Shani Dev: ಶನಿ ದೇವರನ್ನು ಪೂಜೆ ಮಾಡುವುದು ಹೇಗೆ..?

Shani Dev: ಶನಿದೇವರನ್ನು ಪೂಜಿಸಲು ಶನಿವಾರವು ಉತ್ತಮ ದಿನವಾಗಿದೆ. ಕೆಲ ಸರಳ ವಿಧಾನಗಳ ಮೂಲಕ ಶನಿ ದೇವರನ್ನು ಆರಾಧಿಸುವುದರಿಂದ ಶನಿದೇವರ ಆಶೀರ್ವಾದ ನಮಗೆ ಸಿಗುತ್ತದೆ. ​

ನವದೆಹಲಿ: ಶನಿ ದೇವರ ಹೆಸರನ್ನು ಕೇಳಿದಾಗ ಅನೇಕರ ಮನಸ್ಸಿನಲ್ಲಿ ಭಯ ಹುಟ್ಟುತ್ತದೆ. ಹಿಂದೂ ಪುರಾಣದ ಪ್ರಕಾರ ಶನಿ ದೇವರು ಮನುಷ್ಯರಿಗೆ ಒಳ್ಳೆಯ ಮತ್ತು ಕೆಟ್ಟ ಫಲಗಳನ್ನು ನೀಡುತ್ತಾನಂತೆ. ನಾವು ಒಳ್ಳೆಯ ಕೆಲಸಗಳನ್ನು ಮಾಡಿದರೆ ಒಳ್ಳೆಯ ಫಲಿತಾಂಶಗಳು, ಅದೇ ರೀತಿ ಕೆಟ್ಟ ಕೆಲಸಗಳನ್ನು ಮಾಡಿದರೆ ಕೆಟ್ಟ ಫಲಿತಾಂಶಗಳನ್ನು ನೀಡುತ್ತಾನೆ ಅನ್ನೋ ನಂಬಿಕೆ ಇದೆ. ಕೆಟ್ಟ ಕೆಲಸ ಮಾಡಿದ ಜನರು ಶನಿಯ ಕೋಪವನ್ನು ಎದುರಿಸಬೇಕಾಗುತ್ತದೆ. ಶನಿದೇವರನ್ನು ಪೂಜಿಸಲು ಶನಿವಾರವು ಉತ್ತಮ ದಿನವಾಗಿದೆ. ಕೆಲ ಸರಳ ವಿಧಾನಗಳ ಮೂಲಕ ಶನಿ ದೇವರನ್ನು ಆರಾಧಿಸುವುದರಿಂದ  ಶನಿದೇವರ ಆಶೀರ್ವಾದ ನಮಗೆ ಸಿಗುತ್ತದೆ. ಶನಿದೇವರ ಪೂಜಿಸುವ ವಿಧಾನಗಳ ಬಗ್ಗೆ ತಿಳಿಯಿರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಶನಿದೋಷ  ಇದ್ದಲ್ಲಿ ಹಲವು ಸಮಸ್ಯೆಗಳು ನಿಮ್ಮನ್ನು ಕಾಡತ್ತವೆ. ನಿಮ್ಮ ಯಾವುದೇ ಆಸೆಗಳು ಈಡೇರುವುದಿಲ್ಲ. ವ್ಯಾಪಾರದಲ್ಲಿ ನಷ್ಟ ಉಂಟಾಗುತ್ತದೆ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸಬೇಕಾಗುತ್ತದೆ. ನ್ಯಾಯಾಲಯ ಪ್ರಕರಣಗಳು ಹಾಗೂ ಶತ್ರುಗಳು, ರೋಗಗಳು ಸೇರಿದಂತೆ ಹಲವು ಸಮಸ್ಯೆಗಳು ನಿಮ್ಮನ್ನು ಇನ್ನಿಲ್ಲದಂತೆ ಕಾಡುತ್ತವೆ. ಶನಿ ದೋಷವನ್ನು ತಪ್ಪಿಸಲು ಶನಿ ತ್ರಯೋದಶಿ ಅತ್ಯುತ್ತಮ ದಿನ. ಶನಿವಾರದ 3ನೇ ದಿನ ಅಂದರೆ 3ನೇ ತಾರೀಖು ಬಂದಾಗ, ಅದನ್ನು ಶನಿಯ 3ನೇ ದಿನ ಎಂದು ಕರೆಯಲಾಗುತ್ತದೆ. ಈ ದಿನ ಶನಿದೇವರನ್ನು ಆರಾಧನೆ ಮಾಡುವುದರಿಂದ ಕಷ್ಟಕಾರ್ಪಾಣ್ಯಗಳು ಪರಿಹಾರವಾಗುತ್ತವೆಂಬ ನಂಬಿಕೆ ಇದೆ.

