Morpankh Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ನಿಮ್ಮ ಜೀವನವೇ ಬದಲಾಗುತ್ತೆ!

ಹಿಂದೂ ಧರ್ಮದಲ್ಲಿ ನವಿಲು ಗರಿಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ನವಿಲು ಗರಿಯನ್ನು ಸರಿಯಾದ ದಿಕ್ಕಿನಲ್ಲಿ ಇಡುವುದರಿಂದ ಆರ್ಥಿಕ ಅಡಚಣೆಗಳು ದೂರವಾಗುತ್ತವೆ ಎಂದು ನಂಬಲಾಗಿದೆ.

Written by - Puttaraj K Alur | Last Updated : Sep 19, 2022, 04:35 PM IST
  • ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಯ ವಿಶೇಷ ಮಹತ್ವವನ್ನು ಹೇಳಲಾಗಿದೆ
  • ಮನೆಯ ಸರಿಯಾದ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ಆರ್ಥಿಕ ಸಮಸ್ಯೆ ದೂರವಾಗುತ್ತವೆ
  • ನವಿಲು ಗರಿಯು ಶ್ರೀಕೃಷ್ಣನಿಗೆ ಮತ್ತು ಅನೇಕ ದೇವತೆಗಳಿಗೆ ಬಹಳ ಪ್ರಿಯವಾಗಿದೆ
Morpankh Vastu Tips: ಮನೆಯ ಈ ದಿಕ್ಕಿನಲ್ಲಿ ನವಿಲುಗರಿ ಇಟ್ಟರೆ ನಿಮ್ಮ ಜೀವನವೇ ಬದಲಾಗುತ್ತೆ!    title=
Morpankh Vastu Tips

ನವದೆಹಲಿ: ಹಿಂದೂ ಧರ್ಮದಲ್ಲಿ ದೇವರ ಪ್ರಾಮುಖ್ಯತೆಯ ಬಗ್ಗೆ ತಿಳಿಸಲಾಗಿದೆ. ವಾಸ್ತು ಪ್ರಕಾರ ಈ ವಸ್ತುಗಳನ್ನು ಮನೆಯಲ್ಲಿ ಇಡುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗುತ್ತದೆ. ಇದನ್ನು ಮನೆಯಲ್ಲಿ ಇಡುವುದರಿಂದ ಯಾವಾಗಲೂ ಧನಾತ್ಮಕ ಶಕ್ತಿ ಇರುತ್ತದೆ ಎಂಬ ನಂಬಿಕೆ ಇದೆ. ಅದೇ ರೀತಿ ವ್ಯಕ್ತಿಯ ಆರ್ಥಿಕ ಸ್ಥಿತಿಯು ಸಹ ಬಲವಾಗುತ್ತದೆ. ಪ್ರಗತಿಯ ಹಾದಿಯು ತೆರೆದುಕೊಳ್ಳುತ್ತದೆ ಮತ್ತು ಪ್ರತಿಯೊಂದು ಕೆಲಸದಲ್ಲೂ ಯಶಸ್ಸು ಸಿಗತ್ತದೆ. ಶ್ರೀಕೃಷ್ಣನಿಗೆ ಪ್ರಿಯವಾದ ನವಿಲು ಗರಿಯ ಮಹತ್ವದ ಬಗ್ಗೆ ನೀವು ತಿಳಿದುಕೊಳ್ಳಬೇಕು. ವಾಸ್ತು ಪ್ರಕಾರ ಮನೆಯಲ್ಲಿ ನವಿಲುಗರಿ ಇಡುವ ವಿಶೇಷ ನಿಯಮಗಳ ಬಗ್ಗೆ ತಿಳಿಯಿರಿ.

ವಾಸ್ತು ಶಾಸ್ತ್ರದಲ್ಲಿ ನವಿಲು ಗರಿಯ ವಿಶೇಷ ಮಹತ್ವವನ್ನು ಹೇಳಲಾಗಿದೆ. ಇದನ್ನು ಮನೆಯ ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಆರ್ಥಿಕ ಸಮಸ್ಯೆಗಳು ದೂರವಾಗುತ್ತವೆ ಎಂದು ಹೇಳಲಾಗುತ್ತದೆ. ನವಿ ಗರಿಯನ್ನು ಮನೆಯಲ್ಲಿಟ್ಟರೆ ನಕಾರಾತ್ಮಕ ಶಕ್ತಿ ನಾಶವಾಗುತ್ತದೆ ಎಂಬ ನಂಬಿಕೆ ಇದೆ. ನವಿಲು ಗರಿಗಳನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಅನೇಕ ಪ್ರಯೋಜನಗಳಿವೆ.

