ಅತಿಯಾಗಿ ಲಿಪ್‌ಕಿಸ್‌ ಮಾಡುವುದು ಆರೋಗ್ಯಕ್ಕೆ ಹಾನಿಕರ..! ಹೇಗೆ ಗೊತ್ತಾ..?

Lip kiss health benefits : ಹೆಚ್ಚಿನ ಸಮಯ ಕಿಸ್‌ ಮಾಡುವುದರಿಂದ ಅನೇಕ ಅಡ್ಡ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಅಲ್ಲದೆ, ಚುಂಬನದಿಂದ ಈ ಕೆಳಗಿನ ಕಾಯಿಲೆಗಳು ಸಂಭವಿಸುತ್ತವೆ ಎಂದು ಅವರು ಹೇಳುತ್ತಾರೆ. ಈ ಬಗ್ಗೆ ಹೆಚ್ಚಿನ ವಿವರ ಇಲ್ಲಿದೆ ನೋಡಿ..

1 /8

ಕಿಸ್‌ ಭಾವನೆ ವ್ಯಕ್ತಪಡಿಸುವ ಒಂದು ಭಾಷೆ. ಪ್ರೀತಿಯನ್ನು ವ್ಯಕ್ತಪಡಿಸಲು ಇದು ಉತ್ತಮ ಮಾರ್ಗವಾಗಿದೆ. ಅದಕ್ಕಾಗಿಯೇ ಪ್ರೇಮಿಗಳು ಯಾವಾಗಲೂ ಕಿಸ್ ಮಾಡಲು ಕಾಯುತ್ತಿರುತ್ತಾರೆ. ಇದು ಪರಸ್ಪರ ಪ್ರೀತಿಯನ್ನು ವ್ಯಕ್ತಪಡಿಸಲು ಸಹಾಯ ಮಾಡುತ್ತದೆ. ಆದರೂ, ಆಗಾಗ್ಗೆ ಚುಂಬನವು ಅನೇಕ ಅಡ್ಡ ಪರಿಣಾಮಗಳನ್ನು ಹೊಂದಿದೆ.   

2 /8

ಚುಂಬಿಸುವುದರಿಂದ ಪ್ರಯೋಜನಗಳಿರುಷ್ಟು ಅಪಾಯಗಳೂ ಸಹ ಇವೆ ಎನ್ನುತ್ತಾರೆ ಆರೋಗ್ಯ ತಜ್ಞರು. ಆದರೆ ಪದೇ ಪದೇ ಚುಂಬಿಸುವುದರಿಂದ ಅನೇಕ ಸಮಸ್ಯೆಗಳು ಎದುರಿಸಬೇಕಾಗುತ್ತದೆ. ಕಿಸ್ ಮಾಡುವುದರಿಂದ ಆಗುವ ಆರೋಗ್ಯ ಸಮಸ್ಯೆಗಳೇನು ಎಂದು ಈಗ ತಿಳಿಯೋಣ..  

3 /8

ಇತ್ತೀಚಿನ ಅಧ್ಯಯನಗಳು ಹೇಳುವಂತೆ ಶೀತ, ಜ್ವರ ಮತ್ತು ಇತರ ಕಾಯಿಲೆಗಳಿಂದ ಬಳಲುತ್ತಿರುವ ವ್ಯಕ್ತಿಗೆ ಆರೋಗ್ಯವಂತರು ಚುಂಬಿಸಿದರೆ ಆ ರೋಗಗಳು ಇವರಿಗೂ ಬರುವ ಸಾಧ್ಯತೆಯಿದೆ ಎಂದು ಹೇಳುತ್ತವೆ.   

4 /8

ಅಲರ್ಜಿ ಸಮಸ್ಯೆಯಿಂದ ಬಳಲುತ್ತಿರುವವರು ತಮ್ಮ ಸಂಗಾತಿಗೆ ಲಿಪ್ ಕಿಸ್ ನೀಡುವುದರಿಂದ ಅವರಿಗೂ ಆ ರೋಗ ಹರಡುವ ಸಾಧ್ಯತೆ ಇದೆ. ತುರಿಕೆ ಮತ್ತು ಊತದಂತಹ ಸಮಸ್ಯೆಗಳಿಂದ ಬಳಲುತ್ತಿರುವವರು ಚುಂಬಿಸುವಾಗ ಹಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು.    

5 /8

ಚುಂಬಿಸುವುದರಿಂದ ಹಲ್ಲಿನ ಸಮಸ್ಯೆಯೂ ಉಂಟಾಗುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು. ಇದರಿಂದ ಕೆಲವರಲ್ಲಿ ವಸಡಿನ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ.    

6 /8

ಪರಸ್ಪರ ಚುಂಬಿಸುವುದರಿಂದ ತುಟಿ ಮತ್ತು ನಾಲಿಗೆ ಗಾಯವಾಗುವ ಸಾಧ್ಯತೆಗಳೂ ಇವೆ. ಹಾಗಾಗಿ ಹೆಚ್ಚು ಕಿಸ್ ಮಾಡದಿರುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು.     

7 /8

ಕೆಲವು ಜನರು ಅತಿಯಾದ ಚುಂಬನದಿಂದ ಕ್ಲಮೈಡಿಯ ಮತ್ತು ಗೊನೊರಿಯಾದಂತಹ ಲೈಂಗಿಕವಾಗಿ ಹರಡುವ ರೋಗಗಳಿಗೆ ಗುರಿಯಾಗುತ್ತಾರೆ. ಇದರಿಂದ ಹಲವು ರೀತಿಯ ದೀರ್ಘಕಾಲದ ಕಾಯಿಲೆಗಳು ಬರಬಹುದು   

8 /8

ಪರಸ್ಪರ ಚುಂಬಿಸುವುದರಿಂದ ನ್ಯುಮೋನಿಯಾದಂತಹ ಬ್ಯಾಕ್ಟೀರಿಯಾಗಳು ಪ್ರವೇಶಿಸುವ ಸಾಧ್ಯತೆಗಳಿವೆ. ಹಾಗಾಗಿ ದಿನಗಳಲ್ಲಿ ಒಂದೇರಡು ಬಾರಿ ಮಾತ್ರ ಕಿಸ್ ಮಾಡುವುದು ಉತ್ತಮ ಎನ್ನುತ್ತಾರೆ ಆರೋಗ್ಯ ತಜ್ಞರು .