Shattila Ekadashi: ಹಿಂದೂ ಧರ್ಮದಲ್ಲಿ ಏಕಾದಶಿಗೆ ಬಹಳ ಮಹತ್ವವಿದೆ. ಏಕಾದಶಿಯ ಉಪವಾಸ, ವ್ರತಾಚರಣೆಯಿಂದ ಭಗವಾನ್ ವಿಷ್ಣುವೀಣೆ ಕೃಪೆಗೆ ಪಾತ್ರರಾಗಬಹುದು ಎಂದು ಹೇಳಲಾಗುತ್ತದೆ. ಇಂದು ಜನವರಿ 18, 2023, ಬುಧವಾರ ಮಾಘ ಮಾಸದ ಕೃಷ್ಣ ಪಕ್ಷದ ಏಕಾದಶಿ ತಿಥಿ. ಈ ದಿನ ಷಟ್ತಿಲ ಏಕಾದಶಿಯನ್ನು ಆಚರಿಸಲಾಗುತ್ತಿದೆ. ಇಂದು ಪೂರ್ಣ ವಿಧಿ ವಿಧಾನಗಳಿಂದ ಭಗವಾನ್ ವಿಷ್ಣುವನ್ನು ಆರಾಧಿಸುವುದರಿಂದ ಮನೋಕಾಮನೆಗಳು ಈಡೇರುತ್ತವೆ ಎಂಬ ನಂಬಿಕೆ ಇದೆ.
ದಂತಕಥೆಯ ಪ್ರಕಾರ, ಶ್ರೀ ಕೃಷ್ಣನು ಅರ್ಜುನ ಮತ್ತು ಯುಧಿಷ್ಠಿರನಿಗೆ ಈ ಏಕಾದಶಿ ಉಪವಾಸದ ಮಹತ್ವವನ್ನು ವಿವರಿಸಿದ್ದಾನೆ. ಏಕಾದಶಿ ಉಪವಾಸ ಮಾಡುವುದರಿಂದ ವ್ಯಕ್ತಿಯು ತನ್ನ ಪೂರ್ವ ಪಾಪಗಳಿಂದ ಮುಕ್ತಿ ಪಡೆಯುತ್ತಾನೆ ಎಂದು ಹೇಳಲಾಗುತ್ತದೆ.
ಧರ್ಮಗ್ರಂಥಗಳ ಪ್ರಕಾರ, ಷಟ್ತಿಲ ಏಕಾದಶಿಯ ದಿನದಂದು ಉಪವಾಸದ ಜೊತೆಗೆ ದಾನ ಧರ್ಮ ಮಾಡುವುದಕ್ಕೆ ಬಹಳ ಮಹತ್ವವಿದೆ. ಇದರಿಂದ ವ್ಯಕ್ತಿಯು ತನ್ನ ಜೀವನದಲ್ಲಿ ಎದುರಾಗಿರುವ ಹಲವು ಸಂಕಷ್ಟಗಳಿಂದ ಮುಕ್ತಿ ಹೊಂದಬಹುದು ಎಂದು ಹೇಳಲಾಗುತ್ತದೆ. ಅಂತೆಯೇ ಈ ದಿನ ಕೆಲವು ಕೆಲಸಗಳನ್ನು ಮಾಡುವುದನ್ನು ನಿಷೇಧಿಸಲಾಗಿದೆ. ಹಾಗಿದ್ದರೆ, ಷಟ್ತಿಲ ಏಕಾದಶಿಯ ದಿನ ಯಾವ ಕೆಲಸಗಳನ್ನು ಮಾಡಬೇಕು ಮತ್ತು ಯಾವ ಕೆಲಸಗಳನ್ನು ಮಾಡುವುದನ್ನು ತಪ್ಪಿಸಬೇಕು ಎಂದು ತಿಳಿಯೋಣ...
