ದಿನಭವಿಷ್ಯ 30-09-2024: ಸೋಮವಾರದಂದು ಮಘಾ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಮನೆ ಖರೀದಿ ಯೋಗ

Today Horoscope 30th September 2024: ಸೋಮವಾರದ ಈ ದಿನ ಮಘಾ ನಕ್ಷತ್ರ, ಶುಭ ಯೋಗ ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Sep 30, 2024, 06:54 AM IST
  • ಇಂದು ತ್ರಯೋದಶಿ ತಿಥಿ
  • ಸೋಮವಾರದ ಈ ದಿನ ಮಘಾ ನಕ್ಷತ್ರ, ಶುಭ ಯೋಗ
  • ಈ ದಿನ ಯಾವ ರಾಶಿಯವರಿಗೆ ಶುಭ ಎಂದು ತಿಳಿಯಿರಿ.
ದಿನಭವಿಷ್ಯ 30-09-2024:  ಸೋಮವಾರದಂದು ಮಘಾ ನಕ್ಷತ್ರ, ಶುಭ ಯೋಗ: ಈ ರಾಶಿಯವರಿಗೆ ಮನೆ ಖರೀದಿ ಯೋಗ  title=

Somavara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ವರ್ಷಾ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ, ತ್ರಯೋದಶಿ ತಿಥಿ, ಸೋಮವಾರದ ಈ ದಿನ ಮಘಾ ನಕ್ಷತ್ರ, ಶುಭ ಯೋಗ ಯಾವ ರಾಶಿಯವರಿಗೆ ಮಂಗಳಕರವಾಗಿದೆ ತಿಳಿಯಿರಿ.

ಮೇಷ ರಾಶಿಯವರ ಭವಿಷ್ಯ (Aries Horoscope):  
ಈ ರಾಶಿಯ ವ್ಯಾಪಾರಸ್ಥರಿಗೆ ಇಂದು ಶುಭ ದಿನ. ಶತ್ರುಗಳು ಸ್ನೇಹಿತರಂತೆ ನಟಿಸುವ ಸಂಭವವಿರುವುದರಿಂದ ಅಂತಹವರ ಬಗ್ಗೆ ಜಾಗರೂಕರಾಗಿರಿ. ಕುಟುಂಬದಲ್ಲಿ ವಿವಾಹ ಮಾತುಕತೆಗಳು ಮುಂದುವರೆಯಬಹುದು. ಹೊಸ ವ್ಯವಹಾರಗಳು ಕೈಗೂಡಬಹುದು. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ಈ ರಾಶಿಯ ಜನರಿಗೆ ಇಂದು ಕೆಲಸದ ಒತ್ತಡ ಹೆಚ್ಚಾಗಲಿದೆ. ನಿಮ್ಮ ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯವಿರುತ್ತದೆ. ಪದೇ ಪದೇ ಸಾಲ ಪಡೆದು ಸರಿಯಾದ ಸಮಯಕ್ಕೆ ಹಿಂದಿರುಗಿಸದವರಿಗೆ ಸಾಲ ನೀಡುವುದನ್ನು ತಪ್ಪಿಸಿ. ಕುಟುಂಬಸ್ಥರಿಂದ ಶುಭ ಸುದ್ದಿ ನಿರೀಕ್ಷಿಸಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಈ ರಾಶಿಯವರಿಗೆ ಇಂದು ಯೋಜಿತ ಕಾರ್ಯಗಳನ್ನು ಪೂರ್ಣಗೊಳಿಸುವುದರಿಂದ ಶುಭ. ಕುಟುಂಬಸ್ಥರೊಂದಿಗೆ ದೂರದ ಪ್ರಯಾಣಕ್ಕಾಗಿ ಯೋಜಿಸಬಹುದು. ಉತ್ತಮ ಆದಾಯವು ಮನಸ್ಸಿನ ಸಂತೋಷವನ್ನು ಇಮ್ಮಡಿಗೊಳಿಸಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಈ ರಾಶಿಯ ಜನರು ಇಂದು ನಿಮ್ಮ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಇಲ್ಲವೇ, ಭವಿಷ್ಯದಲ್ಲಿ ಇದರಿಂದ ಭಾರೀ ತೊಂದರೆಯನ್ನು ಅನುಭವಿಸಬೇಕಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ಸಮಸ್ಯೆಗಳು ಉಲ್ಬಣಿಸಬಹುದು. 

