Sun Transit 2022: ಸೆಪ್ಟೆಂಬರ್‌ನ ಅತಿದೊಡ್ಡ 'ಗ್ರಹ ಬದಲಾವಣೆ' ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ

Sun Transit 2022: ಜ್ಯೋತಿಷ್ಯ ಶಾಸ್ತ್ರದಲ್ಲಿ ಗ್ರಹಗಳ ರಾಜ ಎಂದು ಪರಿಗಣಿಸಲಾಗಿರುವ ಸೂರ್ಯನ ಸಂಚಾರವನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸೆಪ್ಟೆಂಬರ್ 17 ರಂದು, ಕನ್ಯಾರಾಶಿಯಲ್ಲಿ ಸೂರ್ಯನ ಪ್ರವೇಶವು ಆರು ರಾಶಿಯ ಜನರಿಗೆ ತುಂಬಾ ಅದೃಷ್ಟವನ್ನು ತರಲಿದೆ ಎಂದು ಪರಿಗಣಿಸಲಾಗಿದೆ.  ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Sep 12, 2022, 08:26 AM IST
  • ಐದು ದಿನಗಳ ನಂತರ ಗ್ರಹಗಳ ರಾಜನ ರಾಶಿ ಪರಿವರ್ತನೆ
  • ಸೂರ್ಯನು 17 ಸೆಪ್ಟೆಂಬರ್ 2022 ರಂದು ಸೂರ್ಯನ ರಾಶಿ ಪರಿವರ್ತನೆ
  • ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಆರು ರಾಶಿಚಕ್ರದ ಜನರಿಗೆ ಬಹಳ ಮಂಗಳಕರ
Sun Transit 2022: ಸೆಪ್ಟೆಂಬರ್‌ನ ಅತಿದೊಡ್ಡ 'ಗ್ರಹ ಬದಲಾವಣೆ' ಸೂರ್ಯನಂತೆ ಹೊಳೆಯಲಿದೆ ಈ ರಾಶಿಯವರ ಅದೃಷ್ಟ  title=
Surya rashi parivartan Effects

ಸೂರ್ಯನ ರಾಶಿ ಪರಿವರ್ತನೆ: ಜ್ಯೋತಿಷ್ಯ ಶಾಸ್ತ್ರದಲ್ಲಿ, ಸೂರ್ಯನನ್ನು ಗ್ರಹಗಳ ರಾಜ ಎಂದು ಕರೆಯಲಾಗುತ್ತದೆ. ಪ್ರತಿ ಗ್ರಹವೂ ನಿರ್ದಿಷ್ಟ ಸಮಯದಲ್ಲಿ ತಮ್ಮ ರಾಶಿಚಕ್ರವನ್ನು ಬದಲಾಯಿಸುತ್ತದೆ. ಪ್ರತಿ ಗ್ರಹದ ಚಲನೆಯೂ ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ, ಸೂರ್ಯನ ರಾಶಿ ಪರಿವರ್ತನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಸೂರ್ಯನ ಸಂಚಾರವು ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರುತ್ತದೆ. 5 ದಿನಗಳ ನಂತರ, ಸೂರ್ಯನು 17 ಸೆಪ್ಟೆಂಬರ್ 2022 ರಂದು ಸೂರ್ಯನು ಕನ್ಯಾ ರಾಶಿಗೆ ಪ್ರವೇಶಿಸಲಿದ್ದಾನೆ. ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರವು ಆರು ರಾಶಿಚಕ್ರದ ಜನರಿಗೆ ಬಹಳ ಮಂಗಳಕರ ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಆರು ರಾಶಿಯ ಜನರ ಜೀವನವು ಸೂರ್ಯನಂತೆ ಹೊಳೆಯಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳು ಯಾವುವು ಎಂದು ತಿಳಿಯೋಣ...

ಕನ್ಯಾರಾಶಿಯಲ್ಲಿ ಸೂರ್ಯನ ಸಂಚಾರ: ಆರು ರಾಶಿಯವರಿಗೆ ಸಖತ್ ಲಾಭ :
ವೃಷಭ ರಾಶಿ:

ಕನ್ಯಾ ರಾಶಿಯಲ್ಲಿ ಸೂರ್ಯನ ಸಂಚಾರದ ಸಮಯದಲ್ಲಿ ವೃಷಭ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚಾಗುವುದು. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಆದರೆ, ಈ ಸಮಯದಲ್ಲಿ ನೀವು ತಾಳ್ಮೆಯಿಂದ ಇರುವುದರಿಂದ ಮಾತ್ರ ಉದ್ಯೋಗದಲ್ಲಿ ಅಧಿಕಾರಿಗಳ ಬೆಂಬಲವನ್ನು ಪಡೆಯಬಹುದು. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ನೀವು ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಇದು ಸೂಕ್ತ ಸಮಯ.

