ಟೀಂ ಇಂಡಿಯಾದ ಸ್ಟಾರ್ ಸ್ಪಿನ್ನರ್ ಅಕ್ಷರ್ ಪಟೇಲ್ ತಮ್ಮ ಮಾಂತ್ರಿಕ ಬೌಲಿಂಗ್ಗೆ ಹೆಸರುವಾಸಿಯಾಗಿದ್ದಾರೆ. ತನ್ನ ಬೌಲಿಂಗ್ಗೆ ಯಾವುದೇ ಬ್ಯಾಟ್ಸ್ಮ್ಯಾನ್ಗಳು ಭಯಪಡುವಂತೆ ಆಡುವ ಪ್ರತಿಭೆ ಅಕ್ಷರ್ ಪಟೇಲ್ಗಿದೆ. ಇನ್ನೊಂದೆಡೆ ಅಕ್ಷರ್ ಪಟೇಲ್ ತಮ್ಮ ವೈಯಕ್ತಿಕ ಜೀವನಕ್ಕೂ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಆಚರಿಸಿಕೊಂಡ ತಮ್ಮ ಬರ್ತ್ ಡೇ ಪಾರ್ಟಿಯಲ್ಲಿ ಗೆಳತಿಗೆ ಪ್ರಪೋಸ್ ಮಾಡಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಆಲ್ ರೌಂಡರ್ ಅಕ್ಷರ್ ಪಟೇಲ್ ತಮ್ಮ 28ನೇ ಹುಟ್ಟುಹಬ್ಬವನ್ನು ಇನ್ನಷ್ಟು ವಿಶೇಷವಾಗಿಸಿಕೊಂಡಿದ್ದರು. ಹುಟ್ಟುಹಬ್ಬದ ಸಂಭ್ರಮಾಚರಣೆಯ ನಡುವೆ, ಅಕ್ಷರ್ ತನ್ನ ಗೆಳತಿ ಮೇಹಾ ಪಟೇಲ್ ಅನ್ನು ಮದುವೆಯಾಗುವುದಾಗಿ ಘೋಷಿಸಿದ್ದಾರೆ. ವಿಭಿನ್ನವಾಗಿ ಪ್ರಪೋಸ್ ಮಾಡುವ ಮೂಲಕ ಪ್ರೀತಿಯನ್ನು ಪ್ರಸ್ತಾಪಿಸಿದ್ದಾರೆ.
20 ಜನವರಿ 2022ರಂದು, ಅಕ್ಷರ್ ಪಟೇಲ್ ಅವರ 28ನೇ ಜನ್ಮದಿನವಾಗಿತ್ತು. ಈ ದಿನ ಅವರು ಮೇಹಾ ಪಟೇಲ್ಗೆ ಪ್ರೇಮ ನಿವೇದನೆ ಮಾಡಿದ್ದು, ಅದಕ್ಕೆ ಮೇಹಾ ಒಪ್ಪಿಕೊಂಡಿದ್ದಾರೆ. ಇನ್ನು ತಮ್ಮ ನಿಶ್ಚಿತಾರ್ಥದ ಸುಂದರವಾದ ಚಿತ್ರಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ಅದರಲ್ಲಿ ಅಕ್ಷರ್, ಮೇಹಾಗೆ ಉಂಗುರವನ್ನು ತೊಡಿಸುತ್ತಿರುವುದು ಕಂಡುಬಂದಿದೆ.
ಮೇಹಾ ಪಟೇಲ್ ಗುಜರಾತ್ ನಿವಾಸಿಯಾಗಿದ್ದು, ವೃತ್ತಿಯಲ್ಲಿ ನ್ಯೂಟ್ರೀಶಿಯನ್. ಅಕ್ಷರ್ ಪಟೇಲ್ ಮತ್ತು ಮೇಹಾ ಹಲವು ವರ್ಷಗಳಿಂದ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಮೇಹಾಗೆ ನಾಯಿಗಳೆಂದರೆ ತುಂಬಾ ಪ್ರೀತಿ, ಆಕೆಗೆ ಗುಸ್ಸಿ ಎಂಬ ನಾಯಿ ಇದೆ.
ಇನ್ನು ಮೇಹಾ ಪಟೇಲ್ ತಮ್ಮ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತಾರೆ. ಕಟ್ಟುನಿಟ್ಟಾದ ವ್ಯಾಯಾಮವನ್ನು ಸಹ ಅನುಸರಿಸುತ್ತಾರೆ. ಮೇಹಾ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಸಕ್ರಿಯರಾಗಿದ್ದು, ಇನ್ಸ್ಟಾಗ್ರಾಂನಲ್ಲಿ 16 ಸಾವಿರಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದಾರೆ.
ಅಕ್ಷರ್ ಪಟೇಲ್ 2014 ರಲ್ಲಿ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ್ದರು. ಭಾರತಕ್ಕಾಗಿ ಇದುವರೆಗೆ 9 ಟೆಸ್ಟ್, 38 ಒಡಿಐ ಮತ್ತು 23 ಟಿ-20 ಪಂದ್ಯಗಳನ್ನು ಆಡಿದ್ದಾರೆ. ಸದ್ಯ ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿದಿರುವ ಟೀಮ್ ಇಂಡಿಯಾದ ಭಾಗವಾಗಿ ಆಡುತ್ತಿದ್ದಾರೆ.