Toe Ring Benefits: ಕಾಲುಂಗುರ ಧರಿಸುವುದರ ಹಿಂದೆಯೂ ಇದೆ ವೈಜ್ಞಾನಿಕ ಕಾರಣ- ಅದರ ಪ್ರಯೋಜನಗಳನ್ನು ತಿಳಿಯಿರಿ

Toe Ring Benefits: ಹಿಂದೂ ಧರ್ಮದಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರ ಧರಿಸುವುದು ಪ್ರಮುಖ ಸಂಪ್ರದಾಯಗಳಲ್ಲಿ ಒಂದು. ಕೆಲವರು ಇದನ್ನು ಮದುವೆ ಆಗಿರುವುದರ ಗುರುತು ಎಂದು ನಂಬುತ್ತಾರೆ. ಆದರೆ, ಕಾಲುಂಗುರ ಧರಿಸುವುದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ ಎಂದು ನಿಮಗೆ ತಿಳಿದಿದೆಯೇ?

Written by - Yashaswini V | Last Updated : Sep 16, 2022, 12:47 PM IST
  • ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ಮಾತ್ರ ಕಾಲುಂಗುರವನ್ನು ಧರಿಸುತ್ತಾರೆ.
  • ಇದರ ಹಿಂದೆ ವೈಜ್ಞಾನಿಕ ಮತ್ತು ಆರೋಗ್ಯ ಕಾರಣಗಳೂ ಇವೆ.
  • ಕಾಲ್ಬೆರಳು ಭಾಗದಿಂದ ಎರಡನೇ ಬೆರಳಿನಲ್ಲಿ ವಿಶೇಷ ಅಭಿಧಮನಿ ಇದೆ
Toe Ring Benefits: ಕಾಲುಂಗುರ ಧರಿಸುವುದರ ಹಿಂದೆಯೂ ಇದೆ ವೈಜ್ಞಾನಿಕ ಕಾರಣ- ಅದರ ಪ್ರಯೋಜನಗಳನ್ನು ತಿಳಿಯಿರಿ  title=
Toe Ring Benefits

ಕಾಲುಂಗುರ ಧರಿಸುವುದರ ಹಿಂದಿನ ವೈಜ್ಞಾನಿಕ ಕಾರಣ:  ಹಿಂದೂ ಧರ್ಮದಲ್ಲಿ ಹಲವು ಸಂಪ್ರದಾಯಗಳಿವೆ. ಅದರಲ್ಲೂ ಮದುವೆಯಾದ ಮಹಿಳೆಯರು ಕೆಲವು ಸಂಪ್ರದಾಯಗಳನ್ನು ಅನುಸರಿಸುವುದು ಬಹಳ ಮುಖ್ಯ ಎಂದು ಹೇಳಲಾಗುತ್ತದೆ. ಅಂತಹ ಸಂಪ್ರದಾಯಗಳಲ್ಲಿ ಮದುವೆಯಾದ ಹೆಣ್ಣು ಮಕ್ಕಳು ಕಾಲುಂಗುರ ಧರಿಸುವುದು ಪ್ರಮುಖ ಸಂಪ್ರದಾಯವಾಗಿದೆ.  ಮುತ್ತೈದೆಯ ಐದು ಪ್ರಮುಖ ಮುತ್ತುಗಳಲ್ಲಿ ಕಾಲುಂಗರವೂ ಒಂದು. ಕೆಲವರು ಇದನ್ನು ಮದುವೆ ಆಗಿರುವುದರ ಗುರುತು ಎಂದು ನಂಬುತ್ತಾರೆ. ಆದರೆ, ಕಾಲುಂಗುರ ಧರಿಸುವುದು ಕೇವಲ ಸಂಪ್ರದಾಯವಲ್ಲ, ಇದರ ಹಿಂದೆ ವೈಜ್ಞಾನಿಕ ಕಾರಣವೂ ಅಡಗಿದೆ ಎಂದು ನಿಮಗೆ ತಿಳಿದಿದೆಯೇ?