ಇದನ್ನೂ ಓದಿ- 30 ವರ್ಷಗಳ ಬಳಿಕ ಶನಿಯ ಸ್ವಂತ ರಾಶಿಯಲ್ಲಿ ಕೇಂದ್ರ ತ್ರಿಕೋನ ರಾಜಯೋಗ, ಈ ರಾಶಿಯವರಿಗೆ ರಾಜವೈಭೋಗ

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಈ ರಾಶಿಯ ಜನರಿಗೆ ಇಂದು ಸವಾಲುಗಳಿಂದ ಕೂಡಿದ ದಿನ. ಮನಸ್ಸಿನ ಗೊಂದಲಗಳನ್ನು ನಿವಾರಿಸಲು ಸಮಯ ತೆಗೆದುಕೊಳ್ಳಿ. ಉದ್ಯೋಗದಲ್ಲಿ ಯಾವುದೇ ನಿರ್ಲಕ್ಷ್ಯವನ್ನು ತಪ್ಪಿಸಿ. ವಂಚನೆ ಅಪಾಯವಿರುವುದರಿಂದ ಬೇರೆಯವರನ್ನು ಕಣ್ಮುಚ್ಚಿ ನಂಬುವುದನ್ನು ತಪ್ಪಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ಈ ರಾಶಿಯ ಜನರಿಗೆ ಇಂದು ಸಂತೋಷದ ದಿನ. ವ್ಯವಹಾರದಲ್ಲಿ ಗುಡ್ ನ್ಯೂಸ್ ಕೇಳಬಹುದು. ಸಂಗಾತಿಯೊಂದಿಗೆ ಪ್ರಯಾಣಕ್ಕಾಗಿ ಯೋಜಿಸಬಹುದು. ಹಣಕಾಸಿನ  ಸ್ಥಿತಿ ಸುಧಾರಿಸಲಿದೆ. ವಿದ್ಯಾರ್ಥಿಗಳು ಮಾನಸಿಕ ಒತ್ತಡದಿಂದ ಮುಕ್ತಿ ಪಡೆಯುವರು. 

ತುಲಾ ರಾಶಿಯವರ ಭವಿಷ್ಯ (Libra Horoscope): 
ಈ ರಾಶಿಯವರು ಇಂದು ಉದ್ಯೋಗದಲ್ಲಿ ಉನ್ನತ ಸ್ಥಾನವನ್ನು ಅಲಂಕರಿಸುವರು. ಕೌಟುಂಬಿಕ ಭಿನ್ನಾಭಿಪ್ರಾಯಗಳು ಬಗೆಹರಿಯುವ ಸಂಭವವಿದೆ. ಯೋಚಿಸಿ ಹೂಡಿಕೆ ಮಾಡುವುದರಿಂದ ಲಾಭ ಸಿಗಲಿದೆ. ಆದರೆ, ಮಕ್ಕಳ ವಿಷಯದಲ್ಲಿ ಚಿಂತೆ ಬಾಧಿಸಬಹುದು. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಈ ರಾಶಿಯವರಿಗೆ ಇಂದು ಕೊಂಚ ಒತ್ತಡದ ದಿನ. ಇದು ನಿಮ್ಮ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗಬಹುದು. ಯಾವುದೇ ರೀತಿಯ ನಿರ್ಲಕ್ಷ್ಯವನ್ನು ತಪ್ಪಿಸಿ. ಭಿನ್ನಾಭಿಪ್ರಾಯಗಳನ್ನು ತಪ್ಪಿಸಲು ಮುಕ್ತವಾಗಿ ಮಾತನಾಡುವುದನ್ನು ಪರಿಗಣಿಸಿ. 

