Hair growth foods : ಇತ್ತೀಚಿನ ದಿನಗಳಲ್ಲಿ ಅಕಾಲಿಕ ಕೂದಲು ಉದುರುವಿಕೆಯಿಂದ ತೊಂದರೆಗೊಳಗಾಗುವ ಅನೇಕ ಜನರಿದ್ದಾರೆ. ಗಂಡು ಅಥವಾ ಹೆಣ್ಣು ಎಲ್ಲರೂ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ.. ಇದಕ್ಕೆ ಕೆಟ್ಟ ಆಹಾರ ಶೈಲಿಯೇ ಕಾರಣ.. ಅದಕ್ಕಾಗಿ ನೀವು ನಿಮ್ಮ ಊಟದಲ್ಲಿ ಈ ಕೆಳಗೆ ನೀಡಿರುವ 5 ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳಿ..
ನಿಮ್ಮ ಆಹಾರದಲ್ಲಿ ಹಾಲು, ಮೊಸರು, ಚೀಸ್ ನಂತಹ ಡೈರಿ ಉತ್ಪನ್ನಗಳನ್ನು ಸೇರಿಸುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಸಾಲ್ಮನ್, ಸಾರ್ಡೀನ್ ಮತ್ತು ಮ್ಯಾಕೆರೆಲ್ ನಂತಹ ಮೀನುಗಳು ಒಮೆಗಾ 3 ಕೊಬ್ಬಿನಾಮ್ಲಗಳಲ್ಲಿ ಸಮೃದ್ಧವಾಗಿವೆ. ಇದನ್ನು ಆಹಾರದಲ್ಲಿ ಸೇರಿಸಿಕೊಳ್ಳುವುದರಿಂದ ಕೂದಲು ಉದುರುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.
ಮೊಟ್ಟೆಗಳನ್ನು ಪ್ರೋಟೀನ್ ಮತ್ತು ಬಯೋಟಿನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ. ಮೊಟ್ಟೆಗಳನ್ನು ಸೇವಿಸುವುದರಿಂದ ಕೂದಲಿನ ಬೆಳವಣಿಗೆ ಸುಧಾರಿಸುತ್ತದೆ.
ಪಾಲಕ್ ಸೊಪ್ಪಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ಬೀಟಾ ಕ್ಯಾರೋಟಿನ್ ಮತ್ತು ಫೋಲೇಟ್ ಇದ್ದು, ಇದು ಕೂದಲಿನ ಬೆಳವಣಿಗೆಗೆ ಇದು ತುಂಬಾ ಪ್ರಯೋಜನಕಾರಿ.
ಒಣ ಹಣ್ಣುಗಳು ಅಗತ್ಯವಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಇವು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿಯಾಗಿದೆ. ಹಾಗಾಗಿ ಇದರ ಸೇವನೆಯು ಕೂದಲಿನ ಬೆಳವಣಿಗೆಗೆ ತುಂಬಾ ಪ್ರಯೋಜನಕಾರಿ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ದೇಶೀಯ ಪಾಕವಿಧಾನಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಅವಶ್ಯಕ. Zee Kannada News ಇದನ್ನು ಖಚಿತಪಡಿಸುವುದಿಲ್ಲ.