ಶತಭಿಷಾ ನಕ್ಷತ್ರದ ಪ್ರಥಮ ಚರಣದಲ್ಲಿ ಶನಿಯ ಗೋಚರ, 5 ರಾಶಿಗಳ ಜನರ ಮನೆಗೆ ಲಗ್ಗೆ ಇಡಲಿದ್ದಾಳೆ ಐಶ್ವರ್ಯ ಲಕ್ಷ್ಮಿ!

Shani In First Phase Of Shatabhisha Nakshatra: ಶನಿದೇವನ ಹೆಸರು ಕೇಳಿದರೆ ಸಾಕು ಬಹುತೇಕ ಜನರು ಹೆದರುತ್ತಾರೆ. ಆದರೆ ಪ್ರತಿ ಬಾರಿಯೂ ಶನಿ ಸುಮ್ಮನೆ ಯಾರ ಮೇಲೆಯೂ ತನ್ನ ಕೆಟ್ಟ ದೃಷ್ಟಿಯನ್ನು ಬೀರುವುದಿಲ್ಲ. ಶನಿಯು ಪ್ರಸ್ತುತ ಶತಭಿಷಾ ನಕ್ಷತ್ರದ ಮೊದಲ ಹಂತದಲ್ಲಿದ್ದು, ತನ್ನ ವಕ್ರನಡೆಯನ್ನು ಅನುಸರಿಸುತ್ತಿದ್ದಾನೆ. ಹೀಗಾಗಿ ಶನಿಗ್ರಹದ ಶುಭ ಪ್ರಭಾವದಿಂದಾಗಿ 5 ರಾಶಿಗಳ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ ಮತ್ತು ಅವರಿಗೆ ಐಶ್ವರ್ಯ ಲಕ್ಷ್ಮಿಯ ಕೃಪೆಯಿಂದ ಅಪಾರ ಧನಸಂಪತ್ತು ಪ್ರಾಪ್ತಿಯಾಗಲಿದೆ (Spiritual News In Kannada).   

Written by - Nitin Tabib | Last Updated : Aug 24, 2023, 03:52 PM IST
  • ನಿಮ್ಮ ಮಾಹಿತಿಗಾಗಿ ಪ್ರಸ್ತುತ ಶನಿದೇವ ಶತಭಿಷಾ ನಕ್ಷತ್ರದಲ್ಲಿ ತನ್ನ ವಕ್ರನಡೆಯನ್ನು ಅನುಸರಿಸುತ್ತಿದ್ದು, ಅಕ್ಟೋಬರ್ 15ರವರೆಗೆ ಅದೇ ಸ್ಥಿತಿಯಲ್ಲಿರಲಿದ್ದಾನೆ.
  • ಹೀಗಾಗಿ ಶನಿಯ ಶುಭ ಪ್ರಭಾವದಿಂದಾಗಿ ಮೇಷ, ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗಲಿದೆ.
  • ಈ ರಾಶಿಗಳ ಜನರ ಮೇಲೆ ಶನಿ ಬೀರುವ ಶುಭ ಪ್ರಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ,
ಶತಭಿಷಾ ನಕ್ಷತ್ರದ ಪ್ರಥಮ ಚರಣದಲ್ಲಿ ಶನಿಯ ಗೋಚರ, 5 ರಾಶಿಗಳ ಜನರ ಮನೆಗೆ ಲಗ್ಗೆ ಇಡಲಿದ್ದಾಳೆ ಐಶ್ವರ್ಯ ಲಕ್ಷ್ಮಿ! title=

ಬೆಂಗಳೂರು: ವೈದಿಕ ಜೋತಿಷ್ಯ ಶಾತ್ರದ ಪ್ರಸ್ತುತ ನ್ಯಾಯ ದಯಪಾಲಿಸುವ ಶನಿಯ ಸಂಕ್ರಮಣ ಶತಭಿಷಾ ನಕ್ಷತ್ರದ ಮೊದಲ ಹಂತದಲ್ಲಿ ಹಿಮ್ಮುಖ ಸ್ಥಿತಿಯಲ್ಲಿದೆ. ಶತಭಿಷಾ ನಕ್ಷತ್ರದ ಆಡಳಿತ ಗ್ರಹ ರಾಹು. ಶನಿ ಮತ್ತು ರಾಹು ಇಬ್ಬರ ನಡುವೆ ಸ್ನೇಹಭಾವದ ಸಂಬಂಧವಿದೆ. ಇದರಿಂದಾಗಿ ಒಟ್ಟು 5 ರಾಶಿಗಳ ಜನರ ಜೀವನದಲ್ಲಿ ಶನಿಯು ಶತಭಿಷಾ ನಕ್ಷತ್ರದ ಮೊದಲ ಹಂತದಲ್ಲಿದ್ದಾಗ ಒಳ್ಳೆಯ ದಿನಗಳು ಆರಂಭಗೊಳ್ಳಲಿವೆ (Spiritual News In Kannada). ಶನಿಯಿಂದ ಅವರ ಜೀವನದಲ್ಲಿ ಸುಖ-ಸಮೃದ್ಧಿ ಹರಿದುಬಂದು ಸೌಕರ್ಯ ಹೆಚ್ಚಾಗಲಿದೆ ಹಾಗೂ ಅವರು ಸಾಕಷ್ಟು ಹಣ ಗಳಿಸುವ ಅವಕಾಶಗಳನ್ನು ಪಡೆಯಲಿದ್ದಾರೆ. ಅವರ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಧನಾತ್ಮಕ ಬದಲಾವಣೆಗಳಾಗಲಿವೆ. 

