ಇನ್ನೆರಡು ದಿನಗಳಲ್ಲಿ ಗುರು ಪುಷ್ಯ ಯೋಗ: ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು

GURU PUSHYA YOGA: ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರು ಪುಷ್ಯ ಯೋಗವನ್ನು ಅತ್ಯಂತ ಮಂಗಳಕರ ಯೋಗ ಎಂದು ಬಣ್ಣಿಸಲಾಗುತ್ತದೆ. ಮಾತ್ರವಲ್ಲ, ಈ ಯೋಗದಲ್ಲಿ ಕೆಲವು ಕೆಲಸಗಳನ್ನು ಆರಂಭಿಸುವುದನ್ನು ಕೂಡ ತುಂಬಾ ಶುಭ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Apr 25, 2023, 06:33 AM IST
  • ಗುರು ಪುಷ್ಯ ನಕ್ಷತ್ರದ ಸಮಯದಲ್ಲಿ ಗ್ರಹಗಳ ರಾಜನಾದ ಸೂರ್ಯದೇವನು ಮೇಷ ರಾಶಿಯಲ್ಲಿ ಕುಳಿತಿರುತ್ತಾನೆ.
  • ಚಂದ್ರನು ಕರ್ಕಾಟಕ ರಾಶಿಯಲ್ಲಿಯೂ, ನ್ಯಾಯದ ದೇವರು ಶನಿ ಮಹಾತ್ಮ ಕುಂಭ ರಾಶಿಯಲ್ಲೂ ಸಂಚರಿಸಲಿದ್ದಾರೆ.
  • ಈ ವೇಳೆ ಕೆಲವು ಕೆಲಸಗಳನ್ನು ಆರಂಭಿಸುವುದರಿಂದ ದೇವ-ದೇವತೆಗಳು ಪ್ರಸನ್ನರಾಗಿ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು, ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲಸುತ್ತದೆ ಎಂಬ ನಂಬಿಕೆಯೂ ಇದೆ.
ಇನ್ನೆರಡು ದಿನಗಳಲ್ಲಿ ಗುರು ಪುಷ್ಯ ಯೋಗ: ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು  title=
GURU PUSHYA YOGA

GURU PUSHYA YOGA 2023: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಪುಷ್ಯ ಯೋಗ ಅಥವಾ ಗುರು ಪುಷ್ಯ ನಕ್ಷತ್ರ ಯೋಗವನ್ನು ಮಹಾನ್ ಯೋಗ, ಯೋಗಗಳಲ್ಲೇ ಮುಖ್ಯ ಯೋಗ ಎಂದೆಲ್ಲಾ ಹೇಳಲಾಗಿದೆ. ಈ ಅತ್ಯಂತ ಮಂಗಳಕರ ಯೋಗದಲ್ಲಿ ಯಾವುದೇ ಕೆಲಸವನ್ನು ಮಾಡುವುದರಿಂದ ಕೆಲಸದಲ್ಲಿ ಯಶಸ್ಸು ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೆ, ಏನಿದು ಗುರು ಪುಷ್ಯ ಯೋಗ. ಇದರ ಶುಭ ಸಮಯ ಯಾವುದು. ಈ ಯೋಗದಲ್ಲಿ ಯಾವ ಕೆಲಸಗಳನ್ನು ಆರಂಭಿಸಿದರೆ ಒಳಿತು ಎಂದು ತಿಳಿಯೋಣ... 

ಏನಿದು ಗುರು ಪುಷ್ಯ ನಕ್ಷತ್ರ ಯೋಗ?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗುರು ಪುಷ್ಯ ನಕ್ಷತ್ರ ಯೋಗವು ಅತ್ಯಂತ ಬಲಶಾಲಿಯಾದ ಯೋಗ. ಇದು ಎಂತಹ ಯೋಗವೆಂದರೆ ಯಾವುದೇ ವ್ಯಕ್ತಿಗೆ ಜಾತಕದಲ್ಲಿ ಎಂತಹದ್ದೇ ಕೆಟ್ಟ ಪ್ರಭಾವ ನಡೆಯುತ್ತಿದ್ದರೂ ಸಹ, ಈ ಯೋಗವು ಅದನ್ನು ಶುಭ ಸಮಯವನ್ನಾಗಿ ಪರಿವರ್ತಿಸಬಲ್ಲ ಯೋಗ ಎನ್ನಲಾಗುತ್ತದೆ. ಹಾಗಾಗಿಯೇ ಇದನ್ನು ಸಹಾನುಭೂತಿಯ ಯೋಗ ಎಂತಲೂ ಬಣ್ಣಿಸಲಾಗುತ್ತದೆ. ಆದಾಗ್ಯೂ, ಈ ಯೋಗದಲ್ಲಿ ಮದುವೆಯಂತಹ ಶುಭ ಕಾರ್ಯಗಳನ್ನು ಮಾಡುವುದನ್ನು ಮಂಗಳಕರ ಎಂದು ಹೇಳಲಾಗುವುದಿಲ್ಲ. ಮಾತ್ರವಲ್ಲ, ಗುರು ಪುಷ್ಯ ಯೋಗದಲ್ಲಿ ಮಾಡುವ ಮದುವೆಯ ಎಂದಿಗೂ ಕೂಡ ಯಶಸ್ವಿಯಾಗುವುದಿಲ್ಲ ಎಂದು ಸಹ ಹೇಳಲಾಗುತ್ತದೆ. 

