Ratha Saptami: ಇಂದು ಅಂದರೆ ಫೆಬ್ರವರಿ 16, ಶುಕ್ರವಾರ ರಥ ಸಪ್ತಮಿಯನ್ನು ಆಚರಿಸಲಾಗುತ್ತಿದೆ. ಇದನ್ನು ಅಚಲ ಸಪ್ತಮಿ ಎಂತಲೂ ಕರೆಯಲಾಗುತ್ತದೆ. ಈ ದಿನ ಸೂರ್ಯ ದೇವನು ಕೆಲವು ರಾಶಿಯವರಿಗೆ ವಿಶೇಷ ಅನುಗ್ರಹವನ್ನು ನೀಡಲಿದ್ದಾನೆ ಎಂದು ನಂಬಲಾಗಿದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿ ವರ್ಷ ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮಿ ತಿಥಿಯಂದು ರಥಸಪ್ತಮಿಯನ್ನು ಆಚರಿಸಲಾಗುತ್ತದೆ. ರಥಸಪ್ತಮಿಯನ್ನು ಅಚಲ ಸಪ್ತಮಿ ಅಥವಾ ಆರೋಗ್ಯ ಸಪ್ತಮಿ ಎಂತಲೂ ಕರೆಯಲಾಗುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ರಥಸಪ್ತಮಿಯ ದಿನದಂದು ಸೂರ್ಯನ ಮೊದಲ ಕಿರಣವು ಭೂಮಿಯ ಮೇಲೆ ಬಿದ್ದಿತು ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ರಥಸಪ್ತಮಿಯ ದಿನ ಸೂರ್ಯ ದೇವರಿಗೆ ಅರ್ಘ್ಯವನ್ನು ಅರ್ಪಿಸಿ ಪೂಜಿಸುವುದರಿಂದ ವ್ಯಕ್ತಿಯು ರೋಗಗಳಿಂದ ಮುಕ್ತಿ ಪಡೆಯುತ್ತಾರೆ. ಆತ್ಮಸ್ಥೈರ್ಯ ಹೆಚ್ಚುತ್ತದೆ. ವೃತ್ತಿಯಲ್ಲಿ ಪ್ರಗತಿಯನ್ನು ಕಾಣುತ್ತಾನೆ ಎಂದು ನಂಬಲಾಗಿದೆ.
ಈ ವರ್ಷ ಇಂದು ಅಂದರೆ ಫೆಬ್ರವರಿ 16, ಶುಕ್ರವಾರ ರಥ ಸಪ್ತಮಿಯನ್ನು ಆಚರಿಸಲಾಗುತ್ತಿದೆ. ಈ ವರ್ಷ ರಥಸಪ್ತಮಿ ತಿಥಿ ಫೆಬ್ರವರಿ 15 ರಂದು ಬೆಳಿಗ್ಗೆ 10.12 ರಿಂದ ಫೆಬ್ರವರಿ 16 ರ ಬೆಳಿಗ್ಗೆ 8.55 ರವರೆಗೆ ಇದೆ.
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಈ ವರ್ಷ ರಥಸಪ್ತಮಿಯಂದು ಗ್ರಹಗಳ ರಾಜ ಸೂರ್ಯದೇವನು ಕೆಲವು ರಾಶಿಯವರಿಗೆ ವಿಶೇಷ ಕೃಪೆ ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ನೋಡುವುದಾದರೆ...
ಮೇಷ ರಾಶಿ: ಈ ರಥ ಸಪ್ತಮಿಯು ಮೇಷ ರಾಶಿಯ ಜನರಿಗೆ ಅತ್ಯಂತ ಮಂಗಳಕರ ಎಂದು ಸಾಬೀತುಪಡಿಸಲಿದೆ. ಈ ವೇಳೆ ಮೇಷ ರಾಶಿಯವರು ಸೂರ್ಯನ ಆಶೀರ್ವಾದಿಂದ ವ್ಯಾಪಾರದಲ್ಲಿ ಲಾಭ, ವಿದೇಶ ಪ್ರವಾಸ ಯೋಗವನ್ನು ಪಡೆಯಬಹುದು.
ಮಿಥುನ ರಾಶಿ: ಈ ವರ್ಷದ ರಥಸಪ್ತಮಿಯು ಮಿಥುನ ರಾಶಿಯವರಿಗೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. ಈ ವೇಳೆ ಮಿಥುನ ರಾಶಿಯ ಜಂರು ವ್ಯಾಪಾರ-ವ್ಯವಹಾರದಲ್ಲಿ ಅನುಕೂಲಕರ ಸಮಯವನ್ನು ಪಡೆಯುವರು. ಕುಟುಂಬದಲ್ಲಿ ತಲೆದೂರಿದ್ದ ಕೌಟುಂಬಿಕ ಬಿಕ್ಕಟ್ಟಿನಿಂದ ಪರಿಹಾರ ದೊರೆಯಲಿದೆ.
ಕರ್ಕಾಟಕ ರಾಶಿ: ಸೂರ್ಯ ದೇವನ ಕೃಪೆಯಿಂದಾಗಿ ಕರ್ಕಾಟಕ ರಾಶಿಯ ಸ್ಪರ್ಧಾತ್ಮಕ ಪರೀಕ್ಷೆ ಅಥವಾ ಸಂದರ್ಶನಕ್ಕೆ ತಯಾರಿ ನಡೆಸುತ್ತಿರುವ ಜನರಿಗೆ ಯಶಸ್ಸು ಸಿಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಸಾಧ್ಯತೆ ಇದ್ದರೆ, ಹೊಸ ವ್ಯವಹಾರವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಉತ್ತಮ ಸಮಯ.
ಸಿಂಹ ರಾಶಿ: ರಥಸಪ್ತಮಿಯಲ್ಲಿ ಸೂರ್ಯದೇವನ ಅನುಗ್ರಹದಿಂದಾಗಿ ಸಿಂಹ ರಾಶಿಯ ಜನರು ನಿಮ್ಮ ಇಷ್ಟು ದಿನಗಳ ಸಮಸ್ಯೆಗಳಿಂದ ಮುಕ್ತಿಯನ್ನು ಪಡೆಯುವಿರಿ. ವೃತ್ತಿ ಜೀವನದಲ್ಲಿ ಪ್ರಗತಿ ಕಂಡುಬರಲಿದೆ. ವಿದ್ಯಾರ್ಥಿಗಳಿಗೆ ಪ್ರಯತ್ನಕ್ಕೆ ತಕ್ಕ ಪ್ರತಿಫಲ ದೊರೆಯುತ್ತದೆ.
ಮೀನ ರಾಶಿ: ಈ ವರ್ಷ ರಥಸಪ್ತಮಿಯಲ್ಲಿ ಸೂರ್ಯ ದೇವನ ಆಶೀರ್ವಾದೈಂದ ಮೀನ ರಾಶಿಯ ಜನರು ಪ್ರತಿ ಕೆಲಸದಲ್ಲೂ ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುತ್ತಾರೆ. ಉದ್ಯೋಗ ಕ್ಷೇತ್ರದಲ್ಲಿ ನೀವು ಬಹು ದಿನಗಳಿಂದ ಬಯಸುತ್ತಿದ್ದ ಬದಲಾವಣೆಯನ್ನು ಕಾಣಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.