Weekly Horoscope: ಏಪ್ರಿಲ್ ಕೊನೆಯ ವಾರ ಈ ರಾಶಿಯವರಿಗೆ ತುಂಬಾ ಮಂಗಳಕರ

                                

Weekly Horoscope 24th April To 30th April: ಜ್ಯೋತಿಷ್ಯ ಶಾಸ್ತ್ರದಲ್ಲಿ ದಿನ ಭವಿಷ್ಯದಂತೆ ವಾರ ಭವಿಷ್ಯಕ್ಕೂ ಕೂಡ ಪ್ರಾಮುಖ್ಯತೆ ಇದೆ. ಮುಂದಿನ ವಾರ ಎಂದರೆ ಏಪ್ರಿಲ್ 24ರಿಂದ ಏಪ್ರಿಲ್ 30ರವರೆಗೆ ಯಾವ ರಾಶಿಯವರಿಗೆ ಹೇಗಿದೆ ಎಂದು ತಿಳಿಯಿರಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /12

ಏಪ್ರಿಲ್ ಕೊನೆಯ ವಾರ ಮೇಷ ರಾಶಿಯ ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವನ್ನು ತರಬಹುದು. ವ್ಯಾಪಾರ-ವ್ಯವಹಾರದಲ್ಲಿಯೂ ನಿರೀಕ್ಷಿತ ಲಾಭ ದೊರೆಯಲಿದೆ. ಆದಾಗ್ಯೂ, ಆರೋಗ್ಯಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನಿರ್ಲಕ್ಷ್ಯವಹಿಸಬೇಡಿ. ಈ ವಾರದ ಆರಂಭವು ಉತ್ತಮವಾಗಿರುತ್ತದೆ. ಕೆಲಸದಲ್ಲಿ ಯಶಸ್ಸು ಕಾಣುವಿರಿ. ಮಕ್ಕಳಿಂದ ಬೆಂಬಲ ದೊರೆಯಲಿದೆ. 

2 /12

ವೃಷಭ ರಾಶಿಯವರಿಗೆ ವಾರದ ಆರಂಭ ಅಷ್ಟು ಉತ್ತಮವಾಗಿಲ್ಲದಿದ್ದರೂ, ಮಂಗಳವಾರದ ನಂತರ ನಿಮ್ಮ ಸಮಯ ಚೆನ್ನಾಗಿದೆ. ಆದಾಯದಲ್ಲಿ ಹೆಚ್ಚಳವಾಗಲಿದ್ದು, ಮಕ್ಕಳಿಂದಲೂ ಸಂತೋಷದ ಸಮಾಚಾರವನ್ನು ಪಡೆಯುವಿರಿ.

3 /12

ಈ ವಾರ ಮಿಥುನ ರಾಶಿಯವರಿಗೆ ಆದಾಯದ ಮೂಲಗಳು ಹೆಚ್ಚಾಗಲಿದ್ದು ಕೆಲಸ-ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ಪ್ರಾಪ್ತಿಯಾಗುತ್ತದೆ. ಪ್ರೀತಿ-ಪ್ರೇಮದ ವಿಚಾರದಲ್ಲೂ ಶುಭ ಸುದ್ದಿಯನ್ನು ಸ್ವೀಕರಿಸುವಿರಿ. 

4 /12

ಕರ್ಕಾಟಕ ರಾಶಿಯವರು ಈ ವಾರ ಸ್ಥಿರ ಆದಾಯವನ್ನು ಹೊಂದಿರುತ್ತಾರೆ. ಇದರೊಂದಿಗೆ ನಿಮ್ಮ ಕೆಲಸ ಕಾರ್ಯಗಳಲ್ಲಿ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು, ಕೌಟುಂಬಿಕ ಸುಖವನ್ನೂ ಆನಂದಿಸುವಿರಿ. 

5 /12

ಬರುವ ವಾರ ಸಿಂಹ ರಾಶಿಯವರು ಯೋಚಿತ ಕೆಲಸಗಳನ್ನು ನಿರಾಳವಾಗಿ ಪೂರ್ಣಗೊಳಿಸುವಿರಿ. ಆದಾಯ ಉತ್ತಮವಾಗಿರಲಿದ್ದು ಉಳಿತಾಯ ಮಾಡಲೂ ಕೂಡ ಸಮಯ ಅತ್ಯುತ್ತಮವಾಗಿದೆ. ಆದರೆ, ವಾರಾಂತ್ಯದಲ್ಲಿ ಸ್ವಲ್ಪ ಜಾಗರೂಕರಾಗಿರಿ. 

