ಬೆಂಗಳೂರು : ಸುಂದರವಾಗಿ ಕಾಣಬೇಕು ಎನ್ನುವುದು ಪ್ರತಿಯೊಬ್ಬರ ಆಸೆ. ಅದಕ್ಕಾಗಿಯೇ ಸಾಕಷ್ಟು ಹಣ ಮೀಸಲಿಡುವವರು ಕೂಡಾ ಇದ್ದಾರೆ. ಸುಂದರವಾಗಿ ಕಾಣಬೇಕು ಎನ್ನುವಾಗ ಕೂದಲಿನ ಸೌಂದರ್ಯ ಕೂಡಾ ಬಹಳ ಮುಖ್ಯವಾಗುತ್ತದೆ. ಮುಖದ ಸೌಂದರ್ಯದಲ್ಲಿ ಕೂದಲು ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಇತ್ತೀಚಿನ ದಿನಗಳಲ್ಲಿ 20 ರಿಂದ 25 ವರ್ಷ ವಯಸ್ಸಿನಲ್ಲೇ ಬಿಳಿ ಕೂದಲು ಮೂಡುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ.
ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ಚಹಾ ಎಲೆಗಳನ್ನು ಬಳಸಿ. ಇದು ಬಿಳಿ ಕೂದಲನ್ನು ಥಟ್ ಅಂತ ಕಪ್ಪಾಗಿಸುತ್ತದೆ. ಕೂದಲಿಗೆ ಚಹಾವನ್ನು ಬಳಸುವುದು ಬಹಳ ಸುಲಭ.
ಚಹಾ ಎಲೆಗಳು ನೈಸರ್ಗಿಕ ಕಪ್ಪು ಬಣ್ಣವನ್ನು ಹೊಂದಿರುತ್ತವೆ. ಅದರ ಸಹಾಯದಿಂದ ಬಿಳಿ ಕೂದಲನ್ನು ತೊಡೆದುಹಾಕಲು ಸುಲಭವಾಗುತ್ತದೆ.
ಕೂದಲಿಗೆ ಚಹಾ ಎಲೆಗಳನ್ನು ಬಳಸುವುದು ಹೇಗೆ? : ಚಹಾ ಪುಡಿಯನ್ನು ನೇರವಾಗಿ ಕೂದಲಿಗೆ ಹಚ್ಚುವಂತಿಲ್ಲ. ಬದಲಿಗೆ ಅದನ್ನು ಕುಡಿಸಿದ ನೀರನ್ನು ಕೂದಲಿಗೆ ಬಳಸಬೇಕು.
ಇದಕ್ಕಾಗಿ ಗ್ಯಾಸ್ ಸ್ಟೌವ್ ಮೇಲೆ ಒಂದು ಪಾತ್ರೆಯಲ್ಲಿ ನೀರನ್ನು ತೆಗೆದುಕೊಂಡು ಅದನ್ನು ಕುದಿಸಿ. ನಂತರ ಅದರಲ್ಲಿ 4 ರಿಂದ 5 ಟೀ ಚಮಚ ಚಹಾ ಪುಡಿ ಹಾಕಿ, 5 ನಿಮಿಷಗಳವರೆಗೆ ಕುದಿಸಿ.
ಇದರ ಪರಿಣಾಮ ಇನ್ನೂ ಹೆಚ್ಚಾಗಬೇಕಾದರೆ 1 ಕಪ್ ಕಾಫಿಯನ್ನು ಮಿಶ್ರಣ ಮಾಡಿ. ಈ ಎರಡೂ ಮಿಶ್ರಣವನ್ನು ಚೆನ್ನಾಗಿ ಕುದಿಸಿ. ನೀರು ಮೊದಲಿಗಿಂತ ಅರ್ಧದಷ್ಟು ಆಗುವವರೆಗೆ ಕುದಿಸಿ.
ಈಗ ಈ ಟೀ ನೀರಿನಿಂದ ಕೂದಲನ್ನು ತೊಳೆಯಿರಿ. ಆದರೆ ನೆನೆಪಿರಲಿ ಈ ಸಂದರ್ಭದಲ್ಲಿ ಶಾಂಪೂ ಅಥವಾ ಸೋಪು ಹಚ್ಚಬಾರದು. ಈ ಪ್ರಕ್ರಿಯೆಯನ್ನು ವಾರಕ್ಕೆ ಎರಡು ಬಾರಿ ಪ್ರಯತ್ನಿಸಬಹುದು. ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)