2 /5

ಶನಿವಾರ ಉದ್ದದ ಕಪ್ಪು ದಾರದಲ್ಲಿ ಹೂವಿನ ಹಾರವನ್ನು ಮಾಡಿ. ಈ ಹಾರವನ್ನು ಶನಿದೇವರಿಗೆ ಅರ್ಪಿಸಿರಿ, ಸ್ವಲ್ಪ ಸಮಯದ ನಂತರ ಕಪ್ಪು ದಾರದ ಈ ಹಾರವನ್ನು ಕುತ್ತಿಗೆಗೆ ಧರಿಸಬೇಕು. ಇದಲ್ಲದೇ ನೀವು ಇದನ್ನು ಬಲಗೈಗೆ ಕೂಡ ಕಟ್ಟಬಹುದು. ಈ ಪ್ರಯೋಗದಿಂದ ಶನಿದೇವರ ಕೋಪವನ್ನು ಕಡಿಮೆ ಮಾಡಬಹುದು.

3 /5

ಹರಳೆಣ್ಣೆ ಮತ್ತು ಮಲ್ಲಿಗೆ ಹೂಗಳನ್ನು ಶನಿವಾರ  ಹನುಮಂತನಿಗೆ ಅರ್ಪಿಸಬೇಕು. ಅಂದು ಹನುಮಾನ್ ಚಾಲೀಸಾವನ್ನು ಸಹ ಓದಬೇಕು. ಹನುಮಂತನನ್ನು ಪೂಜಿಸುವವರಿಗೆ ಶನಿಯಿಂದ ಸಮಸ್ಯೆಗಳಾಗುವುದಿಲ್ಲವೆಂಬ ನಂಬಿಕೆ ಇದೆ. ಮಾನಸಿಕವಾಗಿ ಗೊಂದಲ ಮತ್ತು ಒತ್ತಡ ಅನುಭವಿಸುತ್ತಿದ್ದರೆ, ಪ್ರತಿ ಶನಿವಾರ ಕರ್ಪೂರದ ಜೊತೆ ಬೆಲ್ಲವನ್ನು ತೆಂಗಿನ ಎಣ್ಣೆಯಲ್ಲಿ ಮಿಶ್ರಣ ಮಾಡಿ ಅರಳಿ ಮರದ ಕೆಳಗೆ ಇಡಬೇಕು. ಹೀಗೆ ಮಾಡುವುದರಿಂದ ಮಾನಸಿಕವಾಗಿ ನಿಮಗೆ ಶಾಂತಿ ಸಿಗುತ್ತದೆ.

4 /5

ಶನಿವಾರ ಬರ್ಚ್ ಮರಕ್ಕೆ ನೀರನ್ನು ಹಾಕಿ 7 ಸುತ್ತುಗಳನ್ನು ಹಿಂದಕ್ಕೆ ಹಾಕಿ ಪ್ರದಕ್ಷಿಣೆ ಮಾಡಬೇಕು. ಇದಲ್ಲದೆ ಶನಿವಾರ ಯಾರಾದರೂ ಬಡವರಿಗೆ ಆಹಾರ  ನೀಡಿದಾಗ ಶನಿಯು ಸಂತೋಷಪಡುತ್ತಾನೆ. ಇದು ಬಡತನವನ್ನೂ ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. ಶತ್ರುಗಳ ಮೇಲೆ ಜಯ ಸಾಧಿಸಲು, 11 ಶನಿವಾರಗಳವರೆಗೆ  ಅರಳಿ ಮರದ ಕೆಳಗೆ ಸಾಸಿವೆ ಎಣ್ಣೆಯ ದೀಪ ಹಚ್ಚಬೇಕು. 11 ಬಾರಿ 'ಓಂ ಶನೈ ಶನಿಶ್ಚರಾಯ ನಮಃ' ಮಂತ್ರವನ್ನು ಪಠಿಸಬೇಕು. ಇದು ನಿಮಗೆ ಯಶಸ್ಸನ್ನು ನೀಡುತ್ತದೆ ಮತ್ತು ನಿಮ್ಮ ಶತ್ರುಗಳಿಂದ ಮುಕ್ತಿ ನೀಡುತ್ತದೆ.

5 /5

ಪ್ರತಿ ಶನಿವಾರ ಎಣ್ಣೆ ಮತ್ತು ಕಪ್ಪು ಎಳ್ಳನ್ನು ಶನಿದೇವರಿಗೆ ಅರ್ಪಿಸಬೇಕು. ಇವುಗಳಲ್ಲದೆ ತೈಲವನ್ನು ದಾನ ಮಾಡುವುದರಿಂದ ಉತ್ತಮ ಫಲಿತಾಂಶ ಸಹ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ನೀವು ಮೊದಲು ಸ್ನಾನ ಮಾಡಿ ಒಂದು ಬಟ್ಟಲಿನಲ್ಲಿ ಎಣ್ಣೆ ತೆಗೆದುಕೊಂಡು ಅದರಲ್ಲಿ ನಿಮ್ಮ ಮುಖವನ್ನು ಉಜ್ಜಿಕೊಳ್ಳಿ. ಬಳಿಕ ಎಣ್ಣೆಯನ್ನು ದಾನ ಮಾಡಬೇಕು. ಶನಿವಾರ ಶನಿದೇವರನ್ನು ಪೂಜಿಸಬೇಕು. ಆ ಸಮಯದಲ್ಲಿ ದೇವರಿಗೆ ನೀಲಿ ಹೂವುಗಳನ್ನು  ಅರ್ಪಿಸಬೇಕು. ಶನಿಯನ್ನು ಪೂಜಿಸುವಾಗ ವಿಗ್ರಹದ ಮುಂದೆ ನಿಲ್ಲಬಾರದು.