ಇದನ್ನೂ ಓದಿ- Weekly Horoscope: ಏಪ್ರಿಲ್ ಕೊನೆಯ ವಾರ ಈ ರಾಶಿಯವರಿಗೆ ತುಂಬಾ ಮಂಗಳಕರ

ಧರ್ಮ ಗ್ರಂಥಗಳ ಪ್ರಕಾರ, ಸಂಪತ್ತಿನ ಅಧಿದೇವತೆಯಾದ ಮಾತೆ ಮಹಾಲಕ್ಷ್ಮೀ ಈ  ಗುರು ಪುಷ್ಯ ಯೋಗದಲ್ಲಿ ಜನಿಸಿದರು ಎಂದು ಹೇಳಲಾಗಿದೆ. ಗುರುವಾರದಂದು ಪುಷ್ಯ ನಕ್ಷತ್ರವು ಬಂದಾಗ ಅದನ್ನು ಗುರು ಪುಷ್ಯಾಮೃತ ಯೋಗ ಎಂತಲೂ, ಭಾನುವಾರದಂದು ಪುಷ್ಯ ನಕ್ಷತ್ರ ಬಂದಾಗ ಅದನ್ನು ರವಿ ಪುಷ್ಯಾಮೃತ ಯೋಗ ಎಂತಲೂ ಕರೆಯಲಾಗುತ್ತದೆ. ಇದೀಗ ಇದೇ ಗುರುವಾರ  27 ಏಪ್ರಿಲ್ 2023 ರಂದು ಬೆಳಿಗ್ಗೆ 7 ಗಂಟೆಯಿಂದ ಅದರ ಮರುದಿನ ಬೆಳಿಗ್ಗೆ ಎಂದರೆ ಶುಕ್ರವಾರದಂದು ಬೆಳಿಗ್ಗೆ 6 ಗಂಟೆ 7 ನಿಮಿಷದವರೆಗೆ ಇರಲಿದೆ. 

ಗುರು ಪುಷ್ಯ ನಕ್ಷತ್ರದ ಸಮಯದಲ್ಲಿ ಗ್ರಹಗಳ ರಾಜನಾದ ಸೂರ್ಯದೇವನು ಮೇಷ ರಾಶಿಯಲ್ಲಿ ಕುಳಿತಿರುತ್ತಾನೆ. ಚಂದ್ರನು ಕರ್ಕಾಟಕ ರಾಶಿಯಲ್ಲಿಯೂ, ನ್ಯಾಯದ ದೇವರು ಶನಿ ಮಹಾತ್ಮ ಕುಂಭ ರಾಶಿಯಲ್ಲೂ ಸಂಚರಿಸಲಿದ್ದಾರೆ. ಈ ವೇಳೆ ಕೆಲವು ಕೆಲಸಗಳನ್ನು ಆರಂಭಿಸುವುದರಿಂದ ದೇವ-ದೇವತೆಗಳು ಪ್ರಸನ್ನರಾಗಿ ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು, ಕುಟುಂಬದಲ್ಲಿ ಸುಖ-ಸಮೃದ್ಧಿ ನೆಲಸುತ್ತದೆ ಎಂಬ ನಂಬಿಕೆಯೂ ಇದೆ. ಹಾಗಿದ್ದರೆ, ಗುರು ಪುಷ್ಯ ಯೋಗದಲ್ಲಿ ಯಾವ ಕೆಲಸಗಳನ್ನು ಮಾಡುವುದು ಶುಭ ಎಂದು ತಿಳಿಯೋಣ... 

ಇದನ್ನೂ ಓದಿ- Mahadhan Rajayoga: ಈ 3 ರಾಶಿಯವರಿಗೆ ಮಹಾಧನ ರಾಜಯೋಗ.. ಸಂಪತ್ತಿನ ಮಳೆ ಸುರಿಸಲಿದ್ದಾನೆ ಶುಕ್ರ!

ಗುರು ಪುಷ್ಯ ಯೋಗದಲ್ಲಿ ಈ ಕೆಲಸಗಳನ್ನು ಆರಂಭಿಸಿದರೆ ಭಾರೀ ಯಶಸ್ಸು: 
* ಗುರು ಪುಷ್ಯ ಯೋಗದಲ್ಲಿ ಯಾವುದೇ ರೀತಿಯ ಪ್ರಮುಖ ಒಪ್ಪಂದಗಳನ್ನು ಮಾಡಿಕೊಳ್ಳುವುದನ್ನು ತುಂಬಾ ಪ್ರಾಶಸ್ತ್ಯ ಎಂದು ನಂಬಲಾಗಿದೆ.
* ಹೊಸ ವ್ಯಾಪಾರ-ವ್ಯವಹಾರಗಳನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಗುರು ಪುಷ್ಯ ಯೋಗವು ಅತ್ಯಂತ ಮಂಗಳಕರ ಎಂದು ಬಣ್ಣಿಸಲಾಗುತ್ತದೆ.
* ನೀವು ಹೊಸ ಮನೆ, ಭೂಮಿ, ವಾಹನ ಖರೀದಿಸುವ ಬಗ್ಗೆ ಚಿಂತಿಸುತ್ತಿದ್ದರೆ, ಇಲ್ಲವೇ ಇವುಗಳನ್ನು ಮಾರಾಟ ಮಾಡಲು, ಬದಲಾಯಿಸಲು ಯೋಚಿಸುತ್ತಿದ್ದರೆ ಈ ದಿನ ಹೆಚ್ಚು ಸೂಕ್ತವಾಗಿದೆ ಎಂದು ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News