ಬೆಂಗಳೂರು: ವೈದಿಕ ಜ್ಯೋತಿಷ್ಯದ ಪ್ರಕಾರ, ನಿನ್ನೆಯಷ್ಟೇ ಫೆಬ್ರವರಿ 27, 2023 ರಂದು, ಗ್ರಹಗಳ ರಾಜಕುಮಾರನಾದ ಬುಧನು ಕುಂಭ ರಾಶಿಯನ್ನು ಪ್ರವೇಶಿಸಿದ್ದಾನೆ. ಗ್ರಹಗಳ ರಾಜನಾದ ಸೂರ್ಯ ಈಗಾಗಲೇ ಈ ರಾಶಿಯಲ್ಲಿ ಸಂಚರಿಸುತ್ತಿದ್ದಾರೆ. ಹಾಗಾಗಿ, ಶನಿಯ ರಾಶಿಚಕ್ರ ಕುಂಭ ರಾಶಿಯಲ್ಲಿ ಬುಧಾದಿತ್ಯ ರಾಜಯೋಗ ನಿರ್ಮಾಣಗೊಂಡಿದೆ.
ಕುಂಭ ರಾಶಿಯಲ್ಲಿ ಬುಧ ಮತ್ತು ಆದಿತ್ಯ (ಸೂರ್ಯ)ರಿಂದ ರೂಪುಗೊಂಡಿರುವ ಈ ಶುಭ ಬುಧಾದಿತ್ಯ ರಾಜಯೋಗವು ಎಲ್ಲಾ 12 ರಾಶಿಯವರ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಮಾರ್ಚ್ 15ರವರೆಗೆ ಬುಧಾದಿತ್ಯ ರಾಜಯೋಗದಿಂದ ಕೆಲವು ರಾಶಿಯವರ ಜೀವನದಲ್ಲಿ ಭಾರೀ ಅದೃಷ್ಟವನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...
ಶನಿಯ ರಾಶಿಯಲ್ಲಿ ಬುಧಾದಿತ್ಯ ಯೋಗ- ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಭಾರೀ ಅದೃಷ್ಟ:-
ಮೇಷ ರಾಶಿ:
ಕುಂಭ ರಾಶಿಯಲ್ಲಿ ಬುಧನ ರಾಶಿ ಪರಿವರ್ತನೆಯಿಂದ ರೂಪುಗೊಂಡಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ವೃತ್ತಿ ರಂಗದಲ್ಲಿ ಭರ್ಜರಿ ಲಾಭವನ್ನು ತರಲಿದೆ. ಈ ರಾಶಿಯ ಜನರು ವೃತ್ತಿ, ವಿದ್ಯಾಭ್ಯಾಸ, ವ್ಯಾಪಾರ-ವ್ಯವಹಾರಗಳಲ್ಲಿ ನಿರೀಕ್ಷಿತ ಯಶಸ್ಸನ್ನು ಪಡೆಯಲಿದ್ದಾರೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ- Shani Uday 2023 : ಶನಿ ಉದಯದಿಂದ ಈ ರಾಶಿಯವರಿಗೆ ಒಲಿಯಲಿದೆ ಅದೃಷ್ಟ, ಪ್ರತಿ ಕೆಲಸದಲ್ಲೂ ಯಶಸ್ಸು!
ವೃಷಭ ರಾಶಿ:
ಶನಿಯ ರಾಶಿಯಲ್ಲಿ ರೂಪುಗೊಂಡಿರುವ ಬುಧಾದಿತ್ಯ ಯೋಗವು ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಉದ್ಯೋಗ, ವ್ಯವಹಾರದಲ್ಲಿ ಬಂಪರ್ ಲಾಭವನ್ನು ತರಲಿದೆ. ಈ ಸಮಯದಲ್ಲಿ ನೀವು ಆತ್ಮ ವಿಶ್ವಾಸದಿಂದ ಮಾಡಿದ ಯಾವುದೇ ಕೆಲಸದಲ್ಲಿ ನೀವು ಯಶಸ್ವಿಯಾಗುವಿರಿ. ಆದಾಯವೂ ಹೆಚ್ಚಾಗಲಿದೆ.
ಮಿಥುನ ರಾಶಿ:
ಶನಿಯ ರಾಶಿಯಲ್ಲಿ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲವನ್ನು ನೀಡಲಿದೆ. ಅದರಲ್ಲೂ ಉದ್ಯೋಗಸ್ಥರಿಗೆ ಈ ಸಮಯವು ಅತ್ಯುತ್ತಮವಾಗಿದ್ದು ಬಡ್ತಿ ದೊರೆಯುವ ಸಾಧ್ಯತೆಯೂ ಇದೆ.
ತುಲಾ ರಾಶಿ:
ಮಾರ್ಚ್ 15ರವರೆಗೆ ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ ಎಂಬಂತ ಸ್ಥಿತಿ ಇರಲಿದೆ. ಹಠಾತ್ ಧನವೃದ್ಧಿಯಿಂದಾಗಿ ಆರ್ಥಿಕ ಸ್ಥಿತಿ ಸುಧಾರಿಸಲಿದೆ. ನಿಮ್ಮ ನೆಚ್ಚಿನ ಉದ್ಯೋಗದ ಆಫರ್ ದೊರೆಯುವ ಸಾಧ್ಯತೆಯಿದೆ.
ಇದನ್ನೂ ಓದಿ- ಗುರು ಮತ್ತು ಶುಕ್ರರು ಸೇರಿ ಈ ರಾಶಿಯವರ ಜೀವನದಲ್ಲಿ ಹರಿಸಲಿದ್ದಾರೆ ಹಣದ ಹೊಳೆ
ಧನು ರಾಶಿ:
ಕುಂಭ ರಾಶಿಯಲ್ಲಿ ನಿರ್ಮಾಣವಾಗಿರುವ ಬುಧಾದಿತ್ಯ ರಾಜಯೋಗವು ಈ ರಾಶಿಯವರಿಗೆ ಉದ್ಯೋಗ ರಂಗದಲ್ಲಿ ಭಾರೀ ಯಶಸ್ಸು, ಲಾಭವನ್ನು ತರಲಿದೆ. ಈ ಸಮಯದಲ್ಲಿ ಉದ್ಯೋಗಸ್ಥರಿಗೆ ಪ್ರಮೋಷನ್ ದೊರೆಯುವ ಸಾಧ್ಯತೆ ಇದ್ದು, ಹಣದ ಹರಿವು ಕೂಡ ಹೆಚ್ಚಾಗಲಿದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.