ದಿನಭವಿಷ್ಯ 23-10-2024: ಬುಧವಾರದಂದು ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ: 5 ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸಮಯ!

Today Horoscope 23rd October 2024: ಈ ದಿನ ಬುಧವಾರ, ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ, ವಿಷ್ಟಿ ಕರಣ. ಇಂದು ಮೇಷ, ವೃಷಭ, ಮಿಥುನ, ಕರ್ಕ, ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಧನು, ಮಕರ, ಕುಂಭ ಮತ್ತು ಮೀನ ರಾಶಿಯವರ ರಾಶಿಫಲ ಹೇಗಿದೆ ತಿಳಿಯಿರಿ. 

Written by - Yashaswini V | Last Updated : Oct 23, 2024, 07:49 AM IST
  • ಕೃಷ್ಣ ಪಕ್ಷ, ಸಪ್ತಮಿ ತಿಥಿಯ ಈ ದಿನ ಬುಧವಾರ
  • ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ, ವಿಷ್ಟಿ ಕರಣ.
  • ಇಂದಿನ ಎಲ್ಲಾ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ.
ದಿನಭವಿಷ್ಯ 23-10-2024:  ಬುಧವಾರದಂದು ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ: 5 ರಾಶಿಯವರಿಗೆ ಕಂಡ ಕನಸೆಲ್ಲಾ ನನಸಾಗುವ ಸಮಯ!  title=

Budhvara Dina Bhavishya In Kannada: ಶ್ರೀ ಶಾಲಿವಾಹನ ಶಕೆ 1946, ಕ್ರೋಧಿ ನಾಮ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಅಶ್ವಯುಜ ಮಾಸ, ಕೃಷ್ಣ ಪಕ್ಷ, ಸಪ್ತಮಿ ತಿಥಿಯ ಈ ದಿನ ಬುಧವಾರ, ಪುನರ್ವಸು ಪೂರ್ಣ ನಕ್ಷತ್ರ, ಸಿದ್ಧ ಯೋಗ, ವಿಷ್ಟಿ ಕರಣ. ಇಂದಿನ ಎಲ್ಲಾ 12 ರಾಶಿಗಳ ಫಲಾಫಲ ಹೇಗಿದೆ ತಿಳಿಯಿರಿ. 

ಮೇಷ ರಾಶಿಯವರ ಭವಿಷ್ಯ (Aries Horoscope):  
ನಿಮಗಿಂದು ದಿನ ಅಷ್ಟು ಉತ್ತಮವಾಗಿಲ್ಲ. ಆರೋಗ್ಯ ಸಮಸ್ಯೆಗಳು ಉಲ್ಬಣಿಸಬಹುದು. ಪ್ರವಾಸದಲ್ಲಿರುವವರು ಆರೋಗ್ಯದ ವಿಚಾರದಲ್ಲಿ ಸಂಪೂರ್ಣ ಗಮನಹರಿಸಿ. ವಿದ್ಯಾರ್ಥಿಗಳು ಕಷ್ಟಪಟ್ಟು ಓದಿದರಷ್ಟೇ ಶುಭ ಫಲ. 

ವೃಷಭ ರಾಶಿಯವರ ಭವಿಷ್ಯ (Taurus Horoscope):  
ನಿಮ್ಮ ಜೊತೆಗಿದ್ದು ನಿಮಗೇ ಕೇಡು ಬಯಸುವವರ ಬಗ್ಗೆ ವಿಶೇಷವಾಗಿ ಜಾಗರೂಕರಾಗಿರಿ. ಬಾಕಿ ಇರುವ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವುದನ್ನು ಪರಿಗಣಿಸಿ. ನೀವು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಗುಡ್ ನ್ಯೂಸ್ ಕೇಳಬಹುದು. 

ಮಿಥುನ ರಾಶಿಯವರ ಭವಿಷ್ಯ (Gemini Horoscope):   
ಹೊಸ ಉದ್ಯೋಗ ದೊರೆಯುವ ಸಂಭವ. ಪ್ರೀತಿಯಲ್ಲಿರುವವರಿಗೆ ಮನೆಯವರ ಸಹಕಾರ ದೊರೆಯಲಿದೆ. ಬಹಳ ದಿನಗಳ ಕನಸೊಂದು ಸಾಕಾರಗೊಳ್ಳುವ ದಿನ ಇದಾಗಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ. 

ಕರ್ಕಾಟಕ ರಾಶಿಯವರ ಭವಿಷ್ಯ (Cancer Horoscope): 
ಇಂದು ಯಾವುದೇ ರೀತಿಯ ಅಪಾಯಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿ. ಕೌಟುಂಬಿಕ ಸಮಸ್ಯೆಗಳು ಕೊಂಚ ಮಟ್ಟಿಗೆ ಪರಿಹಾರವನ್ನು ಕಾಣಬಹುದು. ಇಂದು ಅದೃಷ್ಟ ನಿಮ್ಮೊಂದಿಗಿದ್ದು ನೀವು ಕಳೆದುಕೊಂಡಿದ್ದ ಬೆಲೆಬಾಳುವ ವಸ್ತು ಮತ್ತೆ ನಿಮ್ಮ ಕೈ ಸೇರಲಿದೆ. 

ಇದನ್ನೂ ಓದಿ- 30ವರ್ಷಗಳ ಬಳಿಕ ಶನಿ-ಶುಕ್ರರ ವಿಶೇಷ ಯುತಿ, ಈ ರಾಶಿಯ ಜನರಿಗೆ ಪ್ರತಿ ಇಚ್ಚೆಯೂ ಈಡೇರುವ ಗೋಲ್ಡನ್ ಟೈಮ್ 

ಸಿಂಹ ರಾಶಿಯವರ ಭವಿಷ್ಯ (Leo Horoscope):  
ಇಂದು ಕುಟುಂಬ ಸದಸ್ಯರೊಂದಿಗೆ ನಿಮಗಿದ್ದ ಭಿನ್ನಾಭಿಪ್ರಾಯಗಳು ದೂರವಾಗಲಿವೆ. ಉದ್ಯೋಗದಲ್ಲಿ ಗೌರವ, ಕೀರ್ತಿ ಹೆಚ್ಚಾಗಲಿದೆ. ಸಂಬಂಧಿಕರೊಬ್ಬರು ಇಂದು ಮನೆಗೆ ಭೇಟಿ ನೀಡಬಹುದು. ಯಾರಿಗೂ ಸಾಲ ನೀಡುವುದನ್ನು ತಪ್ಪಿಸಿ. 

ಕನ್ಯಾ ರಾಶಿಯವರ ಭವಿಷ್ಯ (Virgo Horoscope): 
ನಿಮಗಿಂದು ಶಾಂತಿಯುತವಾದ ದಿನ. ಕೆಲಸದಲ್ಲಿ ಮೇಲಾಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ತೋರಬಹುದು. ವಾಹನ ಖರೀದಿಸುವ ಬಹಳ ದಿನಗಳ ನಿಮ್ಮ ಕನಸು ನನಸಾಗುವ ಸಮಯ. 

ತುಲಾ ರಾಶಿಯವರ ಭವಿಷ್ಯ (Libra Horoscope): 
ನಿಮಗಿಂದು ಮಿಶ್ರ ಫಲಗಳಿಂದ ಕೂಡಿದ ದಿನ. ಮನೆಗೆ ಐಷಾರಾಮಿ ವಸ್ತುಗಳನ್ನು ಖರೀದಿಸಬಹುದು. ಹೊಸ ವ್ಯವಹಾರದಲ್ಲಿ ಕೈ ಹಾಕಲು ಯೋಚಿಸುತ್ತಿದ್ದರೆ ಇಂದು ನಿಮ್ಮ ಇಷ್ಟಾರ್ಥ ಸಿದ್ಧಿಯಾಗಲಿದೆ. 

