ಕರೋನಾ ಬಗ್ಗೆ ಮನೆಯಲ್ಲಿ ಹೆಚ್ಚು ಚರ್ಚೆಗೆ ಹೋಗಬೇಡಿ. ಚರ್ಚೆ ಮಾಡಿದಷ್ಟೂ ಮನೋಸಂಕಟ ಹೆಚ್ಚಾಗುತ್ತದೆ.
ನವದೆಹಲಿ : ಕರೋನಾ ಬಗ್ಗೆ ಮನೆಯಲ್ಲಿ ಹೆಚ್ಚು ಚರ್ಚೆಗೆ ಹೋಗಬೇಡಿ. ಚರ್ಚೆ ಮಾಡಿದಷ್ಟೂ ಮನೋಸಂಕಟ ಹೆಚ್ಚಾಗುತ್ತದೆ. ಮನೆಯಲ್ಲಿರುವ ಮಕ್ಕಳಿಗೆ ಇವೆಲ್ಲಾ ಅರ್ಥವಾಗುವುದಿಲ್ಲ. ಅರ್ಥವಾಗುವುದೂ ಬೇಡ. ಮನೆಯಲ್ಲೇ ಒಂದು ರೀತಿಯಲ್ಲಿ ಬಂಧಿಯಾಗಿರುವ ಮಕ್ಕಳು ಕೂಡಾ ಇನ್ನೊಂದು ರೀತಿಯಲ್ಲಿ ಮಾನಸಿಕ ಒತ್ತಡ, ಖಿನ್ನತೆಯಿಂದ ಬಳಲಬಹುದು. ಲಾಕ್ ಡೌನ್ ನಡುವೆಯೂ ಮಕ್ಕಳ ಮನಸ್ಸನ್ನು ಪ್ರಫುಲ್ಲವಾಗಿಡಿ. ಯಾಕೆಂದರೆ ಮಕ್ಕಳ ಮನಸು ಸುಕೋಮಲ. ಮಕ್ಕಳನ್ನು ಎಂಗೇಜ್ ಇಡಲು, ಫ್ರೆಶ್ ಆಗಿಡಲು, ಖುಷಿ ಖುಷಿ ಆಗಿಡಲು ಲಾಕ್ ಡೌನ್ ಅವಧಿಯಲ್ಲಿ ಅವರಿಗೆ ಈ 5 ಸಿನೆಮಾಗಳನ್ನು ತೋರಿಸಿ. ಯಾವುದು ಆ 5 ಸಿನೆಮಾ..?
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
ಡಿಸ್ಲೆಕ್ಸಿಯಾ ರೋಗದ ಬಗ್ಗೆ ಈ ಸಿನಿಮಾದಲ್ಲಿ ಹೇಳಲಾಗಿದೆ. ಅಮೀರ್ ಖಾನ್ ಮತ್ತು ದರ್ಶಿಲ್ ಸಫಾರಿ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಮಕ್ಕಳಿಗೆ ಓದಿನಲ್ಲಿ ಮನಸ್ಸಿಲ್ಲದಿದ್ದರೆ ಅವರ ಮೇಲೆ ಒತ್ತಡ ಹಾಕಬೇಡಿ. ಪ್ರೀತಿಯಿಂದ ತಿಳಿಯ ಹೇಳಿ ಎಂದೇ ಈ ಸಿನಿಮಾ ಹೇಳುತ್ತದೆ. ಮಕ್ಕಳಿಗೆ ತುಂಬಾ ಒಳ್ಳೆಯ ಸಿನಿಮಾ. ನೋಡಿದ ಮೇಲೆ ಫ್ರೆಶ್ ಆಗ್ತಾರೆ.