ಇದನ್ನೂ ಓದಿ- Shani Gachar 2023: ಎರಡೂವರೆ ವರ್ಷಗಳ ಕಾಲ ಕುಂಭ ರಾಶಿಯಲ್ಲಿರುವ ಶನಿ ನಿಮ್ಮ ಮೇಲೆ ಏನು ಪರಿಣಾಮ
ಷಟ್ತಿಲ ಏಕಾದಶಿಯ ದಿನ ಈ ಕೆಲಸಗಳನ್ನು ಮಾಡುವುದರಿಂದ ಪುಣ್ಯ:
* ಇಂದು ಷಟ್ತಿಲ ಏಕಾದಶಿಯ ದಿನ ಬಿಳಿ ಎಳ್ಳನ್ನು ನೀವು ಸ್ನಾನ ಮಾಡುವ ನೀರಿನಲ್ಲಿ ಹಾಕಿ, ಆ ನೀರಿನಲ್ಲಿ ಸ್ನಾನ ಮಾಡಿ.
* ಇಂದು ಉಪವಾಸವನ್ನು ಆಚರಿಸಿ, ಏಕಾದಶಿಯ ಕಥೆಯನ್ನು ಪಠಿಸಿ.
* ಇಂದು ಶ್ರೀ ಹರಿಗೆ ಎಳ್ಳನ್ನು ನೇವೇದ್ಯವಾಗಿ ಅರ್ಪಿಸಿ, ಪೂಜಿಸುವುದರಿಂದ ಭಕ್ತರ ಮನೋಕಾಮನೆಗಳು ಪೂರ್ಣಗೊಳ್ಳುತ್ತವೆ.
* ಪುರಾಣಗಳ ಪ್ರಕಾರ, ಷಟ್ತಿಲ ಏಕಾದಶಿಯಂದು ಭಗವಾನ್ ವಿಷ್ಣುವಿಗೆ ಎಳ್ಳನ್ನು ಅರ್ಪಿಸುವುದು ತುಂಬಾ ಶುಭ. ಇದರಿಂದ ಪಿತೃಗಳ ಆಶೀರ್ವಾದ ಲಭಿಸುತ್ತದೆ ಎಂದು ನಂಬಲಾಗಿದೆ.
* ಇದಲ್ಲದೆ, ಷಟ್ತಿಲ ಏಕಾದಶಿಯ ದಿನ ಎಳ್ಳಿನ ದಾನಕ್ಕೆ ಬಹಳ ಮಹತ್ವವಿದೆ.
ಇದನ್ನೂ ಓದಿ- Suttur Jatra Mahotsav: ಇಂದಿನಿಂದ 6 ದಿನಗಳ ಕಾಲ ಅದ್ದೂರಿ ಸುತ್ತೂರು ಜಾತ್ರಾ ಮಹೋತ್ಸವ
ಷಟ್ತಿಲ ಏಕಾದಶಿಯ ದಿನ ಅಪ್ಪಿತಪ್ಪಿಯೂ ಈ ಕೆಲಸಗಳನ್ನು ಮಾಡಲೇಬಾರದು:
>> ಏಕಾದಶಿ ಉಪವಾಸ ಆಚರಿಸುವವರು ಇಂದು ಯಾರಿಗೂ ಮನಸ್ಸನ್ನು ನೋಯಿಸುವಂತಹ ಮಾತುಗಳನ್ನು ಆಡಬಾರದು.
>> ಷಟ್ತಿಲ ಏಕಾದಶಿಯ ದಿನ ಯಾವುದೇ ಸಸ್ಯವನ್ನು ಕೀಳಬಾರದು.
>> ಇಂದು ಮಾಂಸಾಹಾರ, ಮದ್ಯ ಪಾನದ ಬಗ್ಗೆ ಯೋಚಿಸಲೂ ಬಾರದು.
>> ಆಹಾರದಲ್ಲಿ ಅನ್ನ, ಬದನೇಕಾಯಿ ಸೇವನೆ ನಿಷಿದ್ಧ.
>> ಷಟ್ತಿಲ ಏಕಾದಶಿಯ ದಿನ ಉಪವಾಸ, ವ್ರತಾಚರಣೆ ಮಾಡುವವರು ಹಗಲಿನಲ್ಲಿ ಮಲಗಬಾರದು.
>> ಷಟ್ತಿಲ ಏಕಾದಶಿಯ ದಿನ ರಾತ್ರಿ ಹಾಸಿಗೆ ಮೇಲೆ ಮಲಗಬಾರದು ಎಂದು ಹೇಳಲಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಧಾರ್ಮಿಕ ನಂಬಿಕೆಗಳು ಮತ್ತು ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.