Unlucky Plants: ಮನೆಯಲ್ಲಿ ಬೆಳೆಸುವ ಈ ಸಸ್ಯಗಳು ಮನೆ ಮಂದಿಯ ಪ್ರಗತಿಯನ್ನೇ ನಿಲ್ಲಿಸಿ ಬಿಡುತ್ತವೆ .!

Vastu Tips for Plants:ಅನೇಕ ಬಾರಿ ಮನೆಯ ಅಲಂಕಾರದ ಹೆಸರಿನಲ್ಲಿ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ಉಂಟುಮಾಡುವ ಸಸ್ಯಗಳನ್ನು ನೆಡಲಾಗುತ್ತದೆ. ಈ ಸಸ್ಯಗಳು ಮನೆಯ ಸಂತೋಷ ಮತ್ತು ಶಾಂತಿಯನ್ನು ಕದಡುತ್ತವೆ. 

Vastu Tips for Plants: ವಾಸ್ತು ಶಾಸ್ತ್ರದಲ್ಲಿ ಮರಗಳು ಮತ್ತು ಸಸ್ಯಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ.  ಅವುಗಳು ಸುತ್ತಮುತ್ತಲಿನ ಶಕ್ತಿಯ ಮೇಲೆ ಪರಿಣಾಮ ಬೀರುತ್ತವೆ. ವಾಸ್ತು ಶಾಸ್ತ್ರದಲ್ಲಿ ಶುಭ ಮತ್ತು ಅಶುಭ ಫಲ ನೀಡುವ ಮರ-ಗಿಡಗಳ ಹೆಸರುಗಳು, ಮತ್ತು ಅವುಗಳ ನೆಡುವ ದಿಕ್ಕುಗಳ ಬಗ್ಗೆಯೂ ಹೇಳಲಾಗಿದೆ. ಚೀನಾದ ವಾಸ್ತುಶಿಲ್ಪ ವಿಜ್ಞಾನ ಫೆಂಗ್ ಶೂಯಿಯಲ್ಲಿ ಸಸ್ಯಗಳ ಬಗ್ಗೆ ಮಾರ್ಗದರ್ಶನವನ್ನೂ ನೀಡಲಾಗಿದೆ.  ವಾಸ್ತುವಿನ ಪ್ರಕಾರ ಮನೆಯಲ್ಲಿ ನೆಡುವ ಕೆಲವು ಸಸ್ಯಗಳು ಮನೆಯಲ್ಲಿ ನಕಾರಾತ್ಮಕ ಶಕ್ತಿಯನ್ನು ಉಂಟುಮಾಡುತ್ತವೆ. ಅವರು ಮನೆ ಮಂದಿಯ ಪ್ರಗತಿಯನ್ನು ತಡೆಯುತ್ತದೆ. ಮತ್ತು ಹಣದ ಹರಿವನ್ನು ನಿಲ್ಲಿಸುತ್ತದೆ. 

ಮನೆಯ ಅಲಂಕಾರದ ಹೆಸರಿನಲ್ಲಿ ಈ ತಪ್ಪನ್ನು ಮಾಡಬೇಡಿ  :
ಅನೇಕ ಬಾರಿ ಮನೆಯ ಅಲಂಕಾರದ ಹೆಸರಿನಲ್ಲಿ ನಕಾರಾತ್ಮಕತೆ ಮತ್ತು ದುರದೃಷ್ಟವನ್ನು ಉಂಟುಮಾಡುವ ಸಸ್ಯಗಳನ್ನು ನೆಡಲಾಗುತ್ತದೆ. ಈ ಸಸ್ಯಗಳು ಮನೆಯ ಸಂತೋಷ ಮತ್ತು ಶಾಂತಿಯನ್ನು ಕದಡುತ್ತವೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

1 /5

ಬೋನ್ಸಾಯ್ ಗಿಡಗಳು: ಬೋನ್ಸಾಯ್ ಗಿಡವನ್ನು ಮನೆಯಲ್ಲಿ ಇಡಬಾರದು. ಈ ಸಸ್ಯಗಳು ಪ್ರಗತಿಗೆ ಅಡ್ಡಿಯಾಗುತ್ತವೆ. ಮನೆಯ ಜನರ ಉದ್ಯೋಗ-ವ್ಯವಹಾರಗಳಲ್ಲಿ ಪ್ರಗತಿ ನಿಲ್ಲುತ್ತದೆ. 

2 /5

ಹತ್ತಿ ಗಿಡ: ಹತ್ತಿ ಗಿಡವನ್ನು ಮನೆಯಲ್ಲಿ ಎಂದಿಗೂ ನೆಡಬಾರದು. ಈ ಸಸ್ಯವು ನೋಡುವುದಕ್ಕೆ  ಸುಂದರವಾಗಿ ಕಾಣುತ್ತದೆ. ಆದರೆ ಇದು ನಕಾರಾತ್ಮಕತೆ ಮತ್ತು ಅನೇಕ ತೊಂದರೆಗಳನ್ನು ಉಂಟುಮಾಡುತ್ತದೆ. 

3 /5

ಮುಳ್ಳಿನ ಗಿಡಗಳು: ಮುಳ್ಳು ಗಿಡಗಳನ್ನು ಮನೆ ಅಥವಾ ಕಚೇರಿಯಲ್ಲಿ ಎಲ್ಲಿಯೂ ನೆಡಬಾರದು. ಈ ಗಿಡಗಳಿಂದ ಮನೆಯಲ್ಲಿ ಜಗಳಗಳು ನಡೆಯುತ್ತವೆ. ನಕಾರಾತ್ಮಕ ವಾತಾವರಣವನ್ನು  ಸೃಷ್ಟಿ  ಮಾಡುತ್ತದೆ. 

4 /5

ಮೆಹಂದಿ ಸಸ್ಯ  : ಮೆಹಂದಿ ಸಸ್ಯವು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ. ಆದ್ದರಿಂದ, ಈ ಸಸ್ಯವನ್ನು ಮನೆಯಲ್ಲಿ ನೆಡಬೇಡಿ. 

5 /5

ಹುಣಸೆ ಮರ: ಮನೆಯಲ್ಲಿ ಹುಣಸೆ ಮರ ಅಥವಾ ಗಿಡ ಇರುವುದು ಅಶುಭ. ಈ ಸಸ್ಯವು ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ.    ( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ಮಾಹಿತಿ ಮತ್ತು ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)