ʼಅನುಷ್ಕಾ ಶರ್ಮಾ ನನ್ನ ರೂಮ್‌ಗೆ ಬಂದು..ʼ ವಿರಾಟ್‌ ಕೊಹ್ಲಿ ಪತ್ನಿ ಬಗ್ಗೆ ಕೆಎಲ್ ರಾಹುಲ್ ಶಾಕಿಂಗ್‌ ಕಾಮೆಂಟ್!

KL Rahul On Anushka Sharma: ಟೀಂ ಇಂಡಿಯಾದ ಸೂಪರ್‌ಸ್ಟಾರ್ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ತಮ್ಮ ಡೇಟಿಂಗ್ ದಿನಗಳಿಂದಲೂ ಪವರ್ ಕಪಲ್ ಆಗಿದ್ದಾರೆ.. ಮದುವೆಯಾಗಿದ್ದರೂ ಸಹ ಈ ಜೋಡಿಯ ಕ್ರೇಜ್‌ ಮಾತ್ರ ಕಡಿಮೆಯಾಗಿಲ್ಲ.. ಇದೀಗ ನಟಿ ಅನುಷ್ಕಾ ಶರ್ಮಾ ಕುರಿತಾಗಿ ಕೆಎಲ್ ರಾಹುಲ್ ಮಾಡಿದ ಕಾಮೆಂಟ್‌ವೊಂದು ಭಾರೀ ಚರ್ಚೆಯಲ್ಲಿದೆ.. 
 

1 /6

 ವಾಸ್ತವವಾಗಿ ಕೆಎಲ್ ರಾಹುಲ್ 2014 ರಲ್ಲಿ ಮೆಲ್ಬೋರ್ನ್‌ನ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ (MCG) ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕಾಗಿ ಮರೆಯಲಾಗದ ಟೆಸ್ಟ್ ಚೊಚ್ಚಲ ಪಂದ್ಯವನ್ನು ಆಡಿದರು.. ಆದರೆ ಅವರು ಶೂನ್ಯಕ್ಕೆ ಔಟಾದ ಕಾರಣ ಇದು ವಿಶೇಷ ಪ್ರದರ್ಶನವಾಗಿರಲಿಲ್ಲ. ಈ ಮೊದಲ ಟೆಸ್ಟ್‌ ಪಂದ್ಯದ ರಾಹುಲ್‌ ಬಹಿರಂಗವಾಗಿ ಮಾತನಾಡಿದ್ದರು.   

2 /6

ಹೌದು ಚಾಟ್‌ ಶೋವೊಂದರಲ್ಲಿ ಭಾಗವಹಿಸಿದ್ದ ಕೆಎಲ್ ರಾಹುಲ್ "ವಿರಾಟ್‌ ಅನುಷ್ಕಾ ಇಬ್ಬರೂ ತುಂಬಾ ಒಳ್ಳೆಯವರು.. ಅವರ ಬಗ್ಗೆ ಹೇಳಬೇಕಾದರೇ ಈ ಘಟನೆಯನ್ನು ಹೇಳಲೇಬೇಕು..ಆಸ್ಟ್ರೇಲಿಯಾದ ವಿರುದ್ಧ ನನ್ನ ಮೊದಲ ಟೆಸ್ಟ್‌ ಪಂದ್ಯ ಆಡಿ ನಾನು ಔಟಾದ ನಂತರ ನನ್ನ ಮಾನಸಿಕ ಸ್ಥಿತಿ ಕುಗ್ಗಿತ್ತು.."  

3 /6

"ನನ್ನನ್ನು ಗಮನಿಸಿದ ಅನುಷ್ಕಾ ನನಗೆ ಪ್ರೋತ್ಸಾಹಿಸಲು ನನ್ನ ರೂಮ್‌ಗೆ ಬಂದು ನಾನು ಒಬ್ಬಂಟಿಯಾಗಿರಬಾರದು ಎಂದು ಹೇಳಿದರು.. ಊಟಕ್ಕೂ ಅವರೇ ಕರೆದುಕೊಂಡು ಹೋದರು.. ನನ್ನ ಕಷ್ಟದ ಸಮಯದಲ್ಲಿ ಬೆಂಬಲವಾಗಿ ನಿಂತಿದ್ದು ಅನುಷ್ಕಾ" ಎಂದು ಕೆ ಎಲ್‌ ರಾಹುಲ್‌ ವಿರುಷ್ಕಾ ಅವರ ಬೆಂಬಲವನ್ನು ಅವರು ಶ್ಲಾಘಿಸಿದರು.    

4 /6

 "ಅಲ್ಲದೇ ನಾನು ಅನುಷ್ಕಾ ಉತ್ತಮ ಸ್ನೇಹಿತರಾಗಿದ್ದೇವೆ.. ಈಗಲೂ ನಾವೀಬ್ಬರು ಹಾಗೇಯೇ ಇದ್ದೇವೆ.. ಆಗಾಗ ಮೆಸೆಜ್‌ ಮಾಡುತ್ತೇವೆ.. ಅದರಲ್ಲೂ ಅನುಷ್ಕಾ ಹೆಚ್ಚಾಗಿ ಡಾಗ್ಸ್‌ ಬಗ್ಗೆ ನನ್ನೊಂದಿಗೆ ಮಾತನಾಡುತ್ತಾರೆ" ಎಂದಿದ್ದಾರೆ..  

5 /6

ಇನ್ನು ಅನುಷ್ಕಾ ವಿರಾಟ್‌ ಡಿಸೆಂಬರ್ 11, 2017 ರಂದು ಅದ್ದೂರಿಯಾಗಿ ವಿವಾಹವಾದರು.. ಈ ದಂಪತಿಗೆ ಈಗ ವಾಮಿಕಾ ಎಂಬ ಮಗಳು ಮತ್ತು ಅಕಾಯ್ ಎಂಬ ಮಗನಿದ್ದಾನೆ.  

6 /6

ಅನುಷ್ಕಾ ಶರ್ಮಾ ಸಿನಿಮಾ ವಿಚಾರಕ್ಕೆ ಬಂದರೇ ನಟಿ ಚಡ್ಡಾ ಎಕ್ಸ್‌ಪ್ರೆಸ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.. ಇದರ ಬಿಡುಗಡೆ ದಿನಾಂಕ ಇನ್ನು ನಿಗದಿಯಾಗಿಲ್ಲ... ಅಭಿಷೇಕ್ ಬ್ಯಾನರ್ಜಿ ಬರೆದು ಪ್ರೋಸಿತ್ ರಾಯ್ ನಿರ್ದೇಶಿಸಿದ ಈ ಚಿತ್ರವು ಕ್ರಿಕೆಟಿಗ ಗೋಸ್ವಾಮಿ ಅವರ ಜೀವನಚರಿತ್ರೆಯಾಗಿದೆ.