ಈ ಹೊತ್ತಿನಲ್ಲಿ ದೇವರ ಕೋಣೆಯನ್ನು ಶುಚಿಗೊಳಿಸಿದರೆ ಮನೆ ತೊರೆಯುತ್ತಾಳೆ ಮಹಾಲಕ್ಷ್ಮೀ

Mandir Cleaning Astro Tips:ಜ್ಯೋತಿಷ್ಯದಲ್ಲಿ, ದೇವಾಲಯಕ್ಕೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. 

Written by - Ranjitha R K | Last Updated : Sep 13, 2023, 04:08 PM IST
  • ಪೂಜೆಯ ಕೋಣೆ ಗರಿಷ್ಠ ಧನಾತ್ಮಕ ಶಕ್ತಿಯನ್ನು ಹರಡುವ ಸ್ಥಳ
  • ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ.
  • ದೇವರ ಕೋಣೆ ಶುಚಿಗೊಳಿಸಲು ಇದೆ ನಿಯಮ
ಈ ಹೊತ್ತಿನಲ್ಲಿ ದೇವರ ಕೋಣೆಯನ್ನು ಶುಚಿಗೊಳಿಸಿದರೆ ಮನೆ ತೊರೆಯುತ್ತಾಳೆ ಮಹಾಲಕ್ಷ್ಮೀ  title=

Mandir Cleaning Astro Tips : ಮನೆಯಲ್ಲಿರುವ ಪೂಜೆಯ ಕೋಣೆ ಗರಿಷ್ಠ ಧನಾತ್ಮಕ ಶಕ್ತಿಯನ್ನು ಹರಡುವ ಸ್ಥಳವಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ಪವಿತ್ರ ಸ್ಥಳವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ಹಿಂದೂ ಧರ್ಮದಲ್ಲಿ ಪೂಜೆಗೆ ವಿಶೇಷ ಪ್ರಾಮುಖ್ಯತೆ ಇದೆ. ಪೂಜೆಯ ಮೂಲಕ ಭಕ್ತಿ ಭಾವದೊಂದಿಗೆ ದೇವರೊಂದಿಗೆ ಸಂಪರ್ಕವನ್ನು ಅನುಭವಿಸಲು ಸಹಾಯವಾಗುತ್ತದೆ ಎನ್ನುವುದು ನಂಬಿಕೆ.  ಪ್ರತಿ ಬಾರಿ ಪೂಜೆ ಮಾಡಬೇಕೆಂದೇ ದೇವಾಲಯಕ್ಕೆ ಹೋಗುವುದು ಸಾಧ್ಯವಾಗುವುದಿಲ್ಲ. ಹಾಗಾಗಿ ಮನೆಯಲ್ಲಿಯೇ ಇದ್ದುಕೊಂಡು ಬೆಳಗ್ಗೆ ಮತ್ತು ಸಂಜೆ ದೇವರಿಗೆ ಪೂಜೆ ಸಲ್ಲಿಸಲು ಸಾಧ್ಯವಾಗುವಂತೆ ದೇವರ ಕೋಣೆಯನ್ನು ನಿರ್ಮಿಸಲಾಗುತ್ತದೆ. ಪ್ರತ್ಯೇಕ ದೇವರ ಕೊನೆ ಇಲ್ಲದೆ ಹೋದರೆ ದೇವರ ಮಂಟಪ ಇಡುವ ಮೂಲಕ ದೇವರಿಗೆ ಪ್ರತ್ಯೇಕ ಸ್ಥಳವನ್ನು ಮೀಸಲಿಡಲಾಗುತ್ತದೆ. ಜ್ಯೋತಿಷ್ಯದಲ್ಲಿ, ದೇವಾಲಯಕ್ಕೆ ಸಂಬಂಧಿಸಿದ ಕೆಲವು ಕ್ರಮಗಳನ್ನು ಉಲ್ಲೇಖಿಸಲಾಗಿದೆ. 

