ಹಸ್ತದ ಕೆಲವು ರೇಖೆಗಳು ತುಂಬಾ ಮಂಗಳಕರವಾಗಿರುತ್ತವೆ ಮತ್ತು ಕೆಲವು ಅಶುಭಕರವಾಗಿರುತ್ತವೆ. ಇನ್ನು ಈ ರೇಖೆಗಳು ವ್ಯಕ್ತಿಯ ಭವಿಷ್ಯದ ಬಗ್ಗೆ ಪ್ರಮುಖ ಸೂಚನೆಗಳನ್ನು ನೀಡುತ್ತವೆ ಎಂದರೆ ನೀವು ನಂಬಲೇ ಬೇಕು. ಅಂಗೈಯಲ್ಲಿರುವ ಮಂಗಳ ರೇಖೆ ಮತ್ತು ಅದೃಷ್ಟ ರೇಖೆ ನಿಮ್ಮ ಜೀವನವನ್ನೇ ಬದಲಾಯಿಸುತ್ತದೆ. ಕೈಯಲ್ಲಿರುವ ರೇಖೆಗಳು ಯಾವ ರೀತಿಯಲ್ಲಿ ಜೀವನಕ್ಕೆ ಉತ್ತಮ ಫಲಿತಾಂಶಗಳನ್ನು ನೀಡುತ್ತದೆ ಎಂದು ತಿಳಿಯೋಣ.
ಇದನ್ನೂ ಓದಿ: ಕಿಚ್ಚ ಸುದೀಪ್‌ಗೆ ಸಿಕ್ತು ಮತ್ತೊಂದು ಸರ್‌ಪ್ರೈಸ್! ಕಪಿಲ್ ದೇವ್ ಕೊಟ್ಟ ಗಿಫ್ಟ್ ಏನು ಗೊತ್ತಾ?
ಎಲ್ಲಾ ಜನರು ತಮ್ಮ ಕೈಯಲ್ಲಿ ಮಂಗಳ ರೇಖೆಯನ್ನು ಹೊಂದಿರುವುದಿಲ್ಲ. ಈ ಮಂಗಳರೇಖೆಯು ವ್ಯಕ್ತಿಯಲ್ಲಿ ಅದೃಷ್ಟವನ್ನುಂಟು ಮಾಡುತ್ತದೆ. ಆದ್ದರಿಂದ, ಹಸ್ತಸಾಮುದ್ರಿಕ ಶಾಸ್ತ್ರದಲ್ಲಿ ಅಂಗೈಯಲ್ಲಿ ಮಂಗಳ ರೇಖೆಯನ್ನು ಹೊಂದುವುದು ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ.
- ಮಂಗಳ ರೇಖೆಯಿಂದ ಒಂದು ರೇಖೆಯು ಹೊರಹೊಮ್ಮಿ, ಅದೃಷ್ಟ ರೇಖೆಯನ್ನು ಮುಟ್ಟಿದರೆ, ಅಂತಹ ವ್ಯಕ್ತಿಯು ಬಹಳಷ್ಟು ಪ್ರಯೋಜನಗಳನ್ನು ಪಡೆಯುತ್ತಾನೆ. ಅವರು ಜೀವನದಲ್ಲಿ ಸಾಕಷ್ಟು ಹಣ ಮತ್ತು ಆಸ್ತಿಯನ್ನು ಪಡೆಯುತ್ತಾರೆ.
- ಯಾರ ಕೈಯಲ್ಲಿನ ರೇಖೆಯು ಮಂಗಳ ರೇಖೆಯನ್ನು ಬಿಟ್ಟು ಶನಿಯ ರೇಖೆಯತ್ತ ಮುಖಮಾಡುತ್ತದೆಯೋ ಅಂತಹ ಜನರು ತುಂಬಾ ಅದೃಷ್ಟಶಾಲಿಗಳಾಗಿರುತ್ತಾರೆ.
- ಮಂಗಳ ರೇಖೆಯಿಂದ ಹುಟ್ಟುವ ರೇಖೆಯು ಅದೃಷ್ಟ ರೇಖೆಯನ್ನು ದಾಟಿ ಮುಂದೆ ಸಾಗಿದರೆ, ಅದು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಅಂತಹ ಪರಿಸ್ಥಿತಿಯು ಹಾನಿಯನ್ನುಂಟುಮಾಡುತ್ತದೆ ಎನ್ನಲಾಗುತ್ತದೆ.
- ಒಂದು ರೀತಿಯಲ್ಲಿ, ಮಂಗಳ ರೇಖೆಯು ಜೀವನದ ಅಂಗ ರೇಖೆಯಾಗಿದೆ. ಯಾವ ವ್ಯಕ್ತಿಯ ಕೈಯಲ್ಲಿ ಮಂಗಳ ರೇಖೆ ಇರುತ್ತದೆಯೋ ಅಂತಹವರು ಕಷ್ಟಗಳಿಂದ ದೂರ ಇರುತ್ತಾರೆ. ಇದರೊಂದಿಗೆ, ವ್ಯಕ್ತಿಯು ಉತ್ತಮ ಮತ್ತು ಆರೋಗ್ಯಕರ ಜೀವನವನ್ನು ನಡೆಸುತ್ತಾನೆ.
- ಮಂಗಳ ರೇಖೆಯು ಜೀವನ ರೇಖೆಯಲ್ಲಿ ಕಂಡುಬಂದರೆ, ಅಂತಹ ಜನರು ತುಂಬಾ ಪ್ರತಿಭಾವಂತರಾಗಿರುತ್ತಾರೆ. ಈ ಜನರು ಎಲ್ಲಾ ಕೆಲಸವನ್ನು ಬಹಳ ಬುದ್ಧಿವಂತಿಕೆಯಿಂದ ಮತ್ತು ನಿಖರವಾಗಿ ಮಾಡುತ್ತಾರೆ. ಅವರ ಕೆಲಸದಲ್ಲಿ ತಪ್ಪು ಹುಡುಕುವುದು ಕಷ್ಟ.
- ಮಂಗಳ ರೇಖೆಯು ನೇರವಾಗಿ ಶನಿ ರೇಖೆ ಬಳಿ ಹೋಗಿದ್ದರೆ, ಅಂತಹ ವ್ಯಕ್ತಿಗಳಿಗೆ ಶನಿದೋಷವಿರುವುದಿಲ್ಲ. ಅಷ್ಟೇ ಅಲ್ಲದೆ, ಈ ಜನರಿಗೆ ಪಿತ್ರಾರ್ಜಿತ ಆಸ್ತಿ ಮತ್ತು ಸಂಪತ್ತು ಬಹಳಷ್ಟಿರುತ್ತದೆ. ಈ ಜನರು ಆಸ್ತಿಯಲ್ಲಿ ಶ್ರೀಮಂತರಾಗಿರುತ್ತಾರೆ.
ಇದನ್ನೂ ಓದಿ: WATCH: ವಾಹನಗಳ ಮೇಲೆ ಆನೆ ದಾಳಿ, ಆತಂಕಗೊಂಡ ವಾಹನ ಸವಾರರು
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.