ವಾಸ್ತವವಾಗಿ, ಮಹಿಳೆಯರು ಧರಿಸುವ ಕಾಲ್ಗೆಜ್ಜೆ, ಕಾಲುಂಗರ, ಕೈಬಳೆ ಎಲ್ಲವೂ ಅದರದೇ ಆದ ಮಹತ್ವವನ್ನು ಹೊಂದಿದೆ. ವಿವಾಹಿತ ಮಹಿಳೆಯರು ಕಾಲ್ಬೆರಳುಗಳಿಗೆ ಕಾಲುಂಗುರವನ್ನು ಧರಿಸುವುದು ಏಕೆ ಮುಖ್ಯ. ಅದರ ಹಿಂದಿನ ವೈಜ್ಞಾನಿಕ, ಆರೋಗ್ಯದ ಕಾರಣಗಳು ಯಾವುವು ಎಂದು ತಿಳಿಯೋಣ... 

ಪ್ರಾಚೀನ ಕಾಲದಿಂದಲೂ, ಮದುವೆಯಾದ ಮಹಿಳೆಯರು ವೈವಾಹಿಕ ಗುರುತಾಗಿ ಕಾಲುಂಗುರವನ್ನು ಧರಿಸುತ್ತಾರೆ. ತಾಳಿ, ಕಾಲುಂಗರವನ್ನು ಸಮಾಜದಲ್ಲಿ ಹೆಣ್ಣಿನ ರಕ್ಷಣೆಯ ಆಯುಧಗಳು ಎಂದೂ ಸಹ ಬಿಂಬಿಸಲಾಗುತ್ತದೆ.  

ಇದನ್ನೂ ಓದಿ- ಲಕ್ಷ್ಮಿ ದೇವಿಯ ಕೃಪೆ ಪಡೆಯಲು ಶುಕ್ರವಾರದಂದು ಈ ವಸ್ತುಗಳನ್ನು ದಾನ ಮಾಡಿ

ಕಾಲುಂಗುರ ಭಾರತೀಯ ಸಂಸ್ಕೃತಿಯ ಭಾಗವಾಗಿದೆ:
ಕಾಲ್ಗೆಜ್ಜೆ, ಕೈಬಳೆ, ಕಾಲುಂಗುರ ಇವೆಲ್ಲವೂ ಮಹಿಳೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ. ಮಾತ್ರವಲ್ಲ, ಇವೆಲ್ಲವೂ ಹೆಣ್ಣು ತಗ್ಗಿ, ಬಗ್ಗಿ, ಸಭ್ಯವಾಗಿ ವರ್ತಿಸುವುದನ್ನು ಕಲಿಸುತ್ತವೆ. ವಾಸ್ತವವಾಗಿ, ಕಾಲ್ಗೆಜ್ಜೆ, ಬಳೆ, ಕಾಲುಂಗುರ ಎಲ್ಲವೂ ಸದ್ದು ಮಾಡುತ್ತವೆ. ಹಾಗಾಗಿ, ಮನೆಯಲ್ಲಿ ಹೆಣ್ಣು ಮಕ್ಕಳು ಓಡಾಡುವಾಗ ಒಂದು ರೀತಿಯ ಇಂಪಾದ ದನಿ ಕೇಳಿಬರುತ್ತದೆ. ಜೊತೆಗೆ ಮನೆಯಲ್ಲಿ ನಕಾರಾತ್ಮಕ ಶಕ್ತಿಯು ಹೊರಹೋಗುತ್ತದೆ. ಅಷ್ಟೇ ಅಲ್ಲ, ಇವೆಲ್ಲವೂ ಹೆಣ್ಣಿಗೆ ತಾಳ್ಮೆಯಿಂದ ಇರುವುದನ್ನು ಕಲಿಸುತ್ತದೆ ಎಂಬ ನಂಬಿಕೆ ಇದೆ. ಇವೆಲ್ಲವೂ ಸಂಪ್ರದಾಯ ನಂಬಿಕೆಗಳಾದರೆ, ಇದರ ಆರೋಗ್ಯಕರ ಪ್ರಯೋಜನಗಳು ಯಾವುವು ಎಂದು ತಿಳಿಯೋಣ...

