ಗಜಕೇಸರಿಯಂತಹ ಅತ್ಯಂತ ಶುಭ ರಾಜಯೋಗಗಳ ನಿರ್ಮಾಣ, ಆದಿಲಕ್ಷ್ಮಿಯ ಕೃಪೆಯಿಂದ ಅಪಾರ ಧನಪ್ರಾಪ್ತಿಯ ಯೋಗ!

Auspicious Rajyogas In August 2023: ಗ್ರಹಗಳು ಹಾಗೂ ಶುಭ ಯೋಗಗಳ ಲೆಕ್ಕಾಚಾರದಲ್ಲಿ ಆಗಸ್ಟ್ ತಿಂಗಳು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ತ್ರಿಕೋನ ಹಾಗೂ ಗಜಕೇಸರಿ ರಾಜಯೋಗದಂತಹ ಮಹಾ ಶುಭ ಯೋಗಗಳ ನಿರ್ಮಾಣದಿಂದ ಹಲವರ ಅದೃಷ್ಟ ಸೂರ್ಯನಂತೆ ಹೊಳೆಯಲಿದೆ (Spiritual News In Kannada). 
 

ಬೆಂಗಳೂರು: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಆಗಸ್ಟ್ ತಿಂಗಳು ಕೆಲ ಜನರ ಪಾಲಿಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ. ಈ ತಿಂಗಳಿನಲ್ಲಿ ಎರಡು ಅತ್ಯಂತ ಮಹಾ ಶುಭ ರಾಜಯೋಗಗಳು ರೂಪುಗೊಳ್ಳುತ್ತಿವೆ. ಈ ರಾಜಯೋಗಗಳು ಅತ್ಯಂತ ಶುಭಫಲಗಳನ್ನು ನೀಡಲಿವೆ. ಆಗಸ್ಟ್ ತಿಂಗಳಿನಲ್ಲಿ ಕೇಂದ್ರ ತ್ರಿಕೋನ ರಾಜಯೋಗ ಹಾಗೂ ಗಜಕೇಸರಿ ರಾಜಯೋಗಗಳು ನಿರ್ಮಾಣಗೊಳ್ಳಲಿವೆ ಈ ರಾಜಯೋಗಗಳನ್ನು ಅತ್ಯಂತ ಶುಭ ರಾಜಯೋಗಗಳು ಎಂದು ಭಾವಿಸಲಾಗುತ್ತದೆ (Spiritual News In Kannada). ಯಾವ ರಾಶಿಗಳಲ್ಲಿ ಈ ರಾಜಯೋಗಗಳು ನಿರ್ಮಾಣಗೊಳ್ಳುತ್ತಿವೆಯೋ, ಆ ಜಾತಕದ ವ್ಯಕ್ತಿಗಳಿಗೆ ಧನಲಕ್ಷ್ಮಿಯ ಕೃಪಾವೃಷ್ಟಿಯಿಂದ ಜೀವನದಲ್ಲಿ ಪ್ರೀತಿ, ಹಣ, ಸ್ಥಾನಮಾನ, ಪ್ರತಿಷ್ಠೆ ಎಲ್ಲವೂ ಪ್ರಾಪ್ತಿಯಾಗಲಿವೆ. ಹಾಗಾದರೆ ಬನ್ನಿ ಈ ರಾಜಯೋಗಗಳ ನಿರ್ಮಾಣ ಯಾವ ರಾಶಿಗಳ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿವೆ ತಿಳಿದುಕೊಳ್ಳೋಣ, 

 

ಇದನ್ನೂ ಓದಿ-ಸ್ವರಾಶಿಗೆ ಗ್ರಹಗಳ ರಾಜಕುಮಾರನ ಪ್ರವೇಶ, ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಈ ಜನರಿಗೆ ಮಹಾ ಧನ-ಸಂಪತ್ತು ಪ್ರಾಪ್ತಿ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್

1 /5

ಮೇಷ ರಾಶಿ: ಕೇಂದ್ರ ತ್ರಿಕೋನ ರಾಜಯೋಗ ಮೇಷ ರಾಶಿಯ ಜಾತಕದವರಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಈ ಜಾತಕದವರಿಗೆ ಈ ರಾಜಯೋಗ ಅಪಾರ ಧನ ಕರುಣಿಸಲಿದೆ. ಉನ್ನತ ಸ್ಥಾನ, ಪ್ರತಿಷ್ಠೆ ಪ್ರಾಪ್ತಿಯಾಗಲಿದೆ. ಜೀವನದಲ್ಲಿ ಪ್ರೀತಿ ಪ್ರವೇಶಿಸಲಿದೆ. ಸಂಗಾತಿಯ ಜೊತೆಗೆ ನಿಮ್ಮ ಸಂಬಂಧ ಉತ್ತಮವಾಗಿರಲಿದೆ. ಈ ಸಮಯ ನಿಮ್ಮ ಪಾಲಿಗೆ ವರದಾನ ಎಂದರೆ ತಪ್ಪಾಗಲಾರದು.   

2 /5

ಕರ್ಕ ರಾಶಿ: ಕರ್ಕ ರಾಶಿಯ ಜಾತಕದವರಿಗೆ ತ್ರಿಕೋನ ರಾಜಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ವೃತ್ತಿ ಜೀವನದಲ್ಲಿ ಅಪಾರ ಉನ್ನತಿ ಪ್ರಾಪ್ತಿಯಾಗಲಿದೆ. ನೌಕರಿಯಲ್ಲಿ ನಿಮಗೆ ನೀವು ಕೇಳಿದ ಸ್ಥಳಕ್ಕೆ ವರ್ಗಾವಣೆ ಸಿಗಲಿದೆ. ಹೊಸ ಜವಾಬ್ದಾರಿ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವಿಸ್ತರಿಸಲಿದೆ. ಸವಾಲುಗಳು ಬಂದರೂ ಕೂಡ ಅವು ಹೆಚ್ಚು ಕಾಲ ಉಳಿಯುವುದಿಲ್ಲ. ಅತ್ಯಂತ ಸುಲಭವಾಗಿ ನೀವು ಅವುಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಧನ-ಸಂಪತ್ತು ಕೂಡ ಪ್ರಾಪ್ತಿಯಾಗಲಿದೆ.   

3 /5

ತುಲಾ ರಾಶಿ: ತುಲಾ ರಾಶಿಯ ಜನರು ತ್ರಿಕೋನ ರಾಜಯೋಗದ ಪ್ರಭಾವದಿಂದ ಉತ್ತಮ ಲಾಭವನ್ನು ಪಡೆಯಬಹುದು. ಅಪಾರ ಧನಲಾಭದ ಬಲವಾದ ಅವಕಾಶಗಳಿವೆ. ಆದಾಯ ಹೆಚ್ಚಾಗಿ,  ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲಿದೆ. ನೀವು ಖ್ಯಾತಿಯನ್ನು ಪಡೆಯುವಿರಿ. ಜನರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ. ಒಂಟಿಯಾಗಿರುವವರಿಗೆ ಸಂಗಾತಿ ಸಿಗುವ ಸಾಧ್ಯತೆ ಇದೆ. ಹೂಡಿಕೆಗೆ ಸಮಯ ಉತ್ತಮವಾಗಿದೆ.  

4 /5

ಮಕರ ರಾಶಿ: ಮಕರ ರಾಶಿಯವರಿಗೆ ತ್ರಿಕೋನ ರಾಜಯೋಗವು ತುಂಬಾ ಪ್ರಯೋಜನಕಾರಿಯಾಗಿದೆ. ಈ ಅವಧಿಯಲ್ಲಿ ನೀವು ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಆಸ್ತಿಪಾಸ್ತಿ ಖರೀದಿಸಬಹುದು. ಹೂಡಿಕೆಯಿಂದ ಲಾಭವಾಗಲಿದೆ. ಅನಾರೋಗ್ಯದಿಂದ ಮುಕ್ತಿ ದೊರೆತು, ನಿಮ್ಮ ಖ್ಯಾತಿ ಹೆಚ್ಚಾಗಲಿದೆ.   

5 /5

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)