ಇನ್ನು ಈ ರಾಶಿಯವರ ಅದೃಷ್ಟದಾಟ ಶುರು! ವಕ್ರ ದೃಷ್ಟಿ ಸರಿಸಿ ಬೆನ್ನಿಗೆ ನಿಂತು ಕಾಯುತ್ತಾನೆ ಶನಿ ಮಾಹಾತ್ಮ

ಇಲ್ಲಿಯವರೆಗೆ ಶನಿ ಕಾಟದಿಂದ ಯಾವ ಕೆಲಸ ಪೂರ್ಣಗೊಳ್ಳುತ್ತಿರಲಿಲ್ಲವೋ ಈಗ ಆ ಎಲ್ಲಾ ಕೆಲಸಗಳು ಶನಿ ದೇವನ ಕೃಪೆಯಿಂದಲೇ ಪೂರ್ಣವಾಗಲಿದೆ. ಇನ್ನು ಮುಂದೆ ಈ ರಾಶಿಯವರ ಅದೃಷ್ಟದಾಟ ಶುರುವಾಗಲಿದೆ. 

ಬೆಂಗಳೂರು : ಶನಿ ದೇವನನ್ನು ನ್ಯಾಯದ ದೇವರು ಎಂದು ಕರೆಯಲಾಗುತ್ತದೆ. ಪ್ರತಿ ರಾಶಿಯವರ ಜೀವನದ ಮೇಲೆ ಶನಿಯ ಚಲನವಲನ ವಿಶೇಷ ಪರಿಣಾಮವನ್ನು ಬೀರುತ್ತವೆ.  ಶನಿ ವ್ಯಕ್ತಿ ಮಾಡುವ ಕಾರ್ಯಕ್ಕೆ ಅನುಗುಣವಾಗಿ ಫಲ ನೀಡುತ್ತಾನೆ. ಅಲ್ಲದೆ ಶನಿಯ ರಾಶಿ, ನಕ್ಷತ್ರ ಬದಲಾವಣೆ, ಚಲನೆಯಲ್ಲಿನ ಬದಲಾವಣೆ ಪ್ರತಿಯೊಬ್ಬರ ಜಾತಕದ ಮೇಲೆ ಪರಿಣಾಮ ಬೀರುತ್ತದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3COfPCC 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /6

ಜೂನ್ 17 ರಂದು ಶನಿ ದೇವನ ಹಿಮ್ಮುಖ ಚಲನೆ ಆರಂಭವಾಗಿದೆ.   ನವೆಂಬರ್ 4ರವರೆಗೆ ಶನಿ ಹಿಮ್ಮುಖ ಚಲನೆಯಲ್ಲಿಯೇ ಇರಲಿದ್ದಾನೆ. ಹಿಮ್ಮುಖ ಚಲನೆಯಲ್ಲಿರುವ ಶನಿ ಯಾವ ರಾಶಿಯವರ ಮೇಲೆ ಯಾವ ರೀತಿಯ  ಪರಿಣಾಮ ಬೀರುತ್ತಾನೆ ನೋಡೋಣ.   

2 /6

ಮೇಷ ರಾಶಿಯ ಜನರು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ. ಇಲ್ಲಿಯವರೆಗೆ ಕೆಲಸ ಸಿಗದೇ ಪರಿತಪಿಸುತ್ತಿದ್ದವರಿಗೆ ಇನ್ನು ಯಶ್ಸೂ ಸಿಗಲಿದೆ. ಶೀಘ್ರದಲ್ಲೇ ಶನಿ ದೇವನ ಕೃಪೆಯಿಂದ ಉತ್ತಮ ಉದ್ಯೋಗ ನಿಮ್ಮದಾಗುತ್ತದೆ.  ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಈ ಬಾರಿ ಒದಗಿ ಬರುತ್ತದೆ. 