ಕಾಲಿನಲ್ಲಿ ಬೆಳ್ಳಿ ಗೆಜ್ಜೆ ಧರಿಸುವುದರಿಂದ ಪಾದಗಳು ಬಲಗೊಳ್ಳುತ್ತವೆ. ಇದು ಮೂಳೆಗಳಿಗೆ ಪ್ರಯೋಜನಕಾರಿ ಆಗಿದೆ. ಹಿಂದೂ ಧರ್ಮದಲ್ಲಿ, ವಿವಾಹಿತ ಮಹಿಳೆಯರು ಮಾತ್ರ ಕಾಲುಂಗುರವನ್ನು ಧರಿಸುತ್ತಾರೆ.  ಇದರ ಹಿಂದೆ ವೈಜ್ಞಾನಿಕ ಮತ್ತು ಆರೋಗ್ಯ ಕಾರಣಗಳೂ ಇವೆ. ಕಾಲ್ಬೆರಳು ಭಾಗದಿಂದ ಎರಡನೇ ಬೆರಳಿನಲ್ಲಿ ವಿಶೇಷ ಅಭಿಧಮನಿ ಇದೆ ಎಂದು ವಿಜ್ಞಾನದಲ್ಲಿ ನಂಬಲಾಗಿದೆ, ಇದು ಗರ್ಭಾಶಯಕ್ಕೆ ಸಂಪರ್ಕ ಹೊಂದಿದೆ. ಇದು ಗರ್ಭಾಶಯವನ್ನು ನಿಯಂತ್ರಿಸುತ್ತದೆ ಮತ್ತು ರಕ್ತದೊತ್ತಡವನ್ನು ಸಮತೋಲನಗೊಳಿಸುತ್ತದೆ. ಕಾಲುಂಗುರವನ್ನು ಧರಿಸುವುದರಿಂದ ರಕ್ತದೊತ್ತಡವು ನಿಯಂತ್ರಣದಲ್ಲಿರುತ್ತದೆ ಮತ್ತು ಸರಿಯಾದ ಪ್ರಮಾಣದ ರಕ್ತವು ಗರ್ಭಾಶಯವನ್ನು ತಲುಪುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ವಕ್ರಿ ಗುರುವಿನಿಂದ ತ್ರಿಕೋನ ರಾಜಯೋಗ: ಮೂರು ರಾಶಿಯವರಿಗೆ ಸಖತ್ ಲಾಭ

ಮಹಿಳೆಯರು ಚೈತನ್ಯವನ್ನು ಅನುಭವಿಸುತ್ತಾರೆ:
ವಿವಾಹಿತ ಮಹಿಳೆಯರು ಕಾಲುಂಗುರ ಧರಿಸುವುದರ ಪರಿಣಾಮದಿಂದಾಗಿ, ಮಹಿಳೆಯರಲ್ಲಿ ಋತುಚಕ್ರವು ಕ್ರಮಬದ್ಧವಾಗಿರುತ್ತದೆ. ಕಾಲುಂಗುರವು ಮಹಿಳೆಯರ ಸಂತಾನೋತ್ಪತ್ತಿ ಅಂಗಗಳನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಕಾಲುಂಗುರವು ಮಹಿಳೆಯರ ಪರಿಕಲ್ಪನೆಗೆ ಸಹಾಯ ಮಾಡುತ್ತದೆ, ಇದು ಮಹಿಳೆಯರಿಗೆ ಗರ್ಭಧರಿಸಲು ಉತ್ತಮ ಆರೋಗ್ಯವನ್ನು ಒದಗಿಸುತ್ತದೆ.  ಬೆಳ್ಳಿಯನ್ನು ಉತ್ತಮ ವಿದ್ಯುತ್ ವಾಹಕವೆಂದು ಪರಿಗಣಿಸಲಾಗಿದೆ. ಭೂಮಿಯಿಂದ ಪಡೆದ ಧ್ರುವೀಯ ಶಕ್ತಿಯನ್ನು ಎಳೆಯುವ ಮೂಲಕ, ಅದು ಇಡೀ ದೇಹವನ್ನು ತಲುಪುತ್ತದೆ, ಇದರಿಂದಾಗಿ ಮಹಿಳೆಯರು ಶಕ್ತಿಯುತವಾಗಿರುತ್ತಾರೆ ಎಂತಲೂ ಹೇಳಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News