Most educated person in salman khan family: ಸಲ್ಮಾನ್ ಖಾನ್ ಕುಟುಂಬದಲ್ಲಿ ಎಲ್ಲರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಅತ್ಯುತ್ತಮ ಕೆಲಸ ಮಾಡುತ್ತಿದ್ದಾರೆ. ಕೋಟಿಗಟ್ಟಲೆ ಆಸ್ತಿ ಹೊಂದಿ ಐಷಾರಾಮಿ ಜೀವನ ನಡೆಸುತ್ತಿದ್ದಾರೆ. ಆದರೆ ಸಲ್ಮಾನ್ ಖಾನ್ ಕುಟುಂಬದಲ್ಲಿ ಹೆಚ್ಚು ವಿದ್ಯಾವಂತರು ಯಾರು ಗೊತ್ತಾ? ತಿಳಿಯದಿದ್ದರೆ ಬನ್ನಿ. ಇಂದು ಸಲ್ಮಾನ್ ಖಾನ್ ಕುಟುಂಬದವರ ಶಿಕ್ಷಣದ ಅರ್ಹತೆ ಏನು ಎಂಬುದನ್ನು ತಿಳಿಯೋಣ.
ಸಲ್ಮಾನ್ ಖಾನ್: ಬಾಲಿವುಡ್ ಸೂಪರ್ಸ್ಟಾರ್ ಸಲ್ಮಾನ್ ಖಾನ್ ಗ್ವಾಲಿಯರ್ನ ಸಿಂಧಿಯಾ ಶಾಲೆಯಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪಡೆದರು. ಸಿಂಧಿಯಾ ಶಾಲೆಯ ನಂತರ ಸಲ್ಮಾನ್ ಸೇಂಟ್ ಸ್ಟಾನಿಸ್ಲಾಸ್ ಶಾಲೆಯಲ್ಲಿ ಪ್ರವೇಶ ಪಡೆದರು. ಸಲ್ಮಾನ್ ಕಾಲೇಜು ವ್ಯಾಸಂಗವನ್ನು ಪೂರ್ಣಗೊಳಿಸಿಲ್ಲ. ತನ್ನ ಅಧ್ಯಯನವನ್ನು ಮಧ್ಯದಲ್ಲಿ ಬಿಟ್ಟು ಮುಂಬೈಗೆ ಕೆಲಸ ಮಾಡಲು ತೆರಳಿದರು.
ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್: ಅರ್ಬಾಜ್ ಖಾನ್ ತನ್ನ ಸಹೋದರ ಸಲ್ಮಾನ್ನಂತೆ ಸಿಂಧಿಯಾ ಶಾಲೆಯಲ್ಲಿ ಓದಿದ್ದಾರೆ. ಆದರೆ ಅವರು ತಮ್ಮ ಶಿಕ್ಷಣವನ್ನು ಮಧ್ಯದಲ್ಲಿಯೇ ಬಿಟ್ಟು ಬಾಲಿವುಡ್ ನಲ್ಲಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾದರು. ಸದ್ಯ ಅರ್ಬಾಜ್ ಸಿನಿಮಾ ನಿರ್ದೇಶನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಸೊಹೈಲ್ ಖಾನ್ ಅವರು ಶಾಲೆಯ ನಂತರ ಕಾಲೇಜು ಶಿಕ್ಷಣವನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಅವರು ಪೈಲಟ್ ಆಗಲು ಬಯಸಿದ್ದರು. ಅದರಂತೆಯೇ ಪೈಲಟ್ ತರಬೇತಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೃಷ್ಟಿದೋಷದ ಸಮಸ್ಯೆಯಿಂದ ಆಯ್ಕೆಯಾಗಲಿಲ್ಲ.
ಅರ್ಪಿತಾ ಖಾನ್- ಸಲ್ಮಾನ್ ಖಾನ್ ಅವರ ಪ್ರೀತಿಯ ಸಹೋದರಿ ಅರ್ಪಿತಾ ಖಾನ್ ಲಂಡನ್ನ ಕಾಲೇಜ್ ಆಫ್ ಫ್ಯಾಶನ್ನಲ್ಲಿ ಫ್ಯಾಷನ್ ಮತ್ತು ಮ್ಯಾನೇಜ್ಮೆಂಟ್ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಅರ್ಪಿತಾ ಖಾನ್ ಆಯುಷ್ ಶರ್ಮಾ ಅವರನ್ನು ವಿವಾಹವಾಗಿದ್ದಾರೆ. ಅರ್ಪಿತಾ ಅವರ ಪತಿ ದೆಹಲಿಯ ನಿವಾಸಿಯಾಗಿದ್ದು, ಅವರು ದೆಹಲಿಯಲ್ಲಿ ಶಾಲಾ ಶಿಕ್ಷಣವನ್ನು ಪಡೆದಿದ್ದಾರೆ.
ಅರ್ಹಾನ್ ಖಾನ್- ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ ಅವರ ಮಗ ಅರ್ಹಾನ್ ಖಾನ್ ಪ್ರಸ್ತುತ ಯುಎಸ್ನ ಲಾಂಗ್ ಐಲ್ಯಾಂಡ್ ಫಿಲ್ಮ್ ಸ್ಕೂಲ್ನಲ್ಲಿ ಫಿಲ್ಮ್ ಮೇಕಿಂಗ್ ಕಲಿಯುತ್ತಿದ್ದಾರೆ.
ನಿರ್ವಾನ್ ಖಾನ್ - ಸೊಹೈಲ್ ಖಾನ್ ಅವರಿಗೆ ನಿರ್ವಾನ್ ಮತ್ತು ಯೋಹಾನ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇಬ್ಬರೂ ಪ್ರಸ್ತುತ ಶಾಲೆಯಲ್ಲಿ ಓದುತ್ತಿದ್ದಾರೆ. ಇಲ್ಲಿಯವರೆಗೆ ಅರ್ಪಿತಾ ಖಾನ್ ಇಡೀ ಖಾನ್ ಕುಟುಂಬದಲ್ಲಿ ಹೆಚ್ಚು ವಿದ್ಯಾವಂತರು ಎಂದು ಹೇಳಲಾಗಿತ್ತು. ಇದೀಗ ಅರ್ಹಾನ್ನ ಅಧ್ಯಯನ ಮುಗಿದ ನಂತರ, ಪದವಿಯ ವಿಷಯದಲ್ಲಿ ಅವನು ತನ್ನ ಚಿಕ್ಕಮ್ಮ ಅರ್ಪಿತಾಗೆ ಸಮಾನನಾಗುತ್ತಾನೆ.