ಮಣ್ಣು ಉಳಿಸಿ ಅಭಿಯಾನಕ್ಕಾಗಿ ಬೈಕ್‌ನಲ್ಲಿ 30 ಸಾವಿರ ಕಿಮೀ ಪ್ರಯಾಣ ಆರಂಭಿಸಿದ 64 ವರ್ಷ ವಯಸ್ಸಿನ ಸದ್ಗುರುಗಳು!

                             

ಭಾರತೀಯ ಆಧ್ಯಾತ್ಮಿಕವಾದಿ ಮತ್ತು ಪರಿಸರವಾದಿ ಸದ್ಗುರುಗಳು ಮಣ್ಣನ್ನು ಉಳಿಸುವ ಜಾಗೃತಿ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ‘ಮಣ್ಣು ಉಳಿಸುವ ಪಯಣ’ ಎಂಬ ಈ ಅಭಿಯಾನದಲ್ಲಿ ಸದ್ಗುರುಗಳು ಬೈಕ್‌ನಲ್ಲಿ 100 ದಿನಗಳ ಕಾಲ ಏಕಾಂಗಿಯಾಗಿ ಪ್ರಯಾಣಿಸಲಿದ್ದಾರೆ. ಈ 30,000 ಕಿ.ಮೀ ಪ್ರಯಾಣದಲ್ಲಿ ಅವರು ಮುಂದಿನ ಕೆಲವು ತಿಂಗಳುಗಳಲ್ಲಿ ಯುಕೆ, ಯುರೋಪ್ ಮತ್ತು ಮಧ್ಯಪ್ರಾಚ್ಯ ಮೂಲಕ ಭಾರತದವರೆಗೆ 27 ದೇಶಗಳನ್ನು ಹಾದು ಹೋಗಲಿದ್ದಾರೆ. ಜೂನ್ 21 ರಂದು ಅಂತರರಾಷ್ಟ್ರೀಯ ಯೋಗ ದಿನದ ಸಂದರ್ಭದಲ್ಲಿ ಅವರು ಭಾರತದ ಕಾವೇರಿ ಜಲಾನಯನ ಪ್ರದೇಶದಲ್ಲಿ ತಮ್ಮ ಅಭಿಯಾನವನ್ನು ಕೊನೆಗೊಳಿಸಲಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಲಂಡನ್‌ನ ಪಾರ್ಲಿಮೆಂಟ್ ಸ್ಕ್ವೇರ್‌ನಿಂದ ಸದ್ಗುರುಗಳ 30,000 ಕಿಮೀ ಬೈಕ್ ಪ್ರಯಾಣವನ್ನು ಫ್ಲ್ಯಾಗ್‌ಆಫ್ ಮಾಡಲಾಯಿತು. ಈ ಚಿತ್ರಗಳಲ್ಲಿ ಅವರು BMW K1600 GT ಮೋಟಾರ್ ಸೈಕಲ್ ಓಡಿಸುತ್ತಿರುವುದನ್ನು ಕಾಣಬಹುದು. ಪ್ರಯಾಸಕರ 100 ದಿನಗಳ ಪ್ರಯಾಣವನ್ನು ಪ್ರಾರಂಭಿಸುವ ಮೊದಲು ಜನರು ಅವರಿಗೆ ಶುಭ ಹಾರೈಸಲು ಜಮಾಯಿಸಿದರು.

2 /5

64 ವರ್ಷದ ಆಧ್ಯಾತ್ಮಿಕ ಗುರು ಈ ವಾರ ಆಮ್‌ಸ್ಟರ್‌ಡ್ಯಾಮ್, ಬರ್ಲಿನ್ ಮತ್ತು ಪ್ರೇಗ್ ತಲುಪಲಿದ್ದಾರೆ. ತಮ್ಮ 100 ದಿನಗಳ ಪ್ರವಾಸದಲ್ಲಿ ಸದ್ಗುರುಗಳು 30,000 ಕಿಮೀ ಪ್ರಯಾಣಿಸಲಿದ್ದಾರೆ ಮತ್ತು ಪ್ರಪಂಚದಾದ್ಯಂತ 27 ದೇಶಗಳನ್ನು ಹಾದು ಹೋಗಲಿದ್ದಾರೆ. ಈ ಸಂದರ್ಭದಲ್ಲಿ ಅವರು ವಿಶ್ವ ನಾಯಕರು, ಮಾಧ್ಯಮಗಳು ಮತ್ತು ತಜ್ಞರನ್ನು ಭೇಟಿ ಮಾಡಿ, ಮಣ್ಣು ಉಳಿಸಲು ಅಗತ್ಯ ಕ್ರಮ ಕೈಗೊಳ್ಳಲು ಒತ್ತು ನೀಡುವಂತೆ ಜಾಗೃತಿ ಮೂಡಿಸಲಿದ್ದಾರೆ. 

