ಈ ರೆಸಾರ್ಟ್‌ನ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ? ಹಾಗಿದ್ರೆ, ಬಾಡಿಗೆ ಎಷ್ಟು? ಅಲ್ಲಿರುವ ಸೌಲಭ್ಯಗಳು ಏನು?
IND vs PAK Asia Cup 2022 : ಏಷ್ಯಾ ಕಪ್ 2022 ಆತಿಥೇಯ ಶ್ರೀಲಂಕಾದಲ್ಲಿ ನಡೆಯಲಿದೆ. ಈ ಬೃಹತ್ ಟೂರ್ನಿಗಾಗಿ ಎಲ್ಲಾ ತಂಡಗಳು ತಯಾರಿಯಲ್ಲಿ ನಿರತವಾಗಿವೆ. ಟೀಂ ಇಂಡಿಯಾ ತನ್ನ ಮೊದಲ ಪಂದ್ಯವನ್ನು ಆಗಸ್ಟ್ 28 ರಂದು ಆಡಲಿದೆ. ಟೀಂ ಇಂಡಿಯಾದ ಎಲ್ಲಾ ಪಂದ್ಯಗಳು ದುಬೈನಲ್ಲಿ ನಡೆಯಲಿವೆ. ಹೀಗಾಗಿ, ಟೀಂ ಇಂಡಿಯಾಗೆ ದುಬೈನ ಐಷಾರಾಮಿ ರೆಸಾರ್ಟ್‌ನಲ್ಲಿ ವಸತಿ ಕಲ್ಪಿಸಲಾಗಿದೆ. ಈ ರೆಸಾರ್ಟ್‌ನ ಒಂದು ದಿನದ ಬಾಡಿಗೆ ಕೇಳಿದ್ರೆ ಶಾಕ್ ಆಗ್ತೀರಾ? ಹಾಗಿದ್ರೆ, ಬಾಡಿಗೆ ಎಷ್ಟು? ಅಲ್ಲಿರುವ ಸೌಲಭ್ಯಗಳು ಏನು?
ಏಷ್ಯಾಕಪ್‌ಗಾಗಿ ಟೀಂ ಇಂಡಿಯಾವನ್ನು ಇತರ ಎಲ್ಲ ತಂಡಗಳಿಂದ ಪ್ರತ್ಯೇಕವಾಗಿ ಇರಿಸಲಾಗಿದೆ. ದುಬೈ ತಲುಪಿರುವ ಟೀಂ ಇಂಡಿಯಾ ಸದ್ಯ ಪಾಮ್ ಜುಮೇರಾ ರೆಸಾರ್ಟ್‌ನಲ್ಲಿ ತಂಗಿದೆ.
ಪಾಮ್ ಜುಮೇರಾ ರೆಸಾರ್ಟ್ ಮನರಂಜನಾ ಮೂಲಗಳಿಂದ ತುಂಬಿದೆ. ಹೋಟೆಲ್ ಒಳಗೆಯೇ 3ಡಿ, 4ಡಿಎಕ್ಸ್ ಥಿಯೇಟರ್‌ಗಳಿವೆ. ರೆಸಾರ್ಟ್ ಒಳಗೆ ಶಾಪಿಂಗ್ ಮಾಡಲು ಸಾಕಷ್ಟು ಅಂಗಡಿಗಳಿವೆ. ಈ ರೆಸಾರ್ಟ್‌ನಿಂದ ಇಡೀ ನಗರದ ಸುಂದರ ನೋಟವನ್ನು ನೋಡಬಹುದು.
ಪಾಮ್ ಜುಮೇರಾ ರೆಸಾರ್ಟ್ ವಿಶ್ವದ ಅತ್ಯಂತ ಐಷಾರಾಮಿ ಹೋಟೆಲ್‌ಗಳಲ್ಲಿ ಒಂದಾಗಿದೆ. ಹೋಟೆಲ್ ತನ್ನದೇ ಆದ ಬೀಚ್ ಅನ್ನು ಸಹ ಹೊಂದಿದೆ, ಅದು ಅದರ ಮುಂಭಾಗದಲ್ಲಿದೆ. ಟೀಂ ಇಂಡಿಯಾ ಹೊರತುಪಡಿಸಿ ಉಳಿದೆಲ್ಲ ತಂಡಗಳಿಗೆ ಬಿಸಿನೆಸ್ ಬೇ ಹೋಟೆಲ್ ನಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ.
ಪಾಮ್ ಜುಮೇರಾ ರೆಸಾರ್ಟ್‌ನಲ್ಲಿ ಒಂದು ದಿನದ ತಂಗಲು ಬಾಡಿಗೆ ಕನಿಷ್ಠ 30,000 ರೂ. ಮತ್ತು ಸೀಸನ್ ನಲ್ಲಿ ಅದು 50-80 ಸಾವಿರ ತಲುಪುತ್ತದೆ. ಟಿ20 ವಿಶ್ವಕಪ್ ವೇಳೆ ಟೀಂ ಇಂಡಿಯಾ ಕೂಡ ಇದೇ ಹೋಟೆಲ್ ನಲ್ಲಿ ತಂಗಿತ್ತು.
ಟೀಂ ಇಂಡಿಯಾವನ್ನು ಹೊರತುಪಡಿಸಿ, ಶ್ರೀಲಂಕಾ, ಪಾಕಿಸ್ತಾನ, ಬಾಂಗ್ಲಾದೇಶ, ಅಫ್ಘಾನಿಸ್ತಾನ ಮತ್ತು ಹಾಂಗ್ ಕಾಂಗ್ ತಂಡಗಳು ಏಷ್ಯಾ ಕಪ್ 2022 ರಲ್ಲಿ ಭಾಗವಹಿಸುತ್ತಿವೆ. ಏಷ್ಯಾ ಕಪ್ 2022 ರ ಮೊದಲ ಪಂದ್ಯ ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯಲಿದೆ.