ದಿನಭವಿಷ್ಯ : ಶುಕ್ರವಾರದ ಈ ದಿನ ಯಾವ ರಾಶಿಯವರ ಭವಿಷ್ಯ ಹೇಗಿದೆ. ಇಂದು ತಾಯಿ ಮಹಾಲಕ್ಷ್ಮಿಯ ಆಶೀರ್ವಾದ ಯಾವ ರಾಶಿಯಯ್ವಾರ ಮೇಲಿರಲಿದೆ. ಯಾವ ರಾಶಿಯ ಜನರು ಎಚ್ಚರಿಕೆಯಿಂದ ಇರುವುದು ಅಗತ್ಯ ತಿಳಿಯಿರಿ.
ಮೇಷ ರಾಶಿ:
ಮೇಷ ರಾಶಿಯವರು ಇಂದು ತಾತ್ಕಾಲಿಕವಾಗಿ ಸಾಲ ಕೇಳುವವರನ್ನು ನಿರ್ಲಕ್ಷಿಸಿ. ನಿಮ್ಮ ಸ್ನೇಹಿತರು ಸಂಬಂಧಿಕರಿಂದ ಆಕಸ್ಮಿಕ ಉಡುಗೊರೆಗಳನ್ನು ಪಡೆಯುವಿರಿ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದ್ದು ಉದ್ಯೋಗ ವ್ಯವಹಾರದಲ್ಲಿ ಪ್ರಗತಿಯ ಹಾದಿಗಳು ತೆರೆಯಲಿವೆ.
ವೃಷಭ ರಾಶಿ:
ಇಂದು ನೀವು ನಿಮ್ಮ ಆರೋಗ್ಯವನ್ನು ಸುಧಾರಿಸುವತ್ತ ಗಮನಹರಿಸಿ. ಯಾವುದೇ ರೀತಿಯ ಹೂಡಿಕೆಗಳನ್ನು ತಪ್ಪಿಸಿ. ಇಲ್ಲವೇ ನಷ್ಟ ಅನುಭವಿಸುವ ಸಂಭವವಿರುತ್ತದೆ. ಪತ್ರವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಿ. ಇಲ್ಲದಿದ್ದರೆ, ನಿಮ್ಮವರಿಂದಲೇ ನೀವು ಮೋಸ ಹೋಗುವ ಸಾಧ್ಯತೆ ಇದೆ.
ಮಿಥುನ ರಾಶಿ:
ಮಿಥುನ ರಾಶಿಯವರಿಗೆ ಅನಗತ್ಯ ಆಲೋಚನೆಗಳು ಇಂದು ನಿಮ್ಮನ್ನು ಬಾಧಿಸಬಹುದು. ಇದರಿಂದ ಪರಿಹಾರಕ್ಕಾಗಿ ಧ್ಯಾನ ಮಾಡಿ. ನೀವು ಮಾಡುವ ಕೆಲಸಗಳಿಗೆ ಯಾರೂ ಕ್ರೆಡಿಟ್ ತೆಗೆದುಕೊಳ್ಳಲು ಬಿಡಬೇಡಿ. ಸಂಶಯಾಸ್ಪದ ಹಣಕಾಸು ವ್ಯವಹಾರಗಳಿಗೆ ಸಿಲುಕದಂತೆ ಎಚ್ಚರಿಕೆ ವಹಿಸಿ. ಇಲ್ಲದಿದ್ದರೆ, ಭವಿಷ್ಯದಲ್ಲಿ ಸಂಕಷ್ಟಕ್ಕೆ ಸಿಲುಕಬಹುದು.
ಕರ್ಕಾಟಕ ರಾಶಿ:
ಕರ್ಕಾಟಕ ರಾಶಿಯವರು ನಿಮ್ಮ ಬಿಡುವಿಲ್ಲದ ವೇಳಾಪಟ್ಟಿಯ ಹೊರತಾಗಿಯೂ ನೀವು ಸುಲಭವಾಗಿ ಆಯಾಸವನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್ ನಲ್ಲಿ ಹೂಡಿಕೆ ಮಾಡುವುದರಿಂದ ಹೆಚ್ಚಿನ ಲಾಭ ಗಳಿಸಬಹುದು. ಅಗತ್ಯಕ್ಕಿಂತ ಹೆಚ್ಚು ಸಮಯವನ್ನು ಸ್ನೇಹಿತರೊಂದಿಗೆ ಕಳೆಯುವುದರಿಂದ ಭವಿಷ್ಯದಲ್ಲಿ ಕಷ್ಟಗಳು ಎದುರಾಗಬಹುದು ಎಚ್ಚರ.
ಇದನ್ನೂ ಓದಿ- Budha Margi: ವಾರದ ಬಳಿಕ 3 ರಾಶಿಯವರ ಅದೃಷ್ಟವನ್ನೇ ಬದಲಿಸಲಿದ್ದಾನೆ ಮಾರ್ಗಿ ಬುಧ
ಸಿಂಹ ರಾಶಿ:
ಸಿಂಹ ರಾಶಿಯವರು ಇಂದು ವಾಹನ ಚಾಲನೆಯಲ್ಲಿ ತುಂಬಾ ಎಚ್ಚರಿಕೆಯಿಂದ ಇರಿ. ಯಾವುದೇ ವಿಚಾರದಲ್ಲಿ ನಿಮ್ಮ ನಿರ್ಲಕ್ಷ್ಯವು ನಿಮಗೆ ಅಪಾಯಕಾರಿ ಎಂದು ಸಾಬೀತುಪಡಿಸಬಹುದು. ಆದಾಗ್ಯೂ, ಇಂದು ಹಣಕಾಸಿನ ಲಾಭ ಸಾಧ್ಯತೆ ಇರುವುದರಿಂದ ಇದು ನಿಮ್ಮ ಬಹುತೇಕ ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಕನ್ಯಾ ರಾಶಿ:
ಕನ್ಯಾ ರಾಶಿಯವರೇ ನಿಮ್ಮ ಅನಿರೀಕ್ಷಿತ ಸ್ವಭಾವವು ನಿಮ್ಮ ವೈವಾಹಿಕ ಜೀವನದಲ್ಲಿ ಬಿರುಕುಂಟು ಮಾಡಬಹುದು. ಹಾಗಾಗಿ, ನಿಮ್ಮ ಪ್ರೀತಿ ಪಾತ್ರರೊಂದಿಗೆ ನಯವಾಗಿ ನಡೆದುಕೊಳ್ಳಿ. ಇದು ಕುಟುಂಬದ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರ ಹೊರತಾಗಿ ವೃತ್ತಿ ವ್ಯವಹಾರದಲ್ಲಿ ಆರ್ಥಿಕ ಲಾಭನ್ನು ಕಾಣಬಹುದು.
ತುಲಾ ರಾಶಿ:
ಇಂದು ನೀವು ಯೋಗ-ಧ್ಯಾನದೊಂದಿಗೆ ದಿನ ಪ್ರಾರಂಭಿಸುವುದು ಪ್ರಯೋಜನಕಾರಿ ಎಂದು ಸಾಬೀತುಪಡಿಸಲಿದೆ. ಹಣಕಾಸಿಗೆ ಸಂಬಂಧಿಸಿದ ವಿಷಯಗಳಲ್ಲಿ ಶುಭ ಸುದ್ದಿ ಕೇಳುವಿರಿ. ಇದಲ್ಲದೆ, ಭೂಮಿ ಆಸ್ತಿಗೆ ಸಂಬಂಧಿಸಿದ ನ್ಯಾಯಾಲಯ ಪ್ರಕರಣಗಳಿದ್ದರೆ ಅದು ನಿಮ್ಮ ಪರವಾಗಿ ಆಗಲಿದೆ. ಕಠಿಣ ಪರಿಶ್ರಮ ಮತ್ತು ತಾಳ್ಮೆಯ ಮೂಲಕ ನಿಮ್ಮ ಗುರಿ ತಲುಪಿ.
ವೃಶ್ಚಿಕ ರಾಶಿ:
ವೃಶ್ಚಿಕ ರಾಶಿಯವರು ಇಂದು ಸಕಾರಾತ್ಮಕ ಆಲೋಚನೆಗಳೊಂದಿಗೆ ಮುಂದುವರೆದರಷ್ಟೇ ದಿನ ಲಾಭದಾಯಕವಾಗಿರುತ್ತದೆ. ನೀವು ಅಪರೂಪವಾಗಿ ಭೇಟಿಯಾಗುವ ಜನರೊಂದಿಗೆ ಸಂವಹನ ನಡೆಸಲು ಒಳ್ಳೆಯ ದಿನ. ನಿಮ್ಮ ಸಂಗಾತಿಯು ಇಂದು ನಿಮಗೆ ಸ್ವರ್ಗ ನಮ್ಮ ಸುತ್ತಲೇ ಇದೆ ಎಂಬುದನ್ನೂ ಮನವರಿಕೆ ಮಾಡಿಸುತ್ತಾರೆ.
