Tips to get Lakshmi blessing : ತುಳಸಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಸ್ಯ. ಅದು ಕೇವಲ ಒಂದು ಸಸ್ಯ ಅನ್ನುವುದಕ್ಕಿಂತ ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ. ಇದೇ ಕಾರಣಕ್ಕೆ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗುವುದು ಕಡ್ಡಾಯ.
Tips to get Lakshmi blessing : ಹಿಂದೂ ಧರ್ಮದಲ್ಲಿ ತುಳಸಿ ಗಿಡಕ್ಕೆ ವಿಶೇಷ ಮಾನ್ಯತೆ ಇದೆ.ಯಾವ ಅಮ್ನೆಯಲ್ಲಿ ತುಳಸಿ ಗಿಡ ಇರುವುದೋ ಆ ಮನೆಯ ಸುತ್ತ ಸಕಾರಾತ್ಮಕತೆ ತುಂಬಿರುತ್ತದೆ ಎಂದು ಹೇಳಲಾಗುತ್ತದೆ. ನಿತ್ಯ ಎರಡು ಬಾರಿ ತುಳಸಿಗೆ ದೀಪ ಹಚ್ಚುವುದು ವಾಡಿಕೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.
ಪ್ರತಿ ಹಿಂದೂಗಳ ಮನೆಯಲ್ಲಿ ತುಳಸಿ ಕಟ್ಟೆ ಇದ್ದೇ ಇರುತ್ತದೆ. ತುಳಸಿ ಕಟ್ಟೆ ಇಲ್ಲದೆ ಹೋದರೆ ಯಾವುದೇ ಮಣ್ಣಿನ ಕುಂಡದಲ್ಲಿಯಾದರೂ ತುಳಸಿಯನ್ನು ನೆಟ್ಟು ಪೂಜಿಸಲಾಗುತ್ತದೆ. ಯಾಕೆಂದರೆ ಮನೆ ಮುಂದೆ ತುಳಸಿ ಇರಲೇ ಬೇಕು ಎನ್ನುವುದು ಹಿಂದೂ ಸಂಪ್ರದಾಯದ ಪ್ರಕಾರ ಇರುವ ನಂಬಿಕೆ.
ತುಳಸಿ ಅತ್ಯಂತ ಪವಿತ್ರ ಮತ್ತು ಮಂಗಳಕರ ಸಸ್ಯ. ಅದು ಕೇವಲ ಒಂದು ಸಸ್ಯ ಅನ್ನುವುದಕ್ಕಿಂತ ಸಾಕ್ಷಾತ್ ಲಕ್ಷ್ಮೀಯ ಪ್ರತಿರೂಪ. ಇದೇ ಕಾರಣಕ್ಕೆ ದಿನಕ್ಕೆರಡು ಬಾರಿ ತುಳಸಿಗೆ ದೀಪ ಬೆಳಗುವುದು ಕಡ್ಡಾಯ.
ಮುಂಜಾನೆ ಎದ್ದು ಸ್ನಾನ ಮಾಡಿ ತುಳಸಿಗೆ ನೀರು ಅರ್ಪಿಸುವುದು ಕೂಡಾ ಬಹಳ ಮುಖ್ಯ ಕ್ರಮ. ಇದರಿಂದ ನಮ್ಮ ದಿನ ಮಂಗಳಕರವಾಗಿರುತ್ತದೆ, ಎದುರಾಗಬಹುದಾದ ಸಮಸ್ಯೆಗಳು ಬದುಗೆ ಸರಿಯುತ್ತದೆ ಎಂದು ಹೇಳಲಾಗುತ್ತದೆ.
ತುಳಸಿಗೆ ನೀರನ್ನು ಅರ್ಪಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹರಿಯುತ್ತದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ದೊರೆಯುತ್ತದೆ. ಬೆಟ್ಟದಂತೆ ಎದುರು ನಿಲ್ಲುವ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುತ್ತವೆಯಂತೆ
ಇಲ್ಲಿ ಮಹಿಳೆಯರು ಗಮನಿಸಬೇಕಾದ ಒಂದು ಅಂಶವಿದೆ. ಮುಂಜಾನೆ ತುಳಸಿಗೆ ನೀರು ಅರ್ಪಿಸುವುದು ಸರಿ. ಆದರೆ, ಅದು ಬರೀ ನೀರಾಗಿರಬಾರದು. ಆ ನೀರಿಗೆ ಸಲ್ಪ ಅರಶಿನ, ಶ್ರೀಗಂಧ, ಕುಂಕು
ಅಲ್ಲದೆ ತುಳಸಿಗೆ ನೀರು ಅರ್ಪಿಸುವಾಗ ತಾಮ್ರದ ಲೋಟ ಅಥವಾ ಚೊಂಬನ್ನು ಮಾತ್ರ ಬಳಸಬೇಕು. ಹೀಗೆ ಮಾಡಿದರೆ ಆರ್ಥಿಕವಾಗಿ ಎಷ್ಟೇ ಸಮಸ್ಯೆಗಳಿದ್ದರೂ ಸರಾಗವಾಗಿ ಕರಗುತ್ತಾ ಹೋಗುವುದು.
ತುಳಸಿಗೆ ನಿತ್ಯ ನೀರು ಅರ್ಪಿಸುವುದು, ದೀಪ ಧೂಪ ಬೆಳಗುವುದರಿಂದ ಲಕ್ಷ್ಮೀ ಮಾತ್ರವಲ್ಲ, ವಿಷ್ಣು ಕೂಡಾ ಪ್ರಸನ್ನನಾಗುತ್ತಾನೆ. ಇವರಿಬ್ಬರ ಆಶೀರ್ವಾದದಿಂದ ಮನೆ ಅಭಿವೃದ್ದಿಯಾಗುತ್ತಲೇ ಹೋಗುವುದು.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಅದನ್ನು ದೃಢೀಕರಿಸುವುದಿಲ್ಲ.