ಈ ಸಿನಿಮಾ ರಿಲೀಸ್ ಆಗಿ 11 ವರ್ಷ ಕಳೆದಿದೆ. ಆದರೂ ಟೀವಿಯಲ್ಲಿ ಬರ್ತಾ ಇದ್ದರೆ ಜನ ಕೆಲಸ ಬಿಟ್ಟು ಅದನ್ನು ನೋಡುತ್ತಾರೆ. ಶಿಕ್ಷಣ ಅಂದರೆ ಕೇವಲ ಬಾಯಿ ಪಾಠ ಮಾಡಿ ಪಾಸ್ ಆಗುವುದಲ್ಲ. ಬದಲಿಗೆ ವಿಷಯವನ್ನು ಅರ್ಥ ಮಾಡಿಕೊಳ್ಳುವುದು ಎಂಬುದನ್ನು ಈ ಫಿಲ್ಮ್ ನಲ್ಲಿ ಚೆನ್ನಾಗಿ ತೋರಿಸಲಾಗಿದೆ. ಮಕ್ಕಳಿಗೆ ಯಾವುದು ಇಷ್ಟವೋ ಅದೇ ವಿಷಯ ಕಲಿಸಿ ಅನ್ನೋದು ಚಿತ್ರದ ಸಾರಾಂಶ. ಮಕ್ಕಳಿಗೆ ಈ ಫಿಲ್ಮ್ ಖಂಡಿತಾ ಮಜಾ ನೀಡಲಿದೆ.
ಈ ಚಿತ್ರವನ್ನು ಖಂಡಿತಾ ಮಕ್ಕಳು ಎಂಜಾಯ್ ಮಾಡುತ್ತಾರೆ. ಸಮಾಜದಲ್ಲಿ ಹರಡಿರುವ ಅಂಧವಿಶ್ವಾಸವನ್ನು ಬಯಲಿಗೆಳೆಯುವುದೇ ಚಿತ್ರದ ಪ್ರಧಾನ ಉದ್ದೇಶ. ಒಂದು ರೀತಿಯ ಕಾಮಿಡಿ ಫಿಲಂ. ಮಕ್ಕಳು ಈ ಚಿತ್ರ ನೋಡಲೇ ಬೇಕು.
ಈ ಚಿತ್ರದಲ್ಲಿ ಸ್ವರ ಭಾಸ್ಕರ ಪ್ರಧಾನ ಭೂಮಿಕೆಯಲ್ಲಿದ್ದಾರೆ. ಈ ಸಿನಿಮಾದಲ್ಲಿ ಒಬ್ಬಳು ತಾಯಿ ಬೇರೊಬ್ಬರ ಮನೆಯಲ್ಲಿ ಚಾಕ್ರಿ ಮಾಡುತ್ತಾ ತನ್ನ ಮಗಳು ಚೆನ್ನಾಗಿ ಓದಿ ಅಧಿಕಾರಿ ಆಗುವ ಸ್ವಪ್ನ ನೋಡುತ್ತಾಳೆ. ಏನೇ ಕಷ್ಟ ಬಂದರೂ ಆಕೆ ಧೈರ್ಯಗೆಡುವುದಿಲ್ಲ. ಮಕ್ಕಳಿಗೆ ಈ ಸಿನಿಮಾ ಫುಲ್ ಇಷ್ಟ ಆಗಬಹುದು. ಕನಸು ಕಾಣುವುದು ಕೂಡಾ ಮಕ್ಕಳಿಗೆ ತೀರಾ ಇಷ್ಟ ಆಗಬಹುದು.
ಇದು ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರ ಜೀವನ ಆಧಾರಿತ ಫಿಲಂ. ಇದರಲ್ಲೊಬ್ಬ ಹುಡುಗ ಕಲಾಂ ಅವರಿಂದ ಸಿಕ್ಕಾಪಟ್ಟೆ ಪ್ರೇರಿತನಾಗಿರುತ್ತಾನೆ. ಅವರಂತೆ ಆಗಲು ಬಯಸುತ್ತಾನೆ. ಸಿನಿಮಾ ರೋಚಕ ಕಥೆ ಒಳಗೊಂಡಿದೆ. ಮಕ್ಕಳಿಗೆ ಖಂಡಿತಾ ಇಷ್ಟ ಆಗುತ್ತದೆ.