Vashikaran mantra : ಜೀವನದಲ್ಲಿ ಬಯಸಿದ್ದೆಲ್ಲವೂ ಸಿಗುವುದಿಲ್ಲ. ಅನೇಕ ಬಾರಿ ನಮ್ಮ ಹಣೆಬರಹದ ವಿರುದ್ಧ ಹೋರಾಡಬೇಕಾಗುತ್ತದೆ. ಅದರಲ್ಲೂ ಪ್ರೀತಿಪಾತ್ರರನ್ನು ಪಡೆಯುವ ವಿಷಯ ಬಂದಾಗ, ಅನೇಕ ಪ್ರಯತ್ನಗಳ ಹೊರತಾಗಿಯೂ, ಪ್ರೀತಿ ಕೈಜಾರಿ ಹೋಗುತ್ತದೆ. ಹೆಚ್ಚಾಗಿ ಮದುವೆಯ ನಂತರವೂ ಹೆಂಡತಿಗೆ ಗಂಡನ ಪ್ರೀತಿ ಸಿಗುವುದಿಲ್ಲ. ಇಂತಹ ಪರಿಸ್ಥಿತಿಗೆ ಪರಿಹಾರವನ್ನು ತಂತ್ರ ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ.
ಹೌದು.. ತಂತ್ರ ಶಾಸ್ತ್ರದಲ್ಲಿ ಕೆಲವು ಪರಿಹಾರಗಳನ್ನು ಉಲ್ಲೇಖಿಸಲಾಗಿದೆ, ಅದರ ಮೂಲಕ ನೀವು ನಿಮ್ಮ ಲವರ್ ಅಥವಾ ಪತಿ, ಪತ್ನಿ ಪ್ರೀತಿಯನ್ನು ಪಡೆಯಬಹುದು. ನೀವು ನಿಮ್ಮ ಸಂಗಾತಿಯ ಪ್ರೀತಿಯನ್ನು ಪಡೆಯಲು ಬಯಸಿದರೆ ಅಥವಾ ನಿಮ್ಮ ನೆಚ್ಚಿನ ವ್ಯಕ್ತಿಯನ್ನು ನಿಮ್ಮ ಸಂಗಾತಿಯನ್ನಾಗಿ ಮಾಡಿಕೊಳ್ಳಲು ಬಯಸಿದರೆ ಈ ಪರಿಹಾರ ಮಾಡಿದರೆ ಸಾಧ್ಯವಾಗುತ್ತದೆ.
ಇದನ್ನೂ ಓದಿ: ಮನೆಯಲ್ಲಿ ಲಕ್ಷ್ಮಿ ಪೂಜೆಯನ್ನು ಶಾಸ್ತ್ರೋಕ್ತವಾಗಿ ಮಾಡುವ ಸರಳ ವಿಧಾನ..!
ನೀವು ಯಾರಿಗಾದರೂ ಪ್ರೀತಿಪಾತ್ರರಾಗಬೇಕೆಂದು ಬಯಸಿದರೆ, 108 ಎಸಳು ಬೆಳ್ಳುಳ್ಳಿ ತೆಗೆದುಕೊಳ್ಳಿ. ಸಿಪ್ಪೆ ಸುಲಿದು ಕೆಂಪು ದಾರದಲ್ಲಿ ಕಟ್ಟಿ ಮಾಲೆ ಮಾಡಿಕೊಂಡು ಧರಿಸಿ. ನಂತರ ಏಕಾಂತ ಸ್ಥಳದಲ್ಲಿ ಕುಳಿತು ಮಣ್ಣಿನ ದೀಪವನ್ನು ಬೆಳಗಿಸಿ. ನಂತರ ನೀವು ಪ್ರೀತಿಸಲು ಬಯಸುವ ವ್ಯಕ್ತಿ/ಮಹಿಳೆಯ ಹೆಸರನ್ನು ಧ್ಯಾನಿಸಿ 'ವಸನ್ಯ ಕುರುಂ ಭವನ್ತಿ ಸ್ವಾಹಾ' ಎಂಬ ಮಂತ್ರವನ್ನು 108 ಬಾರಿ ಜಪಿಸಿ.
ಇದನ್ನೂ ಓದಿ:ದೀಪಾವಳಿ ಹಬ್ಬದಂದು ಯಾವ ರಾಶಿಯವರು ಯಾವ ಬಣ್ಣದ ಬಟ್ಟೆ ಧರಿಸಿದ್ರೆ ಅದೃಷ್ಟ ಬರುತ್ತೆ ಗೊತ್ತೆ..!
ಈ ಪರಿಹಾರವನ್ನು ಯಾವುದೇ ಗುರುವಾರ, ಶನಿವಾರ ಅಥವಾ ಮಂಗಳವಾರ ಮಾಡಬಹುದು. ಇದನ್ನು ನೀವು ಇಷ್ಟ ಪಟ್ಟ ವ್ಯಕ್ತಿ ನಿಮ್ಮ ಬಳಿಗೆ ಬರುವವರೆಗೆ ಮಾಡಿ. ಈ ಪ್ರಯೋಗವನ್ನು ನಿಯಮಿತವಾಗಿ ಮಾಡುವುದರಿಂದ ನಿಮ್ಮ ಎಲ್ಲಾ ಪ್ರೀತಿಗೆ ಸಂಬಂಧಿತ ಸಮಸ್ಯೆಗಳು ದೂರವಾಗುತ್ತವೆ ಮತ್ತು ನಿಮ್ಮ ಸಂಗಾತಿ ನಿಮ್ಮತ್ತ ಆಕರ್ಷಿತರಾಗುತ್ತಾರೆ.
(ಹಕ್ಕುತ್ಯಾಗ: ಇಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಜ್ಞಾನವನ್ನು ಆಧರಿಸಿದೆ. Zee Kannada News ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.