Budha Margi: ಮುಂದಿನ 20 ದಿನ ಈ ರಾಶಿಯವರಿಗೆ ವೃದ್ಧಿಯಾಗಲಿದೆ ಧನ-ಸಂಪತ್ತು

Budha Margi: ಕಳೆದ ಕೆಲವು ದಿನಗಳಿಂದ ಹಿಮ್ಮುಖವಾಗಿ ಚಲಿಸುತ್ತಿದ್ದ ಬುಧನು ಸದ್ಯ ಸಿಂಹ ರಾಶಿಯಲ್ಲಿ ತನ್ನ ನೇರ ಚಲನೆಯನ್ನು ಆರಂಭಿಸಲಿದ್ದಾನೆ. ಇದರ ಪರಿಣಾಮ ಎಲ್ಲಾ ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರ ಭಾಗ್ಯದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : Sep 18, 2023, 04:59 PM IST
  • ಸೆಪ್ಟೆಂಬರ್ 16, 2023 ರಂದು ಸಿಂಹ ರಾಶಿಯಲ್ಲಿ ಬುದ್ಧನ ನೇರ ಸಂಚಾರ ಆರಂಭವಾಗಿದೆ.
  • ಬುಧನ ನೇರ ಸಂಚಾರವು, ಜನರ ವೃತ್ತಿ, ವ್ಯವಹಾರದ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ.
  • ಇದೀಗ ಮಾರ್ಗಿ ಬುಧನು ಮೂರು ರಾಶಿಯವರ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ.
Budha Margi: ಮುಂದಿನ 20 ದಿನ ಈ ರಾಶಿಯವರಿಗೆ ವೃದ್ಧಿಯಾಗಲಿದೆ ಧನ-ಸಂಪತ್ತು title=

Budh Margi Effect: ಜ್ಯೋತಿಷ್ಯ ಶಾಸ್ತ್ರದಲ್ಲಿ, ಹಣ, ಬುದ್ದಿ, ವ್ಯವಹಾರ, ತರ್ಕದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಬುಧನನ್ನು ಗ್ರಹಗಳ ರಾಜಕುಮಾರ ಎಂತಲೂ ಕರೆಯಲಾಗುತ್ತದೆ. ಕಳೆದ ಕೆಲವು ದಿನಗಳಿಂದ ಹಿಮ್ಮುಖವಾಗಿ ಚಲಿಸುತ್ತಿದ್ದ ಬುಧ ಸದ್ಯ ಸೂರ್ಯನ ರಾಶಿಚಕ್ರ ಚಿಹ್ನೆಯಲ್ಲಿ ತನ್ನ ನೇರ ಸಂಚಾರವನ್ನು ಆರಂಭಿಸಿದ್ದಾರೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಸೆಪ್ಟೆಂಬರ್ 16, 2023 ರಂದು ಸಿಂಹ ರಾಶಿಯಲ್ಲಿ ಬುದ್ಧನ ನೇರ ಸಂಚಾರ ಆರಂಭವಾಗಿದೆ. ಬುಧನ ನೇರ ಸಂಚಾರವು, ಜನರ ವೃತ್ತಿ, ವ್ಯವಹಾರದ ಜೀವನದಲ್ಲಿ ಮಹತ್ವದ ಬದಲಾವಣೆಯನ್ನು ತರಲಿದೆ. ಇದೀಗ ಮಾರ್ಗಿ ಬುಧನು ಎಲ್ಲಾ 12 ರಾಶಿಯವರ ಮೇಲೂ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತಾನೆ. ಆದರೂ, ಈ ಸಮಯದಲ್ಲಿ ಮೂರು ರಾಶಿಯವರ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಈ ರಾಶಿಯವರ  ಜೀವನದ ಕದ ತಟ್ಟಲಿದೆ ಅದೃಷ್ಟ ! ಸಮೀಪಿಸುತ್ತಿದೆ ಕೈಯ್ಯಲ್ಲಿ ಲಕ್ಷ್ಮೀ ನಲಿದಾಡುವ ಸಮಯ 

ಸಿಂಹ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಬಂಪರ್ ಧನ-ಲಾಭ:- 
ಮಿಥುನ ರಾಶಿ: 

ಮಾರ್ಗಿ ಬುಧನು ಮಿಥುನ ರಾಶಿಯವರಿಗೆ ಮಂಗಳಕರ ಫಲಗಳನ್ನು ತೆರಯಲಿದ್ದಾನೆ. ಈ ಸಮಯದಲ್ಲಿ ನಿಮ್ಮ ವೃತ್ತಿ ಬದುಕಿನಲ್ಲಿ ಮಹತ್ವದ ಬದಲಾವಣೆಗಳಾಗಲಿದೆ. ಪೂರ್ವಜರ ಆಸ್ತಿ-ಪಾಸ್ತಿಯಲ್ಲಿಯೂ ನಿಮಗೆ ಲಾಭವಾಗಲಿದೆ. ತಾಯಿಯ ಕಡೆಯಿಂದ ಶುಭ ವಾರ್ತೆ ಪ್ರಾಪ್ತಿಯಾಗಲಿದ್ದು, ಹೊಸ ಮನೆ, ವಾಹನ ಖರೀದಿ ಯೋಗವೂ ಇದೆ. 

ಸಿಂಹ ರಾಶಿ: 
ಸ್ವ ರಾಶಿಯಲ್ಲಿ ಬುಧನ ನೇರ ಸಂಚಾರವು ಸಿಂಹ ರಾಶಿಯವರಿಗೆ ಅಧಿಕ ಲಾಭದಾಯಕವಾಗಿದೆ. ಈ ಸಂದರ್ಭದಲ್ಲಿ ನಿಮ್ಮ ದೀರ್ಘಕಾಲದಿಂದ ಬಾಕಿ ಉಳಿದಿರುವ ಕೆಲಸಗಳು ಪೂರ್ಣಗೊಳ್ಳಲಿದೆ. ವೃತ್ತಿ ಜೀವನದಲ್ಲಿ ನಿರೀಕ್ಷಿತ ಯಶಸ್ಸು, ಲಾಭ ನಿಮ್ಮದಾಗಲಿದೆ. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆಯೂ ಸಮಯ ಅತ್ಯುತ್ತಮವಾಗಿದ್ದು, ಸಾಲಬಾಧೆಗಳಿಂದ ಹೊರಬರುವಿರಿ. 

ಇದನ್ನೂ ಓದಿ- Budh Uday2023: ಸಿಂಹ ರಾಶಿಯಲ್ಲಿ ಬುಧನ ಉದಯ, 4 ರಾಶಿಗಳ ಜನರ ಅಷ್ಟೈಶ್ವರ್ಯವನ್ನು ದುಪ್ಪಟ್ಟು ಮಾಡಲು ಬರಲಿದ್ದಾಳೆ ಅದೃಷ್ಟ ಲಕ್ಷ್ಮಿ!

ಧನು ರಾಶಿ: 
ಬುಧ ಗ್ರಹದ ನೇರ ಸಂಚಾರವು ಧನು ರಾಶಿಯವರಿಗೆ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ. ಈ ಸಂದರ್ಭದಲ್ಲಿ ನಿಮ್ಮ ಬಹು ದಿನದ ಕನಸುಗಳು ನನಸಾಗಲಿದೆ. ಹಣಕಾಸಿನ ವಿಷಯಗಳಲ್ಲಿ ಬಂಪರ್ ಲಾಭ ಗಳಿಸುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ತಯಾರಿ ನಡೆಸುವವರಿಗೂ ಇದನ್ನು ಅತ್ಯುತ್ತಮ ಸಮಯ ಎಂದು ಹೇಳಲಾಗುತ್ತಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್.

Trending News