"ಬಿಗ್‌ ಬಾಸ್‌ ಮನೆಗೆ ನಾನು ಬರಬೇಕು..ನನಗೊಂದು ಅವಕಾಶ ಕೊಡಿ" ಪಟ್ಟು ಹಿಡಿದ ಹುಚ್ಚಾ ವೆಂಕಟ್‌! ಮಾಜಿ ಸ್ಪರ್ಧಿಗೆ ಸಿಗುತ್ತಾ ಮತ್ತೊಂದು ಅವಕಾಶ?

huccha Venkat in bigboss: ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್‌ ಬಾಸ್‌ ಸೀಸನ್‌ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್‌ ನಾನೂ ಕೂಡ ಬಿಗ್‌ ಬಾಸ್‌ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ. 

1 /7

huccha Venkat in bigboss: ಬಿಗ್‌ ಬಾಸ್‌ ಕನ್ನಡ ಸೀಸನ್ 11 ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ, ಈ ಭಾರಿಯ ಬಿಗ್‌ ಬಾಸ್‌ ಸೀಸನ್‌ ಅಂತೂ ಆರಂಭಕ್ಕೂ ಮುಂಚೆಯೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹೀಗಿರುವಾಗ ದೊಡ್ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್‌ ನಾನೂ ಕೂಡ ಬಿಗ್‌ ಬಾಸ್‌ ಮೆನೆಗೆ ಬರಬೇಕು ನನಗೂ ಕೂಡ ಒಂದು ಅವಕಾಶ ಕೊಡಿ ಎಂದು ಪಟ್ಟು ಹಿಡಿದಿದ್ದಾರೆ.   

2 /7

ಬಿಗ್‌ ಬಾಸ್‌ ಕನ್ನಡ ಸೀಸನ್‌ 11 ಸೆಪ್ಟೆಂಬರ್‌ 29ರಿಂದ ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಆರಂಭವಾಗಲಿದೆ. ಇನ್ನೂ ಮನೆಗೆ ಎಂಟ್ರಿ ಕೊಡಲಿರುವ ಸ್ಪರ್ಧಿಗಳಯ ಯಾರ್ಯಾರು ಎಂಬುದು ಇನ್ನೂ ನಿಗೂಢವಾಗಿದ್ದು, ಹಲವಾರು ಸೆಲೆಬ್ರಿಟಿಗಳ ಹೆಸರುಗಳು ಈ ಪಟ್ಟಿಯಲ್ಲಿ ಕೇಳಿ ಬರುತ್ತಿದೆ.

3 /7

ಬಿಗ್‌ ಬಾಸ್‌ ಪ್ರೋಮೋಗಳು ಈಗಾಗಲೇ ರಿಲೀಸ್‌ ಆಗಿವೆ, ಈ ಪ್ರೋಮೋಗಳಲ್ಲಿರುವ ನಿಗೂಢತೆ ಪ್ರೇಕ್ಷಕರನ್ನು ಕುತೂಹಲದಿಂದ ಕಾಯುವಂತೆ ಮಾಡಿದೆ, ಸೀಸನ್‌ ಅನೌನ್ಸ್‌ ಆದಾಗಿನಿಂದ ನಮ್ಮನ್ನೂ ಕೂಡ ಬಿಗ್‌ ಬಾಸ್‌ನಲ್ಲಿ ಸ್ಪರ್ಧಿಗಳಾಗಿ ಆಯ್ಕೆ ಮಾಡಿ, ಮನೆಯೊಳಗೆ ಹೋಗಲು ಪ್ರವೇಶ ಕೊಡಿ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬಿಗ್‌ ಬಾಸ್‌ ತಂಡಕ್ಕೆ ಮನವಿ ಮಾಡಿಕೊಳ್ಳುತ್ತಿದ್ದಾರೆ.

