"ನನ್ನ ಹೃದಯ ಒಡೆದಿದೆ.. ಇನ್ನೂ ಜಯಾ ಬಚ್ಚನ್‌ಗೂ ಕಷ್ಟ" ಕಣ್ಣೀರಿಡುತ್ತಾ ಪತ್ನಿಯ ಕುರಿತು ಹೀಗಂದಿದ್ದೇಕೆ ಬಿಬ್‌ ಬಿ..?

amitabh bachchan and jaya bachchan: ಬಾಲಿವುಡ್ ನ ಬಿಗ್ ಬಿ ಅಥವಾ ಅಮಿತಾಬ್ ಬಚ್ಚನ್ ಎಂದರೆ ಸದಾ ಸುದ್ದಿಯಲ್ಲಿರುವ ಹೆಸರು. ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚೆಗಷ್ಟೇ ಅಮಿತಾಭ್ ಬಚ್ಚನ್ ಒಂದು ದೊಡ್ಡ ಮಾಹಿತಿಯನ್ನು ಬಹಿರಂಗಪಡಿಸುವ ಮೂಲಕ ಫ್ಯಾನ್ಸ್‌ಗೆ ಶಾಕ್‌ ನೀಡಿದ್ದಾರೆ.. 

1 /7

ಬಚ್ಚನ್ ಕುಟುಂಬದ ನಡುವೆ ವಿವಾದವಿದೆ ಎಂಬ ವದಂತಿಗಳು ನಿರಂತರವಾಗಿ ಕೇಳಿಬರುತ್ತಿವೆ. ಇಷ್ಟೇ ಅಲ್ಲ, ಐಶ್ವರ್ಯಾ ರೈ ಮತ್ತು ಅಭಿಷೇಕ್ ಬಚ್ಚನ್ ವಿಚ್ಛೇದನ ಪಡೆಯಲಿದ್ದಾರೆ ಎನ್ನಲಾಗಿದೆ. ಆದರೆ, ಈ ಬಗ್ಗೆ ಬಚ್ಚನ್ ಕುಟುಂಬದ ಯಾರೊಬ್ಬರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.   

2 /7

ಅಮಿತಾಭ್ ಬಚ್ಚನ್ ಬಹಳ ದಿನಗಳಿಂದ ಸಿನಿಮಾ ಜತ್ತಿನಲ್ಲಿದ್ದು, ಬಾಲಿವುಡ್‌ಗೆ ಹಲವು ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಅದರಂತೆ ಅಮಿತಾಬ್-ಜಯಾ ಬಚ್ಚನ್ ಅವರು ಜಾವೇದ್ ಅಖ್ತರ್ ಮತ್ತು ಸಲ್ಮಾನ್ ಖಾನ್ ಅವರ ತಂದೆ ಸಲೀಂ ಖಾನ್ ಅವರೊಂದಿಗೆ ವಿಶೇಷವಾದ ಬಾಂಧವ್ಯ ಹೊಂದಿದ್ದಾರೆ..   

3 /7

ಅಲ್ಲದೇ ಅಮಿತಾಬ್ ಬಚ್ಚನ್ ಮತ್ತು ಜಯಾ ಸಲೀಂ ಖಾನ್ ಮತ್ತು ಜಾವೇದ್ ಅಖ್ತರ್ ಅವರೊಂದಿಗೆ ಕೆಲಸ ಮಾಡಿದ್ದಾರೆ... ಅಮಿತಾಬ್ ಬಚ್ಚನ್ ಅಭಿನಯದ ಜಂಜೀರ್ ಚಿತ್ರ ಹಿಟ್ ಆದ ನಂತರವೇ ಜಯಾ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ವಿವಾಹವಾದರು.  

4 /7

ಜಾವೇದ್ ಮತ್ತು ಸಲೀಂ ಜೋಡಿ ಬೇರ್ಪಟ್ಟಾಗ ಅನೇಕರು ಬೇಸರಗೊಂಡಿದ್ದರು.. ಸಲೀಂ-ಜಾವೇದ್ ಅವರ ಸಾಕ್ಷ್ಯಚಿತ್ರ 'ದಿ ಆಂಗ್ರಿ ಯಂಗ್ ಮ್ಯಾನ್' ಸಮಯದಲ್ಲಿ, ಅಮಿತಾಬ್ ಬಚ್ಚನ್ ಮತ್ತು ಜಯಾ ಬಚ್ಚನ್ ಅವರು  ಬೇರ್ಪಟ್ಟಾಗ ನಾವೂ ನಿರಾಶೆಗೊಂಡಿದ್ದೇವೆ ಎಂದು ಒಪ್ಪಿಕೊಂಡಿದ್ದರು..   

5 /7

ಆಗ ಸಲೀಂ ಮತ್ತು ಜಾವೇದ್ ಅವರ ಬಗ್ಗೆ ಮಾತನಾಡಿದ ಅಮಿತಾಬ್..‌ "ಇಬ್ಬರೂ ಬೇರ್ಪಟ್ಟ ನಂತರ ನನಗೆ ತುಂಬಾ ನೋವಾಯಿತು.. ಆದರೆ ನಿಮ್ಮೊಂದಿಗೆ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು ತುಂಬಾ ಖುಷಿಯಾಗಿದೆ.. ಜಯಾ ಬಚ್ಚನ್‌ ಸಹ ಇದರಿಂದ ಬೇಸರಗೊಂಡಿದ್ದಾರೆ" ಎಂದಿದ್ದರು..   

6 /7

ಅಲ್ಲದೇ ಜಯಾ ಬಚ್ಚನ್ ಸಹ ಆ ಸಮಯದಲ್ಲಿ ಭಾವುಕರಾಗಿ "ಇದು ಕಡಿಮೆ ಸಮಯ, ಆದರೆ ಅದ್ಭುತವಾಗಿದೆ. ಜೀವನದಲ್ಲಿ ಏನೇನೆಲ್ಲಾ ಇದೆ ಅದೆಲ್ಲವೂ ಅಲ್ಪಾವಧಿಗೆ ಮಾತ್ರ.. ಆದರೆ ಕೆಲವೊಂದನ್ನು ಶಾಶ್ವತವಾಗಿ ಉಳಿಸಿಕೊಳ್ಳಲು ನಾವು ಪ್ರಯತ್ನಿಸಬೇಕು ಎಂದು ಜಯಾ ಬಚ್ಚನ್‌ ಹೇಳಿದ್ದರು.. ಇದೀಗ ಅಮಿತಾಬ್‌ ಹಾಗೂ ಜಯಾ ಅವರ ಹೇಳಿಕೆಗಳು ಸಖತ್‌ ವೈರಲ್‌ ಆಗುತ್ತಿವೆ..   

7 /7

ಇನ್ನು ಅಮಿತಾಬ್ ಬಚ್ಚನ್ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಅಮಿತಾಬ್ ಬಚ್ಚನ್ ಕೌನ್ ಬನೇಂಗಾ ಕರೋಡ್ಪತಿಯ ಹೊಸ ಸೀಸನ್‌ನೊಂದಿಗೆ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಇಷ್ಟೇ ಅಲ್ಲ, ಅಮಿತಾಬ್ ಬಚ್ಚನ್ ಸಾಮಾಜಿಕ ಜಾಲತಾಣಗಳಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಅಭಿಮಾನಿಗಳಿಗಾಗಿ ವಿಶೇಷ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಿದ್ದಾರೆ.