3 /5

ಭಾರತದ ಸ್ವಾತಂತ್ರ್ಯದ 75 ನೇ ವಾರ್ಷಿಕೋತ್ಸವವನ್ನು ಆಚರಿಸಲು ಸದ್ಗುರುಗಳು 75 ದಿನಗಳಲ್ಲಿ ನವದೆಹಲಿಯನ್ನು ತಲುಪುವ ಗುರಿಯನ್ನು ಹೊಂದಿದ್ದಾರೆ. ಯುನೈಟೆಡ್ ನೇಷನ್ಸ್ ಕನ್ವೆನ್ಷನ್ ಪ್ರಕಾರ, ಭೂಮಿಯ 90% ಕ್ಕಿಂತ ಹೆಚ್ಚು ಮಣ್ಣು 2050 ರ ವೇಳೆಗೆ ಅವನತಿ ಹೊಂದಬಹುದು.

4 /5

ಯಾತ್ರೆಗೆ ಹೊರಡುವ ಮುನ್ನ ಸದ್ಗುರುಗಳು ಭಾರತೀಯ ಹೈಕಮಿಷನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಈಗ ಕಾರ್ಯನಿರ್ವಹಿಸುವುದು ಬಹಳ ಮುಖ್ಯ. ನಾನು 24 ವರ್ಷಗಳಿಂದ ಈ ಬಗ್ಗೆ ಮಾತನಾಡುತ್ತಿದ್ದೇನೆ, ಆದರೆ ಪ್ರತಿ ದೇಶದಲ್ಲಿ ಸಕಾರಾತ್ಮಕ ನೀತಿ ಇದ್ದಾಗ ಮಾತ್ರ ಪರಿಹಾರವನ್ನು ಕಾಣಬಹುದು ಎಂದಿದ್ದಾರೆ. 

5 /5

ಗಮನಾರ್ಹವಾಗಿ ಯೂರೋಪಿನ ಹಲವೆಡೆ ಇನ್ನೂ ಹಿಮ ಸುರಿಯುತ್ತಿದೆ, ಹೀಗಿದ್ದರೂ ಬೈಕ್ ನಲ್ಲಿ ತಮ್ಮ ಪ್ರಯಾಣ ಮುಂದುವರೆಯಲಿದೆ ಎಂದು ಸದ್ಗುರುಗಳು ತಿಳಿಸಿದ್ದಾರೆ. ಈ ವಯಸ್ಸಿನಲ್ಲಿ ಬೈಕ್ ಓಡಿಸುವುದು ಅಷ್ಟು ಆರಾಮದಾಯಕವಲ್ಲ. ಆದಾಗ್ಯೂ, ನಾನು ಇದನ್ನು ಮಾಡುತ್ತಿದ್ದೇನೆ. ಏಕೆಂದರೆ ಕಳೆದ 20 ವರ್ಷಗಳಲ್ಲಿ 3,00,000 ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದು ಭಾರತದಲ್ಲಿ ಮಾತ್ರವಲ್ಲ ಪ್ರಪಂಚದಾದ್ಯಂತ ನಡೆಯುತ್ತಿದೆ.  'ಮಣ್ಣಿನ ಅಳಿವು' ಇದೀಗ ನಾಗರೀಕತೆಗೆ ಗಂಭೀರ ಸವಾಲಾಗಿದೆ, ಏಕೆಂದರೆ ನಮ್ಮ ಪ್ರಪಂಚವು ತ್ವರಿತವಾದ ಮಣ್ಣಿನ ಅವನತಿಯಿಂದಾಗಿ ಆಹಾರವನ್ನು ಬೆಳೆಯುವ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತಿದೆ. ನನ್ನ ಮುಖ್ಯ ಕಾಳಜಿಯೆಂದರೆ ಮಣ್ಣನ್ನು ಪುನರುಜ್ಜೀವನಗೊಳಿಸಲು ಮತ್ತು ಇನ್ನಷ್ಟು ಮಣ್ಣಿನ ಅವನತಿಯನ್ನು ತಡೆಯಲು ನೀತಿ-ಚಾಲಿತ ಕ್ರಮವನ್ನು ಪ್ರಾರಂಭಿಸಲು ಸರ್ಕಾರಗಳಿಗೆ ಪ್ರೋತ್ಸಾಹ ನೀಡುವುದಾಗಿದೆ ಎಂದರು.