4 /7

ಹೀಗೆ ಬಿಗ್‌ ಬಾಸ್‌ ಮನೆಗೆ ನಾ ಮುಂದು ತಾ ಮುಂದು ಎಂದು ಎಂಟ್ರಿ ಕೊಡಲು ಬಯಸುತ್ತಿರುವಾಗಲೇ, ಇಂತಹವಾರ ಪಟ್ಟಿಯಲ್ಲಿ ಬಿಗ್‌ಬಾಸ್‌ ಮನೆಯ ಮಾಜಿ ಸ್ಪರ್ಧಿ ಹುಚ್ಚಾ ವೆಂಕಟ್‌ ಕೂಡ ಸೇರಿಕೊಂಡಿದ್ದಾರೆ.

5 /7

ಹೌದು, ನಟ ಹುಚ್ಚಾ ವೆಂಕಟ್‌ ಬಿಗ್‌ಬಾಸ್‌ ಸೀಸನ್‌ 3ರಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದರು, ದಿನಕ್ಕೊಂದು ಜಗಳ, ಮನೆಯಲ್ಲಿದ್ದವರ ಜೊತೆ ಖ್ಯಾತೆ ತೆಗೆಯುತ್ತಾ, ದಿನಕರ್‌ ಅವರ ಮೇಲೆ ಕೈ ಮಾಡಿ ಹುಚ್ಚಾ ವೆಂಕಟ್‌ ಮನೆಯಿಂದ ಹೊರಬಿದ್ದಿದ್ದರು. 

6 /7

ಹೀಗೆ ಮೂರನೇ ಸೀಸನ್‌ನಲ್ಲಿ ಗಲಾಟೆ ಮಾಡಿಕೊಂಡು ಮನೆಯಿಂದ ಔಟ್‌ ಆಗಿದ್ದ ಹುಚ್ಚಾ ವೆಕೆಂಟ್‌ ಮತ್ತೊಮ್ಮೆ ಮನೆಗೆ ಎಂಟ್ರಿ ಕೊಡಲು ಅವಕಾಶ ಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. 

7 /7

ಇನ್ನೂ ಈ ಕುರಿತು ಮಾತನಾಡಿರುವ ಹುಚ್ಚ ವೆಂಕಟ್‌ " ಬಿಗ್‌ ಬಾಸ್‌ ಮನೆಗೆ ಹೋಗಲು ನನಗೊಂದು ಅವಕಾಶ ಕೊಡಿ, ಅದು ಒಂದು ದಿನ ಅಥವಾ ಒಂದು ವಾರ ಅಲ್ಲವೇ ಪೂರ್ತಿ ಸೀಸನ್‌ ಆದರೂ ಪರವಾಗಿಲ್ಲ, ನನ್ನನ್ನು ಬಿಗ್‌ ಬಾಸ್‌ ಮನೆಗೆ ಕಳುಹಿಸಿ, ನಾನು ಅಲ್ಲಿ ಯಾವುದೇ ಗಲಾಟೆ ಮಾಡುವುದಿಲ್ಲ, ಯಾರ ಜೊತೆಗೂ ಜಗಳವಾಡುವುದಿಲ್ಲ, ಎಲ್ಲಾ ಟಾಸ್ಕ್‌ಗಳನ್ನು ನಾನು ಮಾಡುತ್ತೇನೆ, ಅಲ್ಲಿ ಕೊಡುವ ಎಲ್ಲಾ ಕೆಲಸದಲ್ಲಿಯೂ ಪಾಲು ತೆಗೆದುಕೊಳ್ಳುತ್ತೇನೆ, ಆದರೆ ಒಂದೆ ಒಂದು ಭಾರಿ ನನಗೆ ಬಿಗ್‌ ಬಾಸ್‌ ಮನೆಗೆ ಹೋಗಲು ಅವಕಾಶ ಮಾಡಿಕೊಂಡಿ" ಎಂದು ನಟ ಹುಚ್ಚಾ ವೆಂಕಟ್‌ ಬಿಗ್‌ ಬಾಸ್‌ ತಂಡದ ಬಳಿ ಮನವಿ ಮಾಡಿಕೊಂಡಿದ್ದಾರೆ.