ಇದನ್ನೂ ಓದಿ-  ಅಡುಗೆಮನೆಯಲ್ಲಿ ಯಾವುದೇ ಕಾರಣಕ್ಕೂ ಈ 2 ವಸ್ತು ಖಾಲಿಯಾಗಲೇಬಾರದು... ಮನೆ ಒಕ್ಕರಿಸುತ್ತಾಳೆ ದಾರಿದ್ರ್ಯ ಲಕ್ಷ್ಮೀ!

ಧನು ರಾಶಿಯವರ ಭವಿಷ್ಯ (Sagittarius Horoscope):  
ಈ ರಾಶಿಯ ಜನರು ಇಂದು ಎಚ್ಚರಿಕೆಯಿಂದ ಮುಂದುವರೆಯುವುದು ಒಳ್ಳೇದು. ಕೆಲಸದಲ್ಲಿ ಸ್ಪರ್ಧೆಗಳು ಹೆಚ್ಚಾಗಬಹುದು. ಇದಕ್ಕಾಗಿ ಮಾನಸಿಕವಾಗಿ ಸಿದ್ಧರಾಗಿರಿ. ಕ್ಷುಲ್ಲಕ ವಿಷಯಗಳಿಂದ ಒತ್ತಡವನ್ನು ಅನುಭವಿಸುವಿರಿ. ಕಚೇರಿಯಲ್ಲಿ ಮೇಲಾಧಿಕಾರಿಗಳ ಮಾತಿಗೆ ಕಿವಿಗೊಡದಿದ್ದರೆ ತೊಂದರೆ. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ಈ ರಾಶಿಯ ಜನರಿಗೆ ಇಂದು ಶುಭ ಫಲಗಳಿಂದ ಕೂಡಿದ ದಿನ. ಆರ್ಥಿಕ ಸ್ಥಿತಿ ಸುಧಾರಣೆಯಿಂದ ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಕುಟುಂಬ ಸದಸ್ಯರ ಅಗತ್ಯತೆಗಳನ್ನು ಸುಲಭವಾಗಿ ಪೂರೈಸುವಿರಿ. ಒಟ್ಟಾರೆ ಇದು ನಿಮ್ಮ ಜೀವನದಲ್ಲಿ ಮರೆಯಲಾಗದ ದಿನ. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ಈ ರಾಶಿಯವರು ಇಂದು ಧನಾತ್ಮಕ ಫಲಿತಾಂಶಗಳನ್ನು ನಿರೀಕ್ಷಿಯಬಹುದು. ಕೆಲಸದ ನಿಮಿತ್ತ ಕೈಗೊಳ್ಳುವ ಪ್ರಯಾಣಗಳು ಲಾಭದಾಯಕವಾಗಿರಲಿದೆ. ಆದರೆ, ಯಾವುದೇ ರೀತಿಯ ಘರ್ಷಣೆಯನ್ನು ತಪ್ಪಿಸಲು ಸಂಯಮದಿಂದ ಮಾತನಾಡಿ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ಈ ರಾಶಿಯ ಜನರು ಇಂದು ಪ್ರತಿ ವಿಷಯದಲ್ಲೂ ಯೋಚಿಸಿ ಮುಂದುವರೆಯಬೇಕು. ಇಲ್ಲದಿದ್ದರೆ, ಭಾರೀ ನಷ್ಟವನ್ನು ಅನುಭವಿಸಬೇಕಾಗಬಹುದು. ವ್ಯವಹಾರದಲ್ಲಿ ಅಪರಿಚಿತರನ್ನು ನಂಬುವ ತಪ್ಪನ್ನು ಎಂದಿಗೂ ಮಾಡಬೇಡಿ. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News