Sun Transit: ಜುಲೈ 17ರವರೆಗೆ ಈ ಮೂರು ರಾಶಿಯವರ ಮೇಲೆ ಸೂರ್ಯದೇವನ ಆಶೀರ್ವಾದ, ಕೈತುಂಬಾ ಹಣ

Sun Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಕರೆಯಲಾಗುವ ಸೂರ್ಯ ದೇವನು ಜೂನ್‌ನಲ್ಲಿ ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಜುಲೈ 17, 2023ರವರೆಗೂ ಇದೇ ರಾಶಿಯಲ್ಲಿ ಸಂಚರಿಸಲಿರುವ ಸೂರ್ಯದೇವನು ಕೆಲವು ರಾಶಿಯವರ ಜೀವನದಲ್ಲಿ ಹಣದ ಹೊಳೆಯನ್ನೇ ಹರಿಸಲಿದ್ದಾನೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Jun 23, 2023, 08:01 AM IST
  • ಮಿಥುನ ರಾಶಿಯ ಅಧಿಪತಿ ಗ್ರಹ ಬುಧ.
  • ಬುಧ ಮತ್ತು ಸೂರ್ಯನ ನಡುವೆ ಸ್ನೇಹದ ಬಂಧನವಿದೆ.
  • ನಾಳೆ ಬುಧನೂ ಕೂಡ ಸ್ವ ರಾಶಿ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜ ಯೋಗ ನಿರ್ಮಾಣಗೊಳ್ಳಲಿದೆ.
Sun Transit: ಜುಲೈ 17ರವರೆಗೆ ಈ ಮೂರು ರಾಶಿಯವರ ಮೇಲೆ ಸೂರ್ಯದೇವನ ಆಶೀರ್ವಾದ, ಕೈತುಂಬಾ ಹಣ  title=
Surya Rashi Parivartane

Surya Rashi Parivartane: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿ ಗ್ರಹವೂ ಕೂಡ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಯನ್ನು ಬದಲಾಯಿಸುತ್ತವೆ. ಗ್ರಹಗಳ ರಾಜನಾದ ಸೂರ್ಯಾದೇವನು ಪ್ರತಿ ಮಾಸವೂ ತನ್ನ ರಾಶಿಚಕ್ರವನ್ನು ಬದಲಾಯಿಸುತ್ತಾನೆ. ಇತ್ತೀಚೆಗಷ್ಟೇ ಸೂರ್ಯನು ವೃಷಭ ರಾಶಿಯನ್ನು ತೊರೆದು ಮಿಥುನ ರಾಶಿಯನ್ನು ಪ್ರವೇಶಿಸಿದ್ದಾನೆ. ಜೂನ್‌ನಲ್ಲಿ ಮಿಥುನ ರಾಶಿಗೆ ಪದಾರ್ಪಣೆ ಮಾಡಿರುವ ಸೂರ್ಯ ಜುಲೈ 17, 2023 ರವೆರೆಗೆ ಇದೇ ರಾಶಿಯಲ್ಲಿ ಸಂಚರಿಸಲಿದ್ದಾನೆ. 

ಮಿಥುನ ರಾಶಿಯ ಅಧಿಪತಿ ಗ್ರಹ ಬುಧ. ಬುಧ ಮತ್ತು ಸೂರ್ಯನ ನಡುವೆ ಸ್ನೇಹದ ಬಂಧನವಿದೆ. ಇದಲ್ಲದೆ, ನಾಳೆ ಬುಧನೂ ಕೂಡ ಸ್ವ ರಾಶಿ ಮಿಥುನ ರಾಶಿಯನ್ನು ಪ್ರವೇಶಿಸಲಿದ್ದು ಬುಧ-ಸೂರ್ಯರ ಸಂಯೋಗದಿಂದ ಬುಧಾದಿತ್ಯ ರಾಜ ಯೋಗ ನಿರ್ಮಾಣಗೊಳ್ಳಲಿದೆ. ಬುಧನ ರಾಶಿಯಲ್ಲಿರುವ ಸೂರ್ಯನ ಪ್ರಭಾವ ಎಲ್ಲಾ 12 ರಾಶಿಯವರ ಮೇಲೆ ಕಂಡು ಬರುತ್ತದೆ. ಆದರೂ, ಈ ಸಮಯವು ಕೆಲವು ರಾಶಿಯವರಿಗೆ ಭಾರೀ ಪ್ರಯೋಜನವನ್ನು ತರಲಿದೆ. ಅದರಲ್ಲೂ ಮೂರು ರಾಶಿಯವರಿಗೆ ಹಠಾತ್ ಧನ ಲಾಭವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ... 

