Hinduism: ಪ್ರತಿಯೊಬ್ಬರೂ ದೇವಸ್ಥಾನಕ್ಕೆ ಹೋಗಿ ಭಕ್ತಿಯಿಂದ ಪೂಜಿಸುತ್ತಾರೆ. ದೇವಾಲಗಳಿಗೆ ಹೋದಾದ ದೇವರಿಗೆ ಕೈಮುಗಿದು ಪ್ರಾರ್ಥಿಸುವುದು ವಾಡಿಕೆ. ದೇವಾಲಯಗಳಿಗೆ ಹೋದಾಗ ನಾವು ದೇವರಮೂರ್ತಿಯ ಒಂದು ಭಾಗದಲ್ಲಿ ನಿಂತು ಭಕ್ತಿಪೂರ್ವಕವಾಗಿ ನಮಸ್ಕರಿಸುತ್ತೇವೆ.
ಆದರೆ ಯಾವ ಭಾಗದಲ್ಲಿ ನಿಂತು ದೇವರಿಗೆ ನಮಸ್ಕರಿಸಿದರೆ ಉತ್ತಮವೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಇದರ ಬಗ್ಗೆ ಪ್ರತಿಯೊಬ್ಬರೂ ತಿಳಿದುಕೊಳ್ಳುವುದು ಉತ್ತಮ. ಏಕೆಂದರೆ ನಾವು ಗೊತ್ತಿದ್ದೋ ಗೊತ್ತಿಲ್ಲದೆಯೋ ದೇವರ ಒಂದು ಬದಿ ನಿಂತು ದೇವರಿಗೆ ಕೈಮುಗಿಯುತ್ತೇವೆ. ಆದರೆ ನಾವು ಯಾವ ಭಾಗದಲ್ಲಿ ನಿಂತು ದೇವರಿಗೆ ಕೈಮುಗಿಯಬೇಕು ಅನ್ನೋದನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.
ಶಾಸ್ತ್ರಗಳ ಪ್ರಕಾರ, ದೇವಾಲಯಗಳಿಗೆ ಹೋದಾಗ ದೇವರ ವಿಗ್ರಹದ ಬಲಭಾಗದಲ್ಲಿ ನಿಂತು ನಮಸ್ಕರಿಸುವುದು ಸೂಕ್ತ. ಏಕೆಂದರೆ ದೇವರ ಎಡ ಕೈಯಲ್ಲಿ ಗದೆ, ತ್ರಿಶೂಲ ಮುಂತಾದ ಆಯುಧಗಳಿರುತ್ತವೆ. ಹೀಗಾಗಿ ಎಡಭಾಗದಲ್ಲಿ ನಿಂತು ನಮಸ್ಕರಿಸಿದರೆ ದೇವರ ಆಯುಧಗಳಿಂದ ನಮ್ಮ ಶರೀರ ನಾಶವಾಗುವ ಸಾಧ್ಯತೆ ಇರುತ್ತದೆ.
ದೇವರಿಗೆ ಯಾವಾಗ ನಮಸ್ಕರಿಸುವುದಿದ್ದರೂ ಬಲಭಾಗದಲ್ಲೇ ನಮಸ್ಕರಿಸಬೇಕು. ಬಲಭಾಗದ ಕೈ ಸದಾ ಅಭಯ, ಜ್ಞಾನವನ್ನು ನೀಡುತ್ತದೆ. ಹೀಗಾಗಿ ಭಗವಂತನ ಅನುಗ್ರಹ ಸಿಗಬೇಕಾದರೆ ಬಲಭಾಗದಲ್ಲೇ ನಮಸ್ಕರಿಸುವುದು ಸೂಕ್ತ. ಇದನ್ನು ಪಾಲಿಸುವುದರಿಂದ ದೇವರ ಕೃಪೆಯ ಜೊತೆಗೆ ಆಶೀರ್ವಾದವೂ ದೊರೆಯುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.