ಗಣೇಶ ಚತುರ್ಥಿಯಂದು ಅಪರೂಪದ ಕಾಕತಾಳೀಯ: 10 ವರ್ಷಗಳ ಬಳಿಕ ರೂಪುಗೊಂಡಿದೆ ಈ ಯೋಗ!

ಗಣೇಶ ಪುರಾಣದ ಪ್ರಕಾರ, ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು. ಆ ದಿನ ಬುಧವಾರ. ಈ ವರ್ಷವೂ ಭಾದ್ರಪದ ಚತುರ್ಥಿ ಬುಧವಾರವೇ ಬರುತ್ತಿದೆ. 10 ವರ್ಷಗಳ ನಂತರ ಇಂತಹ ಕಾಕತಾಳೀಯ ಸಂಭವಿಸಿದೆ. ಈ ಹಿಂದೆ 2012ರಲ್ಲಿ ಬುಧವಾರ ಗಣೇಶ ಚತುರ್ಥಿ ಬಂದಿತ್ತು.

Written by - Bhavishya Shetty | Last Updated : Aug 30, 2022, 02:41 PM IST
    • ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು
    • ಈ ಗಣೇಶ ಚತುರ್ಥಿಯಂದು, ಅತ್ಯಂತ ಮಂಗಳಕರವಾದ ಕಾಕತಾಳೀಯವೊಂದು ರೂಪುಗೊಳ್ಳುತ್ತಿದೆ
    • ಗಣಪತಿಯ ಆಶೀರ್ವಾದ ಪಡೆಯಲು ಈ ಗಣೇಶ ಚತುರ್ಥಿ ಬಹಳ ವಿಶೇಷವಾಗಿದೆ
ಗಣೇಶ ಚತುರ್ಥಿಯಂದು ಅಪರೂಪದ ಕಾಕತಾಳೀಯ: 10 ವರ್ಷಗಳ ಬಳಿಕ ರೂಪುಗೊಂಡಿದೆ ಈ ಯೋಗ! title=
Ganesh Chaturthi 2022

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಪ್ರತಿ ಮನೆಯಲ್ಲೂ ಗಣಪತಿಯನ್ನು ಸ್ಥಾಪಿಸಲಾಗುತ್ತದೆ. ಈ ವರ್ಷ ಗಣೇಶ ಚತುರ್ಥಿ ಆಗಸ್ಟ್ 31 ರಂದು ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಈ ಗಣೇಶ ಚತುರ್ಥಿಯಂದು, ಅತ್ಯಂತ ಮಂಗಳಕರವಾದ ಕಾಕತಾಳೀಯವೊಂದು ರೂಪುಗೊಳ್ಳುತ್ತಿದೆ. ಇದು ಶಾಸ್ತ್ರಗಳ ಪ್ರಕಾರ ಗಣೇಶನ ಜನ್ಮ ಸಮಯದಲ್ಲಿ ಉಂಟಾಗುತ್ತದೆ. ಈ ಕಾರಣದಿಂದ ಗಣಪತಿಯ ಆಶೀರ್ವಾದ ಪಡೆಯಲು ಈ ಗಣೇಶ ಚತುರ್ಥಿ ಬಹಳ ವಿಶೇಷವಾಗಿದೆ. 

ಇದನ್ನೂ ಓದಿ: Viral Video : ದಾರಿಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಮದುವೆಯಾದ ಯುವತಿ

ಗಣೇಶ ಪುರಾಣದ ಪ್ರಕಾರ, ಗಣೇಶನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯಂದು ಜನಿಸಿದನು. ಆ ದಿನ ಬುಧವಾರ. ಈ ವರ್ಷವೂ ಭಾದ್ರಪದ ಚತುರ್ಥಿ ಬುಧವಾರವೇ ಬರುತ್ತಿದೆ. 10 ವರ್ಷಗಳ ನಂತರ ಇಂತಹ ಕಾಕತಾಳೀಯ ಸಂಭವಿಸಿದೆ. ಈ ಹಿಂದೆ 2012ರಲ್ಲಿ ಬುಧವಾರ ಗಣೇಶ ಚತುರ್ಥಿ ಬಂದಿತ್ತು. ಇಂತಹ ಶುಭ ಕಾಕತಾಳೀಯದಲ್ಲಿ ಗಣಪತಿಯನ್ನು ಪೂಜಿಸುವುದರಿಂದ ತುಂಬಾ ಶುಭವಾಗುತ್ತದೆ. ಇದು ಜೀವನದ ಎಲ್ಲಾ ತೊಂದರೆಗಳನ್ನು ತೊಡೆದುಹಾಕುತ್ತದೆ ಮತ್ತು ಸಂತೋಷ, ಸಮೃದ್ಧಿಯನ್ನು ತರುತ್ತದೆ. ಇದಲ್ಲದೇ ಈ ಗಣೇಶ ಚತುರ್ಥಿಯಂದು ರವಿಯೋಗವೂ ನಿರ್ಮಾಣವಾಗುತ್ತಿದೆ. ಈ ಯೋಗವನ್ನು ಪೂಜೆಗೆ ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. 

ಇದನ್ನೂ ಓದಿ: ಸ್ಕಾರ್ಪಿಯೊ-ಎನ್, ಎಸ್‌ಯುವಿ ವಿತರಣಾ ದಿನಾಂಕ ಪ್ರಕಟಿಸಿದ ಮಹೀಂದ್ರಾ

ಗಣೇಶನ ಪ್ರತಿಷ್ಠಾಪನೆಗೆ ಶುಭ ಸಮಯ:

ಆಗಸ್ಟ್ 31 ರಂದು ಗಣೇಶನ ಪ್ರತಿಷ್ಠಾಪನೆಗೆ 2 ಮುಹೂರ್ತಗಳು ಬಹಳ ಮಂಗಳಕರವಾಗಿರುತ್ತದೆ. ಇದರಲ್ಲಿ ಅಮೃತ ಯೋಗವು ಬೆಳಿಗ್ಗೆ 07:05 ರಿಂದ 08:40 ರವರೆಗೆ ಇರುತ್ತದೆ. ಮತ್ತೊಂದೆಡೆ ಎರಡನೇ ಶುಭ ಯೋಗವು ಬೆಳಿಗ್ಗೆ 10:15 ರಿಂದ 11:50 ರವರೆಗೆ ಇರುತ್ತದೆ. ಈ ಸಮಯದಲ್ಲಿ ಪೂರ್ಣ ಭಕ್ತಿಯಿಂದ ಗಣಪತಿಯನ್ನು ಸ್ಥಾಪಿಸಿ ಪೂಜಿಸಿ. ಗಣಪತಿಗೆ ತೆಂಗಿನಕಾಯಿ, ಮೋದಕ, ವೀಳ್ಯದೆಲೆ, ಬಾಳೆಹಣ್ಣು ಅರ್ಪಿಸಿ. ಚೆಂಡು ಹೂಗಳನ್ನು ಸಹ ಸಮರ್ಪಿಸಿ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.) 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News