ಇದನ್ನೂ ಓದಿ- Budhaditya RajYoga: ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಅಪಾರ ಧನ ಸಂಪತ್ತು

ಸೂರ್ಯದೇವನ ಕೃಪಾಕಟಾಕ್ಷದಿಂದ ಜುಲೈ 17ರವರೆಗೆ ಈ ರಾಶಿಯವರಿಗೆ ದಿಢೀರ್ ಧನಲಾಭ: -
ಕನ್ಯಾ ರಾಶಿ: 

ಮಿಥುನ ರಾಶಿಯಲ್ಲಿರುವ ಸೂರ್ಯನು ಕನ್ಯಾ ರಾಶಿಯ ಜನರಿಗೆ ಉತ್ತಮ ಫಲಗಳನ್ನು ನೀಡಲಿದ್ದಾನೆ. ಸೂರ್ಯನ ರಾಶಿ ಪರಿವರ್ತನೆಯಿಂದ ಪ್ರಸ್ತುತ ಈ ರಾಶಿಯವರು ವೃತ್ತಿ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣಲಿದ್ದಾರೆ. ಇದಲ್ಲದೆ, ಹೊಸ ಉದ್ಯೋಗಾವಕಾಶಗಳು ಲಭ್ಯವಾಗುವ ಸಾಧ್ಯತೆ ಇದ್ದು  ಮಾಧ್ಯಮ, ಮಾರ್ಕೆಟಿಂಗ್, ಫೈನಾನ್ಸ್‌ಗೆ ಸಂಬಂಧಿಸಿದ ಜನರು ಅಧಿಕ ಲಾಭವನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ. 

ಸಿಂಹ ರಾಶಿ: 
ಸಿಂಹ ರಾಶಿಯ ಅಧಿಪತಿ ಗ್ರಹವಾದ ಸೂರ್ಯನ ರಾಶಿ ಬದಲಾವಣೆಯು ಈ ರಾಶಿಯವರಿಗೆ ಶುಭ ಫಲಗಳನ್ನು ನೀಡಲಿದೆ. ಈ ಸಮಯದಲ್ಲಿ ಸಿಂಹ ರಾಶಿಯವರ ಆದಾಯದಲ್ಲಿ ಹೆಚ್ಚಳ ಕಂಡು ಬರಲಿದ್ದು, ಹೊಸ ಆದಾಯ ಮೂಲ ಸೃಷ್ಟಿಯಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ಬಗೆ ಹರಿಯಲಿವೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ವಿವಾಹಿತರಿಗೆ ಸಂತಾನ ಭಾಗ್ಯ ಯೋಗವೂ ಇದೆ. 

ಇದನ್ನೂ ಓದಿ- Shani Vakri ಅಶುಭ ಪರಿಣಾಮವನ್ನು ತಪ್ಪಿಸಲು ತಪ್ಪದೇ ಈ ಪರಿಹಾರ ಕೈಗೊಳ್ಳಿ

ಧನು ರಾಶಿ: 
ಸೂರ್ಯನ ಸಂಚಾರದಿಂದ ಧನು ರಾಶಿಯವರಿಗೂ ಕೂಡ ಪ್ರಯೋಜನವಾಗಲಿದೆ. ಈ ಸಮಯದಲ್ಲಿ ಕೌಟುಂಬಿಕ ಜೀವನ ಸಂತಸದಿಂದ ಕೂಡಿರಲಿದೆ. ಮಾತ್ರವಲ್ಲ, ನಿಮ್ಮ ಪ್ರತಿ ಕೆಲಸದಲ್ಲೂ ನಿಮ್ಮ ಸಂಗಾತಿ ಬೆನ್ನೆಲುಬಾಗಿ ನಿಲ್ಲಲಿದ್ದಾರೆ. ಸ್ವಂತ ವ್ಯವಹಾರ ಮಾಡುವವರಿಗೆ ಅತ್ಯುತ್ತಮ ಸಮಯ ಇದಾಗಿದ್ದು ಸಂಪತ್ತಿನ ಹೊಳೆಯೇ ಹರಿಯಲಿದೆ. ಒಟ್ಟಾರೆಯಾಗಿ ಈ ಸಮಯವು ನಿಮಗೆ ಅತ್ಯುತ್ತಮ ಸಮಯ ಎಂದು ಸಾಬೀತುಪಡಿಸಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News