ದೇವರ ಕೋಣೆ ಶುಚಿಗೊಳಿಸಲು ಇದೆ ನಿಯಮ :
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವರ ಪೂಜೆಯಾದ ನಂತರ, ಕೋಣೆಯ ಬಾಗಿಲು ಮುಚ್ಚಬೇಕು. 
- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಶನಿವಾರದಂದು ದೇವಸ್ಥಾನವನ್ನು ಸ್ವಚ್ಛಗೊಳಿಸುವುದು ಅವಶ್ಯಕ. ಈ ದಿನ ಶುಚಿಗೊಳಿಸುವುದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಬರುತ್ತದೆ ಮತ್ತು ಮನೆಯಿಂದ ಬಡತನ ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಗುರುವಾರ ಮತ್ತು ಏಕಾದಶಿಯಂದು ದೇವಾಲಯವನ್ನು ಸ್ವಚ್ಛಗೊಳಿಸಬಾರದು. 

ಇದನ್ನೂ ಓದಿ : ಈ ರಾಶಿಯವರ ಎಲ್ಲಾ ಕಷ್ಟಗಳಿಗೂ ಕೊನೆ ! ಮುಂದಿನ ತಿಂಗಳಿನಿಂದಲೇ ಬಂಗಾರದ ಬದುಕು

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ದೇವಸ್ಥಾನವನ್ನು ಸ್ವಚ್ಛಗೊಳಿಸಿದಾಗ, ವಿಗ್ರಹಗಳು ಮತ್ತು ಫೋಟೋಗಳನ್ನು ಕೆಳಗೆ ಇಡಬಾರದು. ಅವುಗಳನ್ನು ಯಾವಾಗಲೂ ಎತ್ತರದ ಸ್ಥಳದಲ್ಲಿ ಇಡಬೇಕು ಎಂಬುದನ್ನು ನೆನಪಿನಲ್ಲಿಡಿ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವಸ್ಥಾನದ ದೀಪವನ್ನು ಪ್ರತಿನಿತ್ಯ ಹಚ್ಚುವುದರ ಜೊತೆಗೆ ಅದನ್ನು ಸ್ವಚ್ಛಗೊಳಿಸುವುದು ಕೂಡಾ ಮುಖ್ಯ.

ಇದಲ್ಲದೇ ಪೂಜೆಯ ನಂತರ ಮನೆಯಲ್ಲಿ ಗಂಗಾಜಲವನ್ನೂ ಸಿಂಪಡಿಸಬೇಕು. ಇದು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುತ್ತದೆ.

ಇದನ್ನೂ ಓದಿ : ಇನ್ನು ಮೂರು ದಿನಗಳಲ್ಲಿ ಈ ರಾಶಿಯಲ್ಲಿ ಧನಯೋಗ ! ಕೈ ಸೇರುವುದು ಕುಬೇರನ ಖಜಾನೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ದೇವರ ಪೂಜೆ ಮಾಡುವಾಗ ಕರ್ಪೂರವನ್ನು ಉರಿಸಬೇಕು. ಮನೆಯಲ್ಲಿ ಕರ್ಪೂರವನ್ನು ಉರಿಸುವುದರಿಂದ ವಾಸ್ತು ದೋಷಗಳು ದೂರವಾಗುತ್ತವೆ. ಇದರೊಂದಿಗೆ ಪಿತ್ರದೋಷದಿಂದ ಮುಕ್ತಿಯೂ ಸಿಗುತ್ತದೆ. 

ಧರ್ಮಗ್ರಂಥಗಳ ಪ್ರಕಾರ, ದೇವಾಲಯವನ್ನು ರಾತ್ರಿಯಲ್ಲಿ ಸ್ವಚ್ಛಗೊಳಿಸಬಾರದು. ಅದನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ರಾತ್ರಿಯಲ್ಲಿ ಮನಸ್ಸು ಮತ್ತು ದೇಹ ಎರಡೂ ಅಶುದ್ಧವಾಗಿರುತ್ತವೆ. ಆದ್ದರಿಂದ ರಾತ್ರಿ ಹೊತ್ತಿನಲ್ಲಿ  ದೇವರ ಕೊನೆ, ದೇವರ ಮಂಟಪ ಯಾವುದನ್ನೂ ಶುಚಿಗೊಳಿಸಬಾರದು. 
 
ಇದನ್ನೂ ಓದಿ : ಶುಕ್ರನ ಅಧಿಪತ್ಯದ ರಾಶಿಯಲ್ಲಿ ರಾಜಯೋಗ ! ಈ ರಾಶಿಯವರ ಜೀವನದಲ್ಲಿ ಸಿರಿ ಸಂಪತ್ತು ಹೊತ್ತು ತರಲಿದೆ ನವರಾತ್ರಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

 

Trending News