ಸಿಂಹ ರಾಶಿ:
ಈ ಸಮಯದಲ್ಲಿ ಸಿಂಹ ರಾಶಿಯವರು ಕೆಲಸದಲ್ಲಿ ಆತ್ಮವಿಶ್ವಾಸದಿಂದ ಕೂಡಿರುವರು. ಮಾನಸಿಕವಾಗಿ ಹೆಚ್ಚು ನೆಮ್ಮದಿಯಿಂದ ಇರುತ್ತೀರಿ. ಯಾವುದೇ ಪ್ರಮುಖ ಕೆಲಸಗಳಲ್ಲಿ ನೀವು ಸರ್ಕಾರದ ನೆರವನ್ನು ಬಯಸುತ್ತಿದ್ದರೆ, ಈ ಸಮಯದಲ್ಲಿ ನಿಮಗೆ ಅಗತ್ಯ ನೆರವು ಲಭಿಸಲಿದೆ. ದಾಂಪತ್ಯ ಸುಖ ಹೆಚ್ಚಲಿದೆ. ಕೌಟುಂಬಿಕ ಜೀವನ ಸುಖಮಯವಾಗಿರುತ್ತದೆ. ಸಮಾಜದಲ್ಲಿ ಗೌರವ ಹೆಚ್ಚಾಗುತ್ತದೆ. 

ಇದನ್ನೂ ಓದಿ- Mangal Gochar: ಮಂಗಳನ ರಾಶಿ ಬದಲಾವಣೆ, ಈ 3 ರಾಶಿಯವರಿಗೆ ಅದೃಷ್ಟದ ಜೊತೆಗೆ ಅಪಾರ ಸಂಪತ್ತು ಸಿಗಲಿದೆ

ಕನ್ಯಾ ರಾಶಿ: 
ಕನ್ಯಾ ರಾಶಿಯಲ್ಲಿಯೇ ಸೂರ್ಯ ಸಂಚಾರವು ಈ ರಾಶಿಯವರಿಗೆ ಅದೃಷ್ಟದ ಬಾಗಿಲನ್ನು ತೆರೆಯಲಿದೆ. ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿವೆ. ವ್ಯಾಪಾರ-ವ್ಯವಹಾರ ವೃದ್ದಿಯಾಗಲಿದೆ.  ಆದರೆ, ಯಾವುದೇ ಕಾರಣಕ್ಕೂ ತಾಳ್ಮೆಗೆಡಬೇಡಿ. ವಿದ್ಯಾರ್ಥಿಗಳು ನಿಮ್ಮ ವಿದ್ಯಾಭ್ಯಾಸದ ಕಡೆ ಗಮನಹರಿಸಿ.

ತುಲಾ ರಾಶಿ:
ಸೂರ್ಯನ ರಾಶಿ ಪರಿವರ್ತನೆಯು ನಿಮ್ಮ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ. ಮನಸ್ಸು ಸಂತೋಷದಿಂದ ಕೂಡಿರುತ್ತದೆ. ಸಕಾರಾತ್ಮಕ ಚಿಂತನೆಯನ್ನು ಇಟ್ಟುಕೊಂಡರೆ ಒಂದರ ಹಿಂದೆ ಒಂದರಂತೆ ಯಶಸ್ಸು ಸಿಗುತ್ತದೆ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರುತ್ತದೆ. ಹಣವು ಪ್ರಯೋಜನಕಾರಿಯಾಗಲಿದೆ. 

ಇದನ್ನೂ ಓದಿ- Budh Vakri 2022: ಕನ್ಯಾರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ- ಈ ರಾಶಿಯವರಿಗೆ ಮುಟ್ಟಿದ್ದೆಲ್ಲಾ ಚಿನ್ನ

ಕುಂಭ ರಾಶಿ: 
ಸೂರ್ಯನ ಸಂಚಾರದಿಂದ ಕುಂಭ ರಾಶಿಯ ವಿದ್ಯಾರ್ಥಿಗಳಿಗೆ ಓದಿನಲ್ಲಿ ಆಸಕ್ತಿ ಹೆಚ್ಚುವುದು. ಕಠಿಣ ಪರಿಶ್ರಮಕ್ಕೆ ತಕ್ಕ ಫಲ ಸಿಗಲಿದೆ. ಪ್ರಗತಿಯ ಹಾದಿಗಳು ತೆರೆದುಕೊಳ್ಳುತ್ತವೆ. ಆದಾಯ ಹೆಚ್ಚಲಿದೆ. ನಿಮ್ಮ ಇಷ್ಟು ದಿನಗಳ ಆರ್ಥಿಕ ಸಂಕಷ್ಟಗಳು ಸುಧಾರಿಸಲಿವೆ.

ಮೀನ ರಾಶಿ:
ಈ ಸಮಯದಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಓದುವುದರಿಂದ ನಿರೀಕ್ಷಿತ ಫಲಿತಾಂಶ ಪ್ರಾಪ್ತಿ. ಕುಟುಂಬದಲ್ಲಿ ಸಂತೋಷ ಇರುತ್ತದೆ. ವ್ಯಾಪಾರ-ವ್ಯವಹಾರ ವೃದ್ಧಿಯಾಗಲಿದೆ. ಇಷ್ಟು ದಿನ ಕೈಸೇರದ ಹಣ ಈಗ ನಿಮ್ಮ ಕೈ ಸೇರಲಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News