Health Tips: ನಿಮಗೂ ಅಧಿಕ ರಕ್ತದೊತ್ತಡ ಹಾಗೂ ಆತಂಕದ ಸಮಸ್ಯೆ ಇದೆಯಾ, ಖಾಲಿ ಹೊಟ್ಟೆ ಈ ಒಂದು ಹಣ್ಣು ಸೇವಿಸಿ!

Avocado Health Benefits: ನಿಮಗೂ ಒಂದು ವೇಳೆ ಅಧಿಕ ರಕ್ತದೊತ್ತಡ ಮತ್ತು ಆತಂಕದ ಸಮಸ್ಯೆಗಳಿದ್ದರೆ, ಅವುಗಳನ್ನು ತೊಡೆದುಹಾಕಲು ನೀವು ಆವಕಾಡೊ ಹಣ್ಣನ್ನು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಬಹುದು. ಇದರಿಂದ ನೀವು ಹಲವು ಪ್ರಯೋಜನಗಳನ್ನು ಪಡೆಯುತ್ತೀರಿ.
 

Avocado Health Benefits: ಇಂದಿನ ಧಾವಂತದ ಜೀವನದಲ್ಲಿ  ಒತ್ತಡದ ಜೀವನಶೈಲಿ ಮತ್ತು ಅಸಮರ್ಪಕ ಆಹಾರ ಪದ್ಧತಿಯಿಂದಾಗಿ ಜನರಲ್ಲಿ ಅಧಿಕ ರಕ್ತದೊತ್ತಡ ಮತ್ತು ಆತಂಕದ ಸಮಸ್ಯೆ ಹೆಚ್ಚುತ್ತಿದೆ. ಪ್ರತಿ ವಿಚಾರಕ್ಕೂ ಸಿಟ್ಟು ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಬಿಪಿ ಸಮಸ್ಯೆ ಚಿಕ್ಕಂದಿನಿಂದಲೇ ಜನರನ್ನು ಕಾಡಲಾರಂಭಿಸಿದೆ. ಇಂತಹ ಪರಿಸ್ಥಿತಿಯಲ್ಲಿ ಮನಸ್ಸನ್ನು ತಂಪಾಗಿಡುವ ಈ ಹಣ್ಣಿನ ಸೇವನೆಯಿಂದ ನಿಮ್ಮ ಬಿಪಿ-ಆತಂಕದಂತಹ ಸಮಸ್ಯೆಗಳನ್ನು ನೀವು ಕಡಿಮೆ ಮಾಡಿಕೊಳ್ಳಬಹುದು. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಆವಕಾಡೊ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನೂ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Diabetes ರೋಗಿಗಳಿಗೆ ಒಂದು ಪರಿಣಾಮಕಾರಿ ಮನೆಮದ್ದು ಈ ಚಿರೋಂಜಿ ಮಿಲ್ಕ್!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /3

1. ಅಧಿಕ ಬಿಪಿ ಸಮಸ್ಯೆಯಲ್ಲಿ ಆವಕಾಡೊ ಸೇವಿಸಿ - ಅಧಿಕ ರಕ್ತದೊತ್ತಡದ ಸಮಸ್ಯೆಯಲ್ಲಿ, ಆವಕಾಡೊ ಸೇವನೆಯು ತುಂಬಾ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಆವಕಾಡೊಗಳು ಒಲೀಕ್ ಆಮ್ಲದಿಂದ ಸಮೃದ್ಧವಾಗಿವೆ, ಇದು ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಆವಕಾಡೊ ಪೊಟ್ಯಾಸಿಯಮ್ ಮತ್ತು ಫೋಲೇಟ್ನಲ್ಲಿ ಸಮೃದ್ಧವಾಗಿದೆ, ಇವೆರಡೂ ಹೃದಯದ ಆರೋಗ್ಯಕ್ಕೆ ತುಂಬಾ ಉಪಯುಕ್ತವಾಗಿವೆ. ಈ ಎಲ್ಲಾ ಪ್ರಯೋಜನಗಳ ಹಿನ್ನೆಲೆ, ನೀವು ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಆವಕಾಡೊವನ್ನು ಸೇವಿಸಬೇಕು.  

2 /3

2. ಆವಕಾಡೊ ಹೊಟ್ಟೆಯ ಆರೋಗ್ಯಕ್ಕೆ ಉತ್ತಮವಾಗಿದೆ - ಆವಕಾಡೊ ಸೇವನೆಯು ಹೊಟ್ಟೆಯ ಚಯಾಪಚಯ ದರವನ್ನು ಹೆಚ್ಚಿಸಲು ಬಹಳ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಇದು ನಿಮ್ಮ ಹೊಟ್ಟೆಯಲ್ಲಿ ಪಿತ್ತರಸವನ್ನು ಉತ್ತೇಜಿಸುವುದರ ಜೊತೆಗೆ ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತದೆ. ಇದು ಹೊಟ್ಟೆಯ ಚಯಾಪಚಯ ದರವನ್ನು ಹೆಚ್ಚಿಸುತ್ತದೆ ಮತ್ತು ಬೊಜ್ಜು ನಿಯಂತ್ರಣದಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಇದರೊಂದಿಗೆ ಬೆಳಗ್ಗೆ  ಖಾಲಿ ಹೊಟ್ಟೆಯಲ್ಲಿ ಇದನ್ನು ತಿನ್ನುವುದರಿಂದ ಹೊಟ್ಟೆಯ ಪಿಹೆಚ್ ಸಮತೋಲನವನ್ನು ಇದು ಕಾಪಾಡುತ್ತದೆ ಮತ್ತು ಅಸಿಡಿಟಿ ಸಮಸ್ಯೆಗಳು ಉಂಟಾಗುವುದಿಲ್ಲ.  

3 /3

3. ಆತಂಕವನ್ನು ಕಡಿಮೆ ಮಾಡಲು ಸಹಾಯಕವಾಗಿದೆ- ಖಾಲಿ ಹೊಟ್ಟೆಯಲ್ಲಿ ಆವಕಾಡೊ ತಿನ್ನುವುದರಿಂದ ಮೆದುಳಿನ ಕಾರ್ಯವು ಸುಧಾರಿಸುತ್ತದೆ. ವಾಸ್ತವದಲ್ಲಿ ಇದರಲ್ಲಿರುವ  ನಿರೋಧಕಗಳು ನಿಮ್ಮ ಮಾನಸಿಕ ಚಟುವಟಿಕೆಗಳನ್ನು ಸುಧಾರಿಸುತ್ತದೆ ಮತ್ತು ನರಗಳ ಚಟುವಟಿಕೆಗಳನ್ನು ಸರಿಪಡಿಸುತ್ತದೆ. ಇದರಿಂದ ನೀವು ಉತ್ತಮ ಭಾವನೆ ಹೊಂದುತ್ತೀರಿ ಮತ್ತು ನೀವು ಮಾನಸಿಕವಾಗಿ ಶಾಂತರಾಗುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)