Krishna Janmashtami: ಈ ವರ್ಷ ಈ ಜನ್ಮಾಷ್ಟಮಿಯನ್ನು ಆಗಸ್ಟ್ 26 ಸೋಮವಾರದಂದು ಆಚರಿಸಲಾಗುತ್ತದೆ. ಕೃಷ್ಣನನ್ನು ಪ್ರೀತಿಯ ಸಂಕೇತವೆಂದು ಪರಿಗಣಿಸಲಾಗಿದೆ. ಈ ಕನ್ನಯ್ಯನಿಗೆ ಪೂಜೆ ಮಾಡುವಾಗ ಸುಂದರವಾಗಿ ಅಲಂಕರಿಸಲು ಎಲ್ಲರೂ ಇಷ್ಟಪಡುತ್ತಾರೆ..
ಕೃಷ್ಣನಿಗೆ ನಾವು ಕೇವಲ ಅಲಂಕಾರ ಮಾಡುವುದಿಲ್ಲ.. ಸಾಮಾನ್ಯವಾಗಿ ಕೃಷ್ಣನೇ ಅಲಂಕಾರ ಪ್ರಿಯ ಎಂದು ಹೇಳಬಹುದು. ಆತ ಯಾವಾಗಲೂ ಸುಂದರವಾಗಿಯೇ ಕಾಣುತ್ತಾನೆ. ಆದರೆ ಕೃಷ್ಣನ ಸೌಂದರ್ಯವನ್ನು ಹೆಚ್ಚಿಸುವಲ್ಲಿ ನವಿಲು ಗರಿ ಬಹುಮುಖ್ಯ ಪಾತ್ರ ವಹಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಅಸಲಿಗೆ.. ಕೃಷ್ಣ ತಲೆಗೆ ನವಿಲುಗರಿ ಯಾಕೆ ಧರಿಸುತ್ತಾರೆ ಗೊತ್ತಾ? ಅದರ ಹಿಂದಿನ ಕಾರಣವನ್ನು ಈಗ ತಿಳಿದುಕೊಳ್ಳೋಣ...
ಇದನ್ನೂ ಓದಿ-"ನನ್ನ ಹೃದಯ ಒಡೆದಿದೆ.. ಇನ್ನೂ ಜಯಾ ಬಚ್ಚನ್‌ಗೂ ಕಷ್ಟ" ಕಣ್ಣೀರಿಡುತ್ತಾ ಪತ್ನಿಯ ಕುರಿತು ಹೀಗಂದಿದ್ದೇಕೆ ಬಿಬ್ ಬಿ..?
ರಾಧೆಯ ಮೇಲಿನ ಪ್ರೀತಿಯಿಂದಾಗಿ ನವಿಲು ಗರಿಯನ್ನು ಧರಿಸುತ್ತಾನೆ. ಪುರಾಣ ಕಥೆಯ ಪ್ರಕಾರ, ರಾಧೆಯ ಅರಮನೆಯಲ್ಲಿ ಅನೇಕ ನವಿಲುಗಳು ಇದ್ದವು. ಒಮ್ಮೆ ಕನ್ಹಯ್ಯ ತನ್ನ ಕೊಳಲು ನುಡಿಸಿದರೆ, ರಾಧಾ ಅದರ ಸದ್ದಿಗೆ ನೃತ್ಯ ಮಾಡಲು ಪ್ರಾರಂಭಿಸುತ್ತಾಳೆ. ಜೊತೆಗೆ ನವಿಲುಗಳೂ ಸಂಭ್ರಮದಿಂದ ನರ್ತಿಸತೊಡಗಿದವು. ಹೀಗಿರುವಾಗ ಒಂದು ನವಿಲು ಗರಿ ಕುಣಿದು ಕುಪ್ಪಳಿಸಿತು. ಶ್ರೀಕೃಷ್ಣನು ಆ ನವಿಲು ಗರಿಯನ್ನು ಎತ್ತಿಕೊಂಡು ತನ್ನ ತಲೆಯ ಮೇಲೆ ಇಟ್ಟುಕೊಂಡನು.. ಹೀಗಾಗಿ, ಅವರು ನವಿಲು ಗರಿಯನ್ನು ರಾಧೆಯ ಪ್ರೀತಿಯ ಸಂಕೇತವೆಂದು ಪರಿಗಣಿಸಿ.. ಯಾವಾಗಲೂ ತನ್ನ ಕಿರೀಟದಲ್ಲಿ ನವಿಲು ಗರಿಯನ್ನು ಅಲಂಕರಿಸುತ್ತಾನೆ ಶ್ರೀ ಕ್ರಷ್ಣ..
ಇದನ್ನೂ ಓದಿ-ನನ್ನಲ್ಲಿರುವ ಈ ಸಮಸ್ಯೆಯಿಂದಲೇ ಎಲ್ಲಾ ಹುಡುಗಿಯರು ಬಿಟ್ಟು ಹೋಗುತ್ತಿರುವುದು! ಸತ್ಯ ಒಪ್ಪಿಕೊಂಡ ಸಲ್ಮಾನ್ ಖಾನ್
ಕನ್ನಯ್ಯನ ಸಹೋದರ ಬಲರಾಮ್ ಶೇಷನಾಗನ ಅವತಾರ ಎಂದು ನಂಬಲಾಗಿದೆ. ನವಿಲು ಮತ್ತು ಹಾವು ಪರಸ್ಪರ ಶತ್ರುಗಳು, ಆದರೆ ಕನ್ಹಯ್ಯನ ಹಣೆಯಲ್ಲಿರುವ ನವಿಲು ಗರಿಯು ಶತ್ರುಗಳಿಗೂ ತನ್ನ ಜೀವನದಲ್ಲಿ ವಿಶೇಷ ಸ್ಥಾನವನ್ನು ನೀಡುತ್ತದೆ ಎಂಬ ಸಂದೇಶವನ್ನು ನೀಡುತ್ತದೆ.
ನವಿಲು ಮತ್ತು ಹಾವು ಪರಸ್ಪರ ಶತ್ರುಗಳು. ಯಾರ ಜಾತಕದಲ್ಲಿ ಕಲಸರ್ಪ ಯೋಗವಿದೆಯೋ ಅವರು ಯಾವಾಗಲೂ ನವಿಲು ಗರಿಯನ್ನು ತಮ್ಮ ಬಳಿ ಇಟ್ಟುಕೊಳ್ಳಬೇಕು. ಶ್ರೀಕೃಷ್ಣನಿಗೆ ಕಾಲ ಸರ್ಪ ಯೋಗವೂ ಇತ್ತು ಎಂದು ಪುರಾಣಗಳು ನಂಬುತ್ತವೆ. ಆದ್ದರಿಂದಲೇ ಶ್ರೀ ಕೃಷ್ಣ ಸದಾ ನವಿಲು ಗರಿಯನ್ನು ಹಣೆಯ ಮೇಲೆ ಧರಿಸುತ್ತಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