ನಿಮ್ಮ ಮಾಹಿತಿಗಾಗಿ ಪ್ರಸ್ತುತ ಶನಿದೇವ ಶತಭಿಷಾ ನಕ್ಷತ್ರದಲ್ಲಿ ತನ್ನ ವಕ್ರನಡೆಯನ್ನು ಅನುಸರಿಸುತ್ತಿದ್ದು,  ಅಕ್ಟೋಬರ್ 15ರವರೆಗೆ ಅದೇ ಸ್ಥಿತಿಯಲ್ಲಿರಲಿದ್ದಾನೆ. ಹೀಗಾಗಿ  ಶನಿಯ ಶುಭ ಪ್ರಭಾವದಿಂದಾಗಿ ಮೇಷ, ಮಿಥುನ, ಸಿಂಹ, ತುಲಾ ಮತ್ತು ಧನು ರಾಶಿಯವರಿಗೆ ಸಾಕಷ್ಟು ಆರ್ಥಿಕ ಲಾಭ ಉಂಟಾಗಲಿದೆ. ಈ ರಾಶಿಗಳ ಜನರ ಮೇಲೆ ಶನಿ ಬೀರುವ ಶುಭ ಪ್ರಭಾವಗಳನ್ನು ತಿಳಿದುಕೊಳ್ಳೋಣ ಬನ್ನಿ, 

ಶತಭಿಷಾ ನಕ್ಷತ್ರದಲ್ಲಿ ಶನಿಯ ಸಂಚಾರವು ಕೆಳಗಿನ ಐದು ರಾಶಿಗಳ ಜನರ ಮೇಲೆ ಸಾಕಷ್ಟು ಶುಭ ಪ್ರಭಾವ ಬೀರಲಿದೆ
1. ಮೇಷ ರಾಶಿ:
ಈ ಅವಧಿಯಲ್ಲಿ ಶನಿಯ ವಿಶೇಷ ಅನುಗ್ರಹ ನಿಮ್ಮ ಮೇಲೃಯಲಿದೆ. ವೃತ್ತಿ ಕ್ಷೇತ್ರದಲ್ಲಿ ಮುಂದುವರಿಯಲು ಹೊಸ ಅವಕಾಶಗಳು ಪ್ರಾಪ್ತಿಯಾಗಲಿವೆ. ವ್ಯಾಪಾರ ಮಾಡುವವರಿಗೆ ಸಾಕಷ್ಟು ಲಾಭ ಸಿಗಲಿದೆ. ಉತ್ತಮ ಆದಾಯದ ಕಾರಣ, ಹಣದ ಕೊರತೆ ಇರುವುದಿಲ್ಲ. ನಿಮ್ಮ ಹೊಸ ಯೋಜನೆಗಳನ್ನು ಜಾರಿಗೊಳಿಸುವ ಮೂಲಕ ನೀವು ಸಾಕಷ್ಟು ಪ್ರಯೋಜನಗಳನ್ನು ಪಡೆಯಬಹುದು. ಹೊಸ ಕೆಲಸವನ್ನು ಪ್ರಾರಂಭಿಸಲು ಇದು ಸರಿಯಾದ ಸಮಯ, ಏಕೆಂದರೆ ಭವಿಷ್ಯದಲ್ಲಿ ಅದು ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಉದ್ಯೋಗಸ್ಥರಿಗೆ ಈ ಅವಧಿ ಉತ್ತಮವಾಗಿರಲಿದೆ.

2. ಮಿಥುನ ರಾಶಿ: ವಿದೇಶದಲ್ಲಿ ಉದ್ಯೋಗ ಮಾಡಲು ಬಯಸುವವರಿಗೆ ಅಥವಾ ವಿದೇಶ ಪ್ರವಾಸ ಮಾಡಲು ಬಯಸುವವರಿಗೆ ಶುಭ ಯೋಗ ಸೃಷ್ಟಿಯಾಗುತ್ತಿದೆ. ಶನಿದೇವನ ವಿಶೇಷ ಆಶೀರ್ವಾದದಿಂದ ಈ ಸಮಯವು ನಿಮಗೆ ಅನುಕೂಲಕರವಾಗಿದೆ, ನಿಮ್ಮ ಆಸೆ ಈಡೇರುತ್ತದೆ. ಅಕ್ಟೋಬರ್ 15 ರವರೆಗೆ ಸಾಕಷ್ಟು ಪ್ರಯಾಣ ಸಂಭವಿಸುವ ಸಾಧ್ಯತೆ ಇದೆ, ಆದರೆ ಅದರ ಬಗ್