ಭಾರತದಲ್ಲಿರುವ ಈ ವಿಚಿತ್ರ ಸಂಪ್ರದಾಯಗಳ ಬಗ್ಗೆ ತಿಳಿದುಕೊಂಡರೆ ನೀವು ಹೌಹಾರುವುದು ಗ್ಯಾರೆಂಟಿ..!

ಭಾರತದ ಕೆಲವು ಕಡೆಯಂತೂ ತುಂಬಾ ಅಪಾಯಕಾರಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ಭಾರತದಲ್ಲಿನ ವಿಚಿತ್ರವಾದ ಸಂಗತಿಗಳು: ನಾವು 21ನೇ ಶತಮಾನದಲ್ಲಿನ ಅಧುನಿಕ ತಂತ್ರಜ್ಞಾನ ಯುಗದಲ್ಲಿ ಜೀವಿಸುತ್ತಿದ್ದೇವೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಷ್ಟು ಬೆಳವಣಿಗೆಯಾಗಿದ್ದರೂ ಇಂದಿಗೂ ಸಹ ಪ್ರಪಂಚದಾದ್ಯಂತ ಇಂತಹ ವಿಚಿತ್ರ ಪದ್ಧತಿಗಳು ಚಾಲ್ತಿಯಲ್ಲಿವೆ. ಇವುಗಳ ಬಗ್ಗೆ ತಿಳಿದುಕೊಂಡೆರೆ ನಿಮಗೆ ಆರ್ಶರ್ಯವಾಗುತ್ತದೆ. ಇಂತಹ ಅನೇಕ ಸಂಪ್ರದಾಯಗಳನ್ನು ಭಾರತದಲ್ಲಿ ನೀವು ಕಾಣಬಹುದು. ಕೆಲವು ಕಡೆಯಂತೂ ತುಂಬಾ ಅಪಾಯಕಾರಿ ಸಂಪ್ರದಾಯಗಳನ್ನು ಪಾಲಿಸಿಕೊಂಡು ಬರಲಾಗುತ್ತಿದೆ. ಈ ಚಿತ್ರ-ವಿಚಿತ್ರ ಸಂಪ್ರದಾಯಗಳ ಬಗ್ಗೆ ತಿಳಿದರೆ ನಮ್ಮ ದೇಶದಲ್ಲಿ ಈ ರೀತಿಯೂ ನಡೆಯುತ್ತಿದೆಯಾ ಎಂದು ನೀವೇ ಮೂಗಿನ ಮೇಲೆ ಬೆರಳು ಇಡುತ್ತೀರಿ. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ತಮಿಳುನಾಡಿನಲ್ಲಿ ವಿಚಿತ್ರವಾದ ಹಬ್ಬವೊಂದನ್ನು ಆಚರಿಸಲಾಗುತ್ತಿದೆ. ಇಲ್ಲಿನ ಭಕ್ತರು ತಮ್ಮ ಚರ್ಮವನ್ನು ಚೂಪಾದ ಕಬ್ಬಿಣದ ಉಂಗುರಗಳಿಂದ ಚುಚ್ಚುಸಿಕೊಳ್ಳುತ್ತಾರೆ. ನಂತರ ಅದರ ಮೂಲಕ ಭಾರವಾದ ವಸ್ತುಗಳನ್ನು ಎಳೆಯುತ್ತಾರೆ. ಕೆಲವು ಜನರು ತಮ್ಮ ದೇಹದಲ್ಲಿ ಸೂಜಿಗಳನ್ನು ಚುಚ್ಚುಸಿಕೊಳ್ಳುತ್ತಾರೆ. ಈ ಹಬ್ಬದ ಹೆಸರು ಥೈಪುಸಂ. ಥೈಪುಸಂ 48 ದಿನಗಳವರೆಗೆ ಆಚರಿಸುವ ವಿಶಿಷ್ಟ ಹಬ್ಬವಾಗಿದೆ.    

