ಮಾ ಅವರ ಮೊದಲ ಪತ್ನಿ ಕ್ಯಾನ್ಸರ್ ನಿಂದ ಸಾವನ್ನಪ್ಪಿದ್ದಾರೆ. ಅದರ ನಂತರ,  1998 ರಲ್ಲಿ ರಿಯಾ ಪಿಳ್ಳೈ ಅವರನ್ನು ಮತ್ತೆ ವಿವಾಹವಾದರು.  

6 /9

ಅನೇಕ ಸಂದರ್ಭಗಳಲ್ಲಿ ಸಂಜಯ್ ಮಹಿಳೆಯರ ಸಹಾನುಭೂತಿ ಗಳಿಸಿ ಅವರಿಗೆ ಹತ್ತಿರವಾಗುತ್ತಿದ್ದರು ಎಂದು ರಾಜ್ ಕುಮಾರ್ ಹಿರಾನಿ ಹೇಳಿದ್ದಾರೆ. ಆ ಪಟ್ಟಿಯಲ್ಲಿ ಖ್ಯಾತ ನಾಯಕಿ ರೇಖಾ ಹೆಸರೂ ಸೇರಿದೆ  

7 /9

1984ರಲ್ಲಿ ಸಂಜಯ್ ಜೊತೆ ‘ಜಮೀನ್ ಅಸ್ಮಾನ್’ ಚಿತ್ರದಲ್ಲಿ ರೇಖಾ ನಟಿಸಿದ್ದರು. ಚಿತ್ರದ ಶೂಟಿಂಗ್‌ನಿಂದಲೇ ಅವರು ಪರಸ್ಪರ ಹತ್ತಿರವಾಗಲು ಪ್ರಾರಂಭಿಸಿದರು. ಸಂಜಯ್ ದತ್ ತಾಯಿ ನರ್ಗೀಸ್ ಮತ್ತು ತಂದೆ ಸುನೀಲ್ ದತ್ ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ.  

8 /9

ಅಂತಿಮವಾಗಿ, 1980 ರ ದಶಕದಲ್ಲಿ, ರೇಖಾ ಸಂಜಯ್ ದತ್ ಅವರನ್ನು ಇಷ್ಟ ಪಟ್ಟ ವಿಚಾರ ಬಹಿರಂಗವಾಗಿತ್ತು.. ಇದರಿಂದ ಅನೇಕ ಆರೋಪವನ್ನು ಎದುರಿಸಬೇಕಾಯಿತು.. ಸಂಜಯ್ ದತ್ ಜೊತೆ ಆಕೆಯ ಮದುವೆಯ ಸುದ್ದಿ ಉದ್ಯಮದಲ್ಲಿ ವೇಗವಾಗಿ ಹರಡಿತು. ಇದನ್ನು ಕೇಳಿದ ಸಂಜಯ್ ದತ್ ತಾಯಿ ನಟಿ ನರ್ಗೀಸ್ ಕೋಪಗೊಂಡಿದ್ದರು.   

9 /9

ಸಂಜಯ್ ದತ್ ತಮ್ಮ ಜೀವನದಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದನ್ನು ಕಂಡಿದ್ದಾರೆ. ಡ್ರಗ್ಸ್ ಚಟಕ್ಕೆ ಬಿದ್ದಿದ್ದ ಅವರು ಕೆಲ ದಿನಗಳ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಜೈಲಿಗೂ ಹೋದರು. ಇದೀಗ ಎರಡನೇ ಇನ್ನಿಂಗ್ಸ್ ನಲ್ಲಿ ಪವರ್ ಫುಲ್ ವಿಲನ್ ಪಾತ್ರಗಳಲ್ಲಿ ನಟಿಸಿ ಎಲ್ಲರನ್ನೂ ರಂಜಿಸುತ್ತಿದ್ದಾರೆ.