ಇದನ್ನೂ ಓದಿ- Ravi Pushya Yoga: ಮೂರು ದಿನಗಳಲ್ಲಿ ಈ ರಾಶಿಯವರಿಗೆ ಭಾಗ್ಯೋದಯ, ಬಂಪರ್ ಧನ ಯೋಗ
ಧನು ರಾಶಿ:
ಧನು ರಾಶಿಯವರಿಗೆ ಅನಿರೀಕ್ಷಿತ ಲಾಭಗಳ ಮೂಲಕ ಹಣಕಾಸಿನ ಸ್ಥಿತಿ ಸುಧಾರಿಸುತ್ತದೆ. ನಿಮ್ಮ ಸಂಗಾತಿಯ ಆರೋಗ್ಯ ಸ್ವಲ್ಪ ಚಿಂತೆಗೆ ಕಾರಣವಾಗಬಹುದು. ಸಂಜೆಗೆ ವಿಶೇಷವಾದದ್ದನ್ನು ಯೋಜಿಸಿ ಮತ್ತು ಅದನ್ನು ಸಾಧ್ಯವಾದಷ್ಟು ರೋಮ್ಯಾಂಟಿಕ್ ಮಾಡಲು ಪ್ರಯತ್ನಿಸಿ. ನಿಮ್ಮ ಸಂಗಾತಿಯು ಇಂದು ನಿಮ್ಮನ್ನು ಪ್ರಶಂಸಿಸುತ್ತಾರೆ.
ಮಕರ ರಾಶಿ:
ಮಕರ ರಾಶಿಯವರು ಇಂದು ನೀವು ಭಾವನಾತ್ಮಕವಾಗಿ ತುಂಬಾ ದುರ್ಬಲರಾಗಿರುತ್ತೀರಿ. ಹಾಗಾಗಿ, ನಿಮ್ಮ ಮನಸ್ಸಿಗೆ ನೋವುಂಟು ಮಾಡುವವರಿಂದ ನೀವು ದೂರವಿರಿ. ಆಸ್ತಿ ವ್ಯವಹಾರಗಳು ಅಸಾಧಾರಣ ಲಾಭವನ್ನು ತರುತ್ತವೆ. ಅರ್ಹ ಉದ್ಯೋಗಿಗಳಿಗೆ ಬಡ್ತಿ ಅಥವಾ ವಿತ್ತೀಯ ಪ್ರಯೋಜನಗಳು ಲಭ್ಯವಾಗಲಿವೆ.
ಕುಂಭ ರಾಶಿ:
ಕುಂಭ ರಾಶಿಯವರು ಇಂದು ವಿಶ್ರಾಂತಿ ಪಡೆಯಲು ಪ್ರಯತ್ನಿಸಿ. ಇಂದು ನಿಮಗೆ ಅಷ್ಟು ಶುಭ ದಿನವಾಗಿಲ್ಲದ ಕಾರಣ ಹಣಕಾಸಿನ ವಿಷಯದಲ್ಲಿ ತುಂಬಾ ಎಚ್ಚರಿಕೆಯಿಂದ ಮುಂದುವರೆಯಿರಿ. ನಿಮ್ಮ ದೀರ್ಘಕಾಲದ ಜಗಳವನ್ನು ಇಂದೇ ಪರಿಹರಿಸಿಕೊಳ್ಳಿ ಏಕೆಂದರೆ ನಾಳೆ ತುಂಬಾ ತಡವಾಗಬಹುದು.
ಮೀನ ರಾಶಿ:
ಕೆಲವು ಸೃಜನಶೀಲ ಕೆಲಸಗಳಲ್ಲಿ ನಿಮ್ಮನ್ನು ತೊಡಗಿಸಿಕೊಳ್ಳುವುದು ಮತ್ತು ರೋಗದ ವಿರುದ್ಧ ಹೋರಾಡಲು ಪ್ರೇರೇಪಿಸುವುದು ಉತ್ತಮ. ಇಂದು, ನೀವು ಬೇರೆಯವರ ಸಹಾಯವಿಲ್ಲದೆ ವ್ಯಾಪಾರ-ವ್ಯವಹಾರದಲ್ಲಿ ಲಾಭವನ್ನು ಗಳಿಸುವಿರಿ. ದೂರದ ಸಂಬಂಧಿಯಿಂದ ಅನಿರೀಕ್ಷಿತ ಶುಭ ಸುದ್ದಿ ನಿಮ್ಮ ದಿನವನ್ನು ಆನಂದಮಯವಾಗಿಸುತ್ತದೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.