2 /5

ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಮಕ್ಕಳನ್ನು ಎತ್ತರದಿಂದ ಎಸೆಯುವ ವಿಚಿತ್ರ ಪದ್ಧತಿ ಇದೆ. ಪ್ರಸಿದ್ಧ ಬಾಬಾ ಉಮರ್ ಅವರ ದರ್ಗಾ ಇಲ್ಲಿದೆ. ಇಲ್ಲಿ ಯಾರಿಗಾದರೂ ಮಗು ಹೊಂದುವ ಬಯಕೆ ಈಡೇರಿದರೆ, ಅವರು ತಮ್ಮ ಮಗುವನ್ನು ಎತ್ತರದಿಂದ ಎಸೆಯುತ್ತಾರೆ. ಇತರರು ಎತ್ತರದಿಂದ ಎಸೆದ ಮಗುವನ್ನು ಹಿಡಿಯಲು ಪ್ರಯತ್ನಿಸುತ್ತಾರೆ. ಇದು ಅನೇಕ ವರ್ಷಗಳಿಂದ ನಡೆದುಕೊಂಡು ಬಂದಿರುವ ಸಂಪ್ರದಾಯವಾಗಿದೆ.

3 /5

ಹಿಂದೂ ಧರ್ಮದಲ್ಲಿ ಹೆಚ್ಚಿನ ಜನರು ಜಾತಕಗಳನ್ನು ನೋಡಿ  ಮದುವೆಯಾಗುತ್ತಾರೆ. ಜಾತಕದಲ್ಲಿ ಮಂಗಳಿಕ ದೋಷ ಹೊಂದಿರುವ ಜನರಿಗೆ ಮದುವೆ ತುಂಬಾ ಕಷ್ಟಕರವಾಗುತ್ತದೆ. ಈ ದೋಷವನ್ನು ಹೋಗಲಾಡಿಸಲು ಅವರು ನಾಯಿ ಅಥವಾ ಇನ್ನಾವುದೇ ಪ್ರಾಣಿಯನ್ನು ಮದುವೆಯಾಗಬೇಕು. ಇನ್ನು ಕೆಲವು ಕಡೆ ಮರಗಳನ್ನು ಮದುವೆಯಾಗುವ ಪದ್ಧತಿಯೂ ಜಾರಿಯಲ್ಲಿದೆ.

4 /5

ರಾಜಸ್ಥಾನದ ಜೋಧಪುರದಲ್ಲಿ ಈ ವಿಶಿಷ್ಟ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದ ಹೆಸರು ಧಿಂಗ ಗವರ್. ಇದರಲ್ಲಿ ಮಹಿಳೆಯರು ದೇವರ ರೂಪವನ್ನು ಪಡೆಯುತ್ತಾರೆ. ಈ ಸಂದರ್ಭದಲ್ಲಿ ಮೆರವಣಿಗೆಯನ್ನು ಸಹ ಆಯೋಜಿಸಲಾಗುತ್ತದೆ. ಜಾತ್ರೆಯನ್ನು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಇಲ್ಲಿಗೆ ಬರುತ್ತಾರೆ.

5 /5

ಕರ್ನಾಟಕ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ನಾಗರ ಪಂಚಮಿ ಹಬ್ಬವನ್ನು ಆಚರಿಸಲಾಗುತ್ತದೆ. ಹಾವುಗಳನ್ನು ದೇವರ ರೂಪದಲ್ಲಿ ಕಂಡು ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಮಹಿಳೆಯರು ನಾಗರ ಪಂಚಮಿಯಂದು ಹುತ್ತಕ್ಕೆ ಹಾಲು ಎರೆದು ಪೂಜಿಸುತ್ತಾರೆ. ಹಿಂದೂ ಧರ್ಮದ ಜನರು ಈ ಹಬ್ಬವನ್ನು ಆಚರಿಸುತ್ತಾರೆ.