25 ವರ್ಷಗಳ ಇತಿಹಾಸ ಹೊಂದಿರುವ ZEE 173 ರಾಷ್ಟ್ರಗಳಲ್ಲಿ ತನ್ನ ಸ್ಥಾನ ಗಳಿಸಿದ್ದು, ವಿವಿಧ, ಭಾಷೆ, ಸ್ಥಳಗಳನ್ನೂ ಒಳಗೊಂಡಂತೆ 1.3 ಬಿಲಿಯನ್ ವೀಕ್ಷಕರನ್ನು ಜಾಗತಿಕ ಮಟ್ಟದಲ್ಲಿ ಸಂಪಾದಿಸಿದೆ. ಇದೀಗ ತನ್ನ ಹೊಸ ಡಿಜಿಟಲ್ ಮಾಧ್ಯಮವಾಗಿ ZEE5 ಬುಧವಾರ ಬಿಡುಗಡೆಯಾಗಿದೆ.
ಝೀ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸ್ ಲಿಮಿಟೆಡ್ ಸಿಇಒ ಅಮಿತ್ ಗೋಯಂಕಾ ಇದಕ್ಕೆ ಚಾಲನೆ ನೀಡಿದರು. ZEE5, ಝೀ ಮನೋರಂಜನಾ ಕುಟುಂಬದ ಜಾಗತಿಕ ಮಾಧ್ಯಮ ಮತ್ತು ಎಂಟರ್ಟೈನ್ಮೆಂಟ್ ಪವರ್ ಹೌಸ್ ನ ಏಕೈಕ ಡಿಜಿಟಲ್ ತಾಣವಾಗಿದ್ದು, ವೀಕ್ಷಕರ ಮನೋರಂಜನಾ ಬೇಡಿಕೆಗಳನ್ನು ಹೆಚ್ಚಿಸಲಿದೆ.
ZEE5, ವೀಕ್ಷಕರಿಗೆ ಆನ್-ಡಿಮಾಂಡ್ ಮತ್ತು ಲೈವ್ ಟಿವಿ ಎರಡರೊಂದಿಗೂ ಸಂಪೂರ್ಣ ಸಂಯೋಜಿತ ಮನರಂಜನಾ ಕೊಡುಗೆ ನೀಡುತ್ತದೆ. ಒರಿಜಿನಲ್ಸ್, ಇಂಡಿಯನ್ ಮತ್ತು ಇಂಟರ್ನ್ಯಾಷನಲ್ ಮೂವೀಸ್ ಮತ್ತು ಟಿವಿ ಶೋಗಳು, ಮ್ಯೂಸಿಕ್ ಮತ್ತು ಆರೋಗ್ಯ ಮತ್ತು ಲೈಫ್ಸ್ಟೈಲ್ ವೀಡಿಯೊಗಳನ್ನು ಭಾಷೆಗಳಾದ್ಯಂತ ಸೇರಿದಂತೆ 1,00,000 ಗಂಟೆಗಳ ಆನ್ ಡಿಮ್ಯಾಂಡ್ ವಿಷಯಳನ್ನು ಹೊಂದಿದೆ. ಇದು 90+ ಜನಪ್ರಿಯ ಲೈವ್ ಟಿವಿ ಚಾನಲ್ಗಳೊಂದಿಗೆ ವ್ಯಾಪಕವಾದ ಲೈವ್ ಟಿವಿ ಕೊಡುಗೆಗಳನ್ನು ಹೊಂದಿದೆ.
ವೀಕ್ಷಕರು ಇಂಗ್ಲಿಷ್, ಹಿಂದಿ, ಬೆಂಗಾಲಿ, ಮಲಯಾಳಂ, ತಮಿಳು, ತೆಲುಗು, ಕನ್ನಡ, ಮರಾಠಿ, ಒರಿಯಾ, ಭೋಜ್ಪುರಿ, ಗುಜರಾತಿ ಮತ್ತು ಪಂಜಾಬಿ ಸೇರಿದಂತೆ 11 ಭಾಷೆಗಳ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ZEE5 ಸಹ ಪ್ರಗತಿಶೀಲ ವೆಬ್ ಅಪ್ಲಿಕೇಶನ್ (PWA) ನಲ್ಲಿಯೂ ಲಭ್ಯವಿದೆ. ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡದೆಯೇ ವೀಕ್ಷಕರು ಉನ್ನತವಾದ ಅಪ್ಲಿಕೇಶನ್ ಅನುಭವವನ್ನು ಪಡೆಯಬಹುದು. ZEE5 ಅಪ್ಲಿಕೇಶನ್ ಅನ್ನು Google Play Store ಮತ್ತು iOS ಆಪ್ ಸ್ಟೋರ್ನಿಂದ ಡೌನ್ಲೋಡ್ ಮಾಡಬಹುದು. ಅಲ್ಲದೆ, www.zee5.com ನಲ್ಲಿ ಪ್ರಗತಿಶೀಲ ವೆಬ್ ಅಪ್ಲಿಕೇಶನ್ (PWA) ಆಗಿ ಮತ್ತು ಆಂಡ್ರಾಯ್ಡ್ ಟಿವಿಗಳು ಮತ್ತು ಅಮೆಜಾನ್ ಫೈರ್ ಟಿವಿ ಸ್ಟಿಕ್ನಲ್ಲಿಯೂ ಈ ಆಪ್ ಲಭ್ಯವಿದೆ.
ಉಚಿತ ಮತ್ತು ಪಾವತಿಸಿದ ಪ್ರೀಮಿಯಂ ಬೆಲೆ ಮಾದರಿಯೊಂದಿಗೆ ZEE5 ಆರಂಭಿಕ ಸಬ್ಸ್ಕ್ರಿಪ್ಶನ್ ಬೆಲೆ ತಿಂಗಳಿಗೆ ಸಾಮಾನ್ಯ ಬೆಲೆ 150ರೂ.ಗೆ ಬದಲಾಗಿ ಕೇವಲ 99 ರೂ.ಗಳಿಗೆ ಲಭ್ಯವಿದ್ದು, ಗ್ರಾಹಕರು ಸಂಪೂರ್ಣ ಲೈಬ್ರರಿಯ ಆಕ್ಸಿಸ್ ಕೂಡ ಪಡೆಯಬಹುದು.