6 /12

ಮುಂದಿನ ವಾರ ನೀವು ಹಣಕಾಸಿನ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇದರಿಂದ ನಿಮ್ಮ ಕೆಲಸಗಳು ಸಮಯಕ್ಕೆ ಸರಿಯಾಗಿ ಪೂರ್ಣಗೊಳ್ಳುವುದಿಲ್ಲ. ಆದರೆ, ಹಿರಿಯರಿಂದ ಸಹಕಾರ ದೊರೆಯಲಿದ್ದು ವಾರಾಂತ್ಯದಲ್ಲಿ ನಿಮ್ಮ ಕೆಲಸಗ್ಲೌ ಪೂರ್ಣಗೊಳ್ಳಲಿವೆ. ಶುಭ ಸುದ್ದಿಯನ್ನು ಸ್ವೀಕರಿಸುವಿರಿ.

7 /12

ತುಲಾ ರಾಶಿಯವರಿಗೆ ವಾರದ ಆರಂಭ ಉತ್ತಮವಾಗಿರುತ್ತದೆ. ಈ ವಾರ ಬೇರೆಡೆ ಸಿಲುಕಿರುವ ಹಣ ನಿಮ್ಮ ಕೈ ಸೇರಲಿದೆ. ಉದ್ಯೋಗ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಲಿದ್ದು ಲಾಭವನ್ನು ಗಳಿಸುವಿರಿ. ಆದಾಗ್ಯೂ, ಖರ್ಚು ಹೆಚ್ಚಾಗಲಿದ್ದು ಪ್ರೀತಿಯ ವಿಷಯಗಳಲ್ಲಿ ನಿರಾಶೆ ಕಾಣಬಹುದು. 

8 /12

ವೃಶ್ಚಿಕ ರಾಶಿಯವರಿಗೆ ವಾರದ ಮಧ್ಯದಲ್ಲಿ ಕೊಂಚ ಒತ್ತಡ ಹೆಚ್ಚಾಗಲಿದೆ. ಇದರ ಹೊರತಾಗಿ ಈ ವಾರದಲ್ಲಿ ನೀವು ಕೆಲಸ ಕಾರ್ಯಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯವೂ ಇದೆ. ವಾರಾಂತ್ಯದಲ್ಲಿ ನಿಮ್ಮ ಆದಾಯದಲ್ಲಿ ಹೆಚ್ಚಳವಾಗಲಿದ್ದು ಕೌಟುಂಬಿಕ ಸಂತೋಷವೂ ಹೆಚ್ಚಾಗಲಿದೆ. 

9 /12

ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಮುಂದಿನ ವಾರ ತುಂಬಾ ಶುಭವಾಗಿದೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಅವಕಾಶ ದೊರೆಯಲಿದೆ. ಸರ್ಕಾರಿ ಕೆಲಸಗಳಲ್ಲಿ ಅಡೆತಡೆಗಳು ದೂರವಾಗಿ ಕೆಲಸಗಳು ನಿಮ್ಮ ಪರವಾಗಿ ಆಗಲಿವೆ. ಮಕ್ಕಳಿಂದ ಸಂತೋಷವನ್ನು ಪಡೆಯುವಿರಿ. 

10 /12

ಈ ವಾರ ಮಕರ ರಾಶಿಯವರು ಹಣಕಾಸಿನ ಮುಗ್ಗಟ್ಟನ್ನು ಎದುರಿಸಬೇಕಾಗಬಹುದು. ವಾರದ ಮಧ್ಯದಲ್ಲಿ ದಿಢೀರ್ ಪ್ರಯಾಣ ಸಾಧ್ಯತೆಯೂ ಇದೆ. ಉದ್ಯೋಗ ಕ್ಷೇತ್ರದಲ್ಲಿ ಸಹೋದ್ಯೋಗಿಗಳ ಬೆಂಬಲದಿಂದ ಖರ್ಚು-ವೆಚ್ಚಗಳನ್ನು ನಿಭಾಯಿಸುವಿರಿ.

11 /12

ಮುಂದಿನ ವಾರದಿಂದ ನಿಮ್ಮ ಬಹುಕಾಲದ ಚಿಂತೆ ಕೊಂಚ ಕಡಿಮೆಯಾಗಲಿದೆ. ಒತ್ತಡ ಭರಿತ ಕೆಲಸದ ಹೊರತಾಗಿಯೂ ಆದಾಯ ಹೆಚ್ಚಳದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ವಾಹನ ಚಾಲನೆ ವೇಳೆ ಜಾಗರೂಕರಾಗಿರಿ. 

12 /12

ಈ ವಾರ ನೀವು ನಿಮ್ಮ ಪರಿಶ್ರಮಕ್ಕೆ ತಕ್ಕ ಪ್ರತಿಫಲವನ್ನು ಪಡೆಯಲಿದ್ದೀರಿ. ಯಾರನ್ನೂ ಅತಿಯಾಗಿ ನಂಬಬೇಡಿ. ಕುರುಡಾಗಿ ನಂಬುವುದರಿಂದ ಮೋಸವಾಗುವ ಸಾಧ್ಯತೆಯೂ ಇರುತ್ತದೆ. ಹಾಗಾಗಿ ತುಂಬಾ ಜಾಗಾರೂಕರಾಗಿರಿ.  ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.