3 /6

ತಮ್ಮ ವೃತ್ತಿಜೀವನವನ್ನು ಉತ್ತಮಗೊಳಿಸಲು ಬಹಳ ಸಮಯದಿಂದ  ಕಾಯುತ್ತಿರುವವರಿಗೆ ಶುಭ ಸಮಯವಿದು. ನಿಮ್ಮ ಎಲ್ಲಾ ಯೋಜನೆಯನ್ನು ಸಕ್ರಿಯಗೊಳಿಸುವ ಸಮಯ  ನಿಮ್ಮ ಮುಂದಿದೆ. ನಿಮ್ಮ ಕಾರ್ಯಗಳನ್ನು ಹೆಚ್ಚಿನ ವೇಗದಲ್ಲಿ ಮಾಡಬೇಕು. ನಿಧಾನವಾಗಿ ಕೆಲಸ ಮಾಡುವ ಅಭ್ಯಾಸವನ್ನು ಹೊಂದಿದ್ದರೆ, ತಕ್ಷಣ ಅದನ್ನು ಬದಲಾಯಿಸಿ. ನೀವಿಡುವ ಪ್ರತಿ ಹೆಜ್ಜೆಯೂ ಯಶಸ್ಸನ್ನು ತಂದು ಕೊಡಲಿದೆ. 

4 /6

ಯಾವುದೋ ಕೆಲಸಕ್ಕೆ ಕೈ ಹಾಕಿ ಇಲ್ಲಿಯವರೆಗೆ ಯಶಸ್ಸು ಸಿಗದಿದ್ದರೆ ಇನ್ನು ಚಿಂತೆ ಬೇಡ. ಎದೆಗುಂದದೆ ಮುಂದುವರಿಯಿರಿ. ಇನ್ನು ಶನಿ ದೇವ ಆ ಕಾರ್ಯದಲ್ಲಿ ಯಶಸ್ಸು ನೀಡುತ್ತಾನೆ. ನಿಮ್ಮ ಕಠಿಣ ಶ್ರಮಕ್ಕೆ ಶನಿ ದೇವ ಬೆಂಬಲವಾಗಿ ನಿಲ್ಲುತ್ತಾನೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಇದು ಒಳ್ಳೆಯ ಕಾಲ. ಅನೇಕ ಬಾರಿ ಪ್ರಯತ್ನಿಸಿದರೂ ಯಶಸ್ಸು ಸಿಗಲಿಲ್ಲ, ಎಂದು ಕುಳಿತವರಿಗೆ ಈ ಬಾರಿ ಶನಿ ಮಹಾತ್ಮನ ದಯೆಯಿಂದ ಯಶಸ್ಸು ಸಿಗಲಿದೆ.

5 /6

ಮಿಥುನ ರಾಶಿಯವರ ಅದೃಷ್ಟವೇ ಬದಲಾಗುವುದು. ಕೆಲಸ ಸಿಗದೇ ಕಂಗಾಲಾಗಿದ್ದವರನ್ನು ಉದ್ಯೋಗ ಅರಸಿ ಬರಲಿದೆ. ಇದ್ದಕ್ಕಿದ್ದಂತೆ ಉತ್ತಮ ಅವಕಾಶಗಳನ್ನು ಪಡೆಯುವುದು ಸಾಧ್ಯವಾಗುತ್ತದೆ. ಸೋಲಿನಿಂದ ಕಂಗೆಟ್ಟಿದ್ದವರಿಗೆ ಇನ್ನು ಹೊಸ ಧೈರ್ಯ ಬರಲಿದೆ.  

6 /6

ಈ ನಡುವೆ ಸಿಂಹ ರಾಶಿಯ ಯುವಕರಿಗೆ ಪರಿಸ್ಥಿತಿ ಹದಗೆಡುತ್ತಿದೆ. ಕೆಲಸ  ಕಾರ್ಯಗಳು ಕೈ ಗೂಡದೆ ನಿಲ್ಲುತ್ತಿದೆ. ಆದರೆ ಇನ್ನು ಮುಂದೆ ಶನಿದೇವನು ನಿಮ್ಮ ಕಾರ್ಯಗಳಿಗೆ ಫಲ ನೀಡುತ್ತಾನೆ. ಆದ್ದರಿಂದ ತಾಳ್ಮೆಯಿಂದಿರಿ. ಇಲ್ಲಿಯವರೆಗೆ ಪಟ್ಟ ಎಲ್ಲಾ ಯಾತನೆಗಳು ಕೊನೆಯಾಗಲಿವೆ.   ವಿದೇಶದಲ್ಲಿರುವ ನಿಮ್ಮ ಸ್ನೇಹಿತರು ಅಥವಾ ಸಂಬಂಧಿಕರಿಂದ ನೀವು ಪ್ರಯೋಜನಗಳನ್ನು ಪಡೆಯಬಹುದು.