ಇದನ್ನೂ ಓದಿ: ಸೂರ್ಯ-ರಾಹುವಿನ ಸಂಯೋಗದಿಂದ ಅಶುಭ 'ಷಡಷ್ಟಕ ಯೋಗ' ಈ ರಾಶಿಯವರಿಗೆ ಕಂಟಕ

ಈ ದಿಕ್ಕಿನಲ್ಲಿ ಇಡುವುದು ಶುಭ ಮತ್ತು ಫಲಪ್ರದ

ನವಿಲು ಗರಿಯು ಶ್ರೀಕೃಷ್ಣನಿಗೆ ಮತ್ತು ಅನೇಕ ದೇವತೆಗಳಿಗೆ ಬಹಳ ಪ್ರಿಯವಾಗಿದೆ. ಮನೆಯಲ್ಲಿ ನವಿಲುಗರಿಗಳನ್ನು ಇಡುವುದರಿಂದ ದೇವತೆಗಳು ಮತ್ತು ನವಗ್ರಹಗಳು ಸಹ ನೆಲೆಸುತ್ತವೆ ಎಂದು ನಂಬಲಾಗಿದೆ. ಈ ಕಾರಣದಿಂದ ನಕಾರಾತ್ಮಕ ಶಕ್ತಿಯು ಮನೆಯೊಳಗೆ ಪ್ರವೇಶಿಸುವುದಿಲ್ಲ ಮತ್ತು ಧನಾತ್ಮಕ ಶಕ್ತಿ ನೆಲೆಸುತ್ತದೆ. ಮನೆಯಲ್ಲಿ ನವಿಲುಗರಿಗಳನ್ನು ಇಡುವುದರಿಂದ ಮನೆಯ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಮನೆಯಲ್ಲಿ ನವಿಲುಗರಿ ಇಡುವುದೆಂದರೆ ದೇವರನ್ನೇ ಪ್ರಿತಿಷ್ಠಾಪಿಸುವುದು ಎಂದರ್ಥ.  

ಮನೆಯಲ್ಲಿ ನವಿಲು ಗರಿಗಳನ್ನು ಪ್ರತಿಷ್ಠಾಪಿಸುವುದರಿಂದ ಸುಖ ಶಾಂತಿ ನೆಲೆಸುತ್ತದೆ. ನವಿಲು ಗರಿಗಳನ್ನು ಮನೆಯ ಆಗ್ನೇಯ ದಿಕ್ಕಿನಲ್ಲಿ ಇಡಬೇಕು ಎಂಬುದು ವಾಸ್ತು ತಜ್ಞರ ಅಭಿಪ್ರಾಯ. ಹೀಗೆ ಮಾಡುವುದರಿಂದ ಮನೆಯ ಪರಿಸರವೂ ಚೆನ್ನಾಗಿರುತ್ತದೆ.

ಇದನ್ನೂ ಓದಿ: Morning Tips: ಪ್ರತೀ ದಿನ ಬೆಳಗ್ಗೆ ಈ ನಾಲ್ಕು ಕೆಲಸ ಮಾಡಿದರೆ ಯಶಸ್ಸು ಖಂಡಿತ!

ಆರ್ಥಿಕ ಬಿಕ್ಕಟ್ಟು ದೂರವಾಗುತ್ತದೆ

ಹಲವು ಪ್ರಯತ್ನ ಮಾಡಿದ್ರೂ ಮನೆಯ ಸಮಸ್ಯೆಗಳು ನಿವಾರಣೆಯಾವುದಿಲ್ಲ. ನವಿಲು ಗರಿಗಳ ನಿಯಮಗಳನ್ನು ಪಾಲಿಸಿದರೆ ಈ ಎಲ್ಲಾ ಸಮಸ್ಯೆಗಳು ದೂರವಾಗುತ್ತವೆ. ಪೂಜಾ ಸ್ಥಳದಲ್ಲಿ ನವಿಲುಗರಿ ಇಡುವುದರಿಂದ ಶುಭ ಫಲ ಸಿಗುತ್ತದೆ ಮತ್ತು ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ ಎಂಬ ನಂಬಿಕೆ ಇದೆ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News