ವೃಶ್ಚಿಕ ರಾಶಿಯವರ ಭವಿಷ್ಯ (Scorpio Horoscope):  
ಇದು ನಿಮಗೆ ಏರಿಳಿತಗಳಿಂದ ಕೂಡಿದ ದಿನ. ವೃತ್ತಿಪರರು ರಾಜಕೀಯ ಭಾಗವಾಗುವುದನ್ನು ತಪ್ಪಿಸಿ. ಕುಟುಂಬದಲ್ಲಿ ಕೆಲವು ಸಮಸ್ಯೆಗಳು ಇರಬಹುದು. ಆದರೂ, ನಿಮ್ಮವರೊಂದಿಗೆ ಮನಬಿಚ್ಚಿ ಮಾತನಾಡುವುದರಿಂದ ಭಾವನಾತ್ಮಕ ಹೊರೆ ಕಡಿಮೆಯಾಗಲಿದೆ. 

ಇದನ್ನೂ ಓದಿ- ಮನೆಯ ಈ ಜಾಗದಲ್ಲಿ ನವಿಲುಗರಿ ಇಟ್ಟರೆ ದಾರಿದ್ರ್ಯ ದೂರವಾಗಿ, ಸಂಪತ್ತಿನಿಂದ ತುಂಬಿ ತುಳುಕುತ್ತೆ ಖಜಾನೆ..! 

ಧನು ರಾಶಿಯವರ ಭವಿಷ್ಯ (Sagittarius Horoscope):  
ನಿಮಗಿಂದು ಸಂತೋಷದ ದಿನ. ವ್ಯವಹಾರದಲ್ಲಿ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಬಹಳ ದಿನಗಳ ನಂತರ ಹಳೆಯ ಸ್ನೇಹಿತರ ಭೇಟಿಯು ವಿಶೇಷ ಲಾಭವನ್ನು ತರಲಿದೆ. ಸಂಜೆ ವೇಳೆಗೆ ಶುಭ ಸುದ್ಧಿ ನಿರೀಕ್ಷಿಸಬಹುದು. 

ಮಕರ ರಾಶಿಯವರ ಭವಿಷ್ಯ (Capricorn Horoscope):  
ನಿಮಗಿಂದು ಸಾಮಾನ್ಯ ದಿನ. ಪ್ರೀತಿ-ಸಹಕಾರದ ಭಾವನೆಯಿಂದ ಹಣಕಾಸಿನ ನಿರ್ಧಾರಗಳನ್ನು ಕೈಗೊಳ್ಳುವುದನ್ನು ತಪ್ಪಿಸಿ. ಉದ್ಯೋಗವನ್ನು ಬದಲಾಯಿಸುವ ಆಲೋಚನೆಗಳನ್ನು ಸದ್ಯಕ್ಕೆ ಮುಂದೂಡುವುದು ಒಳ್ಳೆಯದು. 

ಕುಂಭ ರಾಶಿಯವರ ಭವಿಷ್ಯ (Aquarius Horoscope):  
ದೂರ ಪ್ರಯಾಣವನ್ನು ಕೈಗೊಳ್ಳಬೇಕಾಗಬಹುದು. ನಿಮ್ಮ ಬಹುದೊಡ್ಡ ಯೋಜನೆಯನ್ನು ಇಂದು ಯಶಸ್ವಿಯಾಗಿ ಜಾರಿಗೊಳಿಸುವಿರಿ. ಕುಟುಂಬದಲ್ಲಿ ಸ್ವಲ್ಪ ಕಿರಿಕಿರಿಯ ದಿನವಾಗಿರುತ್ತದೆ. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. 

ಮೀನ ರಾಶಿಯವರ ಭವಿಷ್ಯ (Pisces Horoscope): 
ನಿಮ್ಮ ತಂದೆ ನಿಮಗಿಂದು ದೊಡ್ಡ ಜವಾಬ್ದಾರಿಯನ್ನು ನೀಡಬಹುದು. ಇದಕ್ಕೆ ಭಯಪಡುವ ಅಗತ್ಯವಿಲ್ಲ. ಸ್ವಲ್ಪ ಬುದ್ದಿ ಉಪಯೋಗಿಸಿ ಕೆಲಸ ಮಾಡಿದರೆ ಸಾಕು. ಆದರೆ, ಇಂದು ನಿಮಗೆ ಕೆಲವು ಆರೋಗ್ಯ ಸಮಸ್ಯೆಗಳು ಕಾಡಬಹುದು. 

ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News