Viral Video : ದಾರಿಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಮದುವೆಯಾದ ಯುವತಿ

Viral Video : ಯುವತಿಯೊಬ್ಬಳು ರಸ್ತೆಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದಿದ್ದಾಳೆ. ನಡುರಸ್ತೆಯಲ್ಲಿ ವರನನ್ನು ಹಿಡಿದು ನಿಲ್ಲಿಸಿ ಈತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ನೆರೆದಿದ್ದ ಜನರ ಮುಂದೆ ಗೋಗರೆದಿದ್ದಾಳೆ.  

Written by - Ranjitha R K | Last Updated : Aug 30, 2022, 02:07 PM IST
  • ಈ ಘಟನೆ ನೋಡಿದರೆ ಒಮ್ಮೆ ನಡುಕ ಹುಟ್ಟಿಸುತ್ತದೆ.
  • ನಡುರಸ್ತೆಯಲ್ಲಿ ವರನನ್ನು ಹಿಡಿದು ನಿಲ್ಲಿಸಿದ ಯುವತಿ
  • ಪೊಲೀಸರ ಮಧ್ಯ ಪ್ರವೇಶದೊಂದಿಗೆ ನೆರವೇರಿದ ಮದುವೆ
 Viral Video : ದಾರಿಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದು ಮದುವೆಯಾದ ಯುವತಿ  title=
Wedding viral video (photo twitter)

ಬಿಹಾರ : ಋಣಾನುಬಂಧ ರೂಪೇಣ ಪತಿ ಪತ್ನಿ ಸುತ ಆಲಯ ಎನ್ನುವ ಮಾತಿದೆ. ಹೌದು, ಪ್ರತಿಯೊಬ್ಬನ  ಮದುವೆ, ಸಂಗಾತಿ ಇವೆಲ್ಲವೂ ಮೊದಲೇ ನಿರ್ಧರಿತವಾಗಿರುತ್ತದೆ ಎಂದು ಹೇಳಲಾಗುತ್ತದೆ. ಎಷ್ಟೇ ಬೇಡ ಬೇಡವೆಂದರೂ ದೇವರು ನಿರ್ಧಾರ ಮಾಡಿದ ಜೋಡಿಯನ್ನು ಮುರಿಯುವುದು ಸಾಧ್ಯವಿಲ್ಲ ಎನುವುದನ್ನು ನಮ್ಮ ಹಿರಿಯರು ಆಗಾಗ ಹೇಳುವುದನ್ನು ನಾವು ಕೇಳಿರುತ್ತೇವೆ. ಕೆಲವೊಂದು ಘಟನೆಗಳನ್ನು ನೋಡುವಾಗ ಈ ಮಾತು ಅಕ್ಷರಶಃ ನಿಜ ಎನಿಸುತ್ತದೆ. 

ಬಿಹಾರದ ನವಾಡದಲ್ಲಿ ನಡೆದಿರುವ ಈ ಘಟನೆ ನೋಡಿದರೆ ಮೇಲಿನ ಮಾತು ಸರಿ ಎನಿಸುತ್ತದೆ. ಈ ಘಟನೆ ನೋಡಿದರೆ ಒಮ್ಮೆ ನಡುಕ ಹುಟ್ಟಿಸುತ್ತದೆ. ಇಲ್ಲಿ ಯುವತಿಯೊಬ್ಬಳು ರಸ್ತೆಯುದ್ದಕ್ಕೂ ಯುವಕನನ್ನು ಅಟ್ಟಾಡಿಸಿಕೊಂಡು ಬಂದಿದ್ದಾಳೆ. ನಡುರಸ್ತೆಯಲ್ಲಿ ವರನನ್ನು ಹಿಡಿದು ನಿಲ್ಲಿಸಿ ಈತನೊಂದಿಗೆ ನನ್ನ ಮದುವೆ ಮಾಡಿಸಿ ಎಂದು ನೆರೆದಿದ್ದ ಜನರ ಮುಂದೆ ಗೋಗರೆದಿದ್ದಾಳೆ.  

ಇದನ್ನೂ ಓದಿ Viral Video: ಬೆಕ್ಕಿಗೆ ಮುತ್ತಿಡಲು ಆರಂಭಿಸಿದ ಹಾವು.! ಬೆಕ್ಕಿನ ಪ್ರತಿಕ್ರಿಯೆ ಹೇಗಿದೆ ನೋಡಿ

ವಾಸ್ತವವಾಗಿ ಈ ಯುವಕ ಮತ್ತು ಯುವತಿಯ ಮದುವೆ ಮೂರು ತಿಂಗಳ ಹಿಂದೆಯೇ ನಿಗದಿಯಾಗಿತ್ತಂತೆ. ವರದಕ್ಷಿಣೆಯ ರೂಪದಲ್ಲಿ ವಧುವಿನ ಕಡೆಯವರು ವರನಿಗೆ ಬೈಕ್ ಮತ್ತು 50 ಸಾವಿರ ರೂಪಾಯಿ ನಗದು ಕೂಡಾ ನೀಡಿದ್ದಾರೆ ಎನ್ನಲಾಗಿದೆ. ಆದರೆ ಯುವಕ ಮಾತ್ರ ಕುಂಟು ನೆಪ ಹೇಳಿಕೊಂಡು ಮದುವೆಯನ್ನು ಮುಂದೂಡುತ್ತಾ ಬಂದಿದ್ದಾನೆ. ಆದರೆ ಯಾವಾಗ ಯುವತಿ ತನ್ನನ್ನು ಮದುವೆಯಾಗಬೇಕಿದ್ದ ಯುವಕನ್ನು ಮಾರುಕಟ್ಟೆಯಲ್ಲಿ ನೋಡಿದ್ದಾಳೋ, ತನ್ನನ್ನು ಈ ಕೂಡಲೇ ಮದುವೆಯಾಗುವಂತೆ ಹಠ ಹಿಡಿದಿದ್ದಾಳೆ. 

 

ನಂತರ ಪೋಲೀಸರ ಮಧ್ಯ ಪ್ರವೇಶದೊಂದಿಗೆ ರಾಜಿ ಪಂಚಾತಿಗೆ ನಡೆದಿದೆ.  ಎರಡೂ ಮನೆಯವರನ್ನು ಕೂರಿಸಿ ಪೋಲಿಸ್ಸ್ರು ಮಾತುಕತೆ ನಡೆಸಿ, ಮದುವೆಗೆ ಒಪ್ಪಿಸಿದ್ದಾರೆ. ಪೊಲೀಸ್ ಠಾಣೆ ಪಕ್ಕದಲ್ಲೇ ಇದ್ದ ದೇವಸ್ಥಾನದಲ್ಲಿ ಇಬ್ಬರ ವಿವಾಹ ಕೂಡಾ ನಡೆದಿದೆ. 

ಇದನ್ನೂ ಓದಿ : Viral Video : ನಾಗರ ಹಾವು - ಮುಂಗುಸಿ ಕಾದಾಟದ ವಿಡಿಯೋ ವೈರಲ್‌

ಯಾವಾಗ ಎಲ್ಲಿ ಏನು ನಡೆಯಬೇಕೋ ಅದು ನಡೆದೇ ತೀರಬೇಕು ಎನ್ನುತ್ತಾರಲ್ಲ ಹಾಗೆ, ಎಷ್ಟೇ ಬೇಡ ಎಂದು ಸುತ್ತಾಡಿದರೂ ಕೊನೆಗೆ ಅದೇ ಯುವತಿಯನ್ನು ಪತ್ನಿಯಾಗಿ ಸ್ವೀಕರಿಸಲೇ ಬೇಕಾಯಿತು. ಗಲಾಟೆಯಾಗಲೀ , ಏನೀ ಆಗಲಿ ಇಬ್ಬರೂ ಸತಿ ಪತಿಯಾಗಿದ್ದು ಆಯಿತು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News