ಬಹಳ ಅಸೂಯೆ ಪಡುವವರಾಗಿರುತ್ತಾರೆ ಈ 5 ರಾಶಿಯವರು, ನಿಮ್ಮ ಸುತ್ತ ಇದ್ದಾರೆಯೇ ಒಮ್ಮೆ ನೋಡಿಕೊಳ್ಳಿ

ನಿಮ್ಮ ಮುಂದೆ ಹಿತೈಷಿಗಳಂತೆ ವರ್ತಿಸುವವರು ಹಿಂದೆ ಬೇರೆಯೇ ರೀತಿ ಇರಬಹುದು. ಕೆಲವು ಜನರು ನಿಮ್ಮ ಸಂತೋಷ ಅಥವಾ ಯಶಸ್ಸನ್ನು ಇಷ್ಟಪಡುವುದಿಲ್ಲ.

ನವದೆಹಲಿ: ಜ್ಯೋತಿಷ್ಯ ಶಾಸ್ತ್ರದಲ್ಲಿ ಪ್ರತಿಯೊಂದು ರಾಶಿಯ ಜನರ ಗುಣಲಕ್ಷಣಗಳನ್ನು ಹೇಳಲಾಗಿದೆ. ಆ ಗುಣಲಕ್ಷಣಗಳು ಒಳ್ಳೆಯದ್ದೂ ಆಗಿರಬಹುದು, ಕೆಟ್ಟದ್ದೂ ಆಗಿರಬಹುದು. ಅವುಗಳ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು. ನಿಮ್ಮ ಮುಂದೆ ಹಿತೈಷಿಗಳಂತೆ ವರ್ತಿಸುವವರು ಹಿಂದೆ ಬೇರೆಯೇ ರೀತಿ ಇರಬಹುದು. ಕೆಲವು ಜನರು ನಿಮ್ಮ ಸಂತೋಷ ಅಥವಾ ಯಶಸ್ಸನ್ನು ಇಷ್ಟಪಡುವುದಿಲ್ಲ. ನಾವು ಅಂತಹ ರಾಶಿಚಕ್ರದ ಚಿಹ್ನೆಗಳ ಬಗ್ಗೆ ಹೇಳಲಿದ್ದೇವೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

1 /5

ವೃಷಭ ರಾಶಿಯ ಜನರು ತುಂಬಾ ಶ್ರಮಜೀವಿಗಳಾಗಿದ್ದು ತಮ್ಮ ಶ್ರಮಕ್ಕೆ ತಕ್ಕ ಫಲ ಸಿಗದೇ ಇದ್ದಾಗ ಅವರಲ್ಲಿ ಅಸೂಯೆಯ ಭಾವ ಮೂಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಇತರರ ಬಗ್ಗೆ ಅಸೂಯೆ ಪಟ್ಟುಕೊಂಡು ಅವರ ಅದೃಷ್ಟವನ್ನು ಶಪಿಸುತ್ತಾರೆ. 

2 /5

ಕನ್ಯಾರಾಶಿ ಜನರು ತುಂಬಾ ಕರುಣಾಮಯಿಯಾಗಿದ್ದರೂ, ಕೆಲವೊಮ್ಮೆ ಅವರು ಅಸೂಯೆಗೆ ಬಲಿಯಾಗುತ್ತಾರೆ. ಪರಿಪೂರ್ಣತೆಯ ವಿಷಯದಲ್ಲಿ ಯಾರಾದರೂ ಅವರನ್ನು ಮೀರಿಸಿದಾಗ ಹೀಗಾಗುತ್ತದೆ.    

3 /5

ವೃಶ್ಚಿಕ ರಾಶಿಯ ಜನರು ಇನ್ನೊಬ್ಬರ ಬಗ್ಗೆ ಸುಲಭವಾಗಿ ಅಸೂಯೆ ಪಡುತ್ತಾರೆ.  ತಮ್ಮ ಆಸೆ ಈಡೇರದಿದ್ದಾಗ, ಯಶಸ್ಸು ಹೊಂದಿದವರ ಬಗ್ಗೆ ಅವರು ಅಸೂಯೆ ಪಡುತ್ತಾರೆ. ಮಾತ್ರವಲ್ಲ ಅವರನ್ನು ಹಿಂದಕ್ಕೆ ಹಾಕಲು ನಾನಾ ತಂತ್ರಗಳನ್ನು ಬಳಸುತ್ತಾರೆ. 

4 /5

ಮಕರ ರಾಶಿಯವರು ತಮ್ಮ ಸಂತೋಷಕ್ಕಾಗಿ ಯಾವಾಗಲೂ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಾರೆ. ಆದರೆ ಅವರಿಗೆ ಆ ಸುಖ ಸಿಗದಿದ್ದಾಗ, ಇತರರ ಸಂತೋಷವನ್ನು ಕಂಡು  ಅಸೂಯೆ ಪಡುತ್ತಾರೆ. ಇತರರ ಸಂತೋಷ ಮತ್ತು ಯಶಸ್ಸನ್ನು ಸಹಿಸಿಕೊಳ್ಳುವುದು ಅವರಿಗೆ ಸಾಧ್ಯವಾಗುವುದಿಲ್ಲ.

5 /5

ಧನು ರಾಶಿಯ ಜನರು ಇತರರ ಯಶಸ್ಸಿನ ಬಗ್ಗೆ ತುಂಬಾ ಅಸೂಯೆಪಡುತ್ತಾರೆ. ಅವರು ತಮ್ಮನ್ನು ಬಿಟ್ಟು ಬೇರೆ ಯಾರ ಯಶಸ್ಸನ್ನೂ ನೋಡಲು ಇಷ್ಟಪಡುವುದಿಲ್ಲ. ಈ ಜನರೊಂದಿಗೆ ನಿಮ್ಮ ಸಂತೋಷ ಮತ್ತು ಯಶಸ್ಸನ್ನು ಹಂಚಿಕೊಳ್ಳುವುದು ದೊಡ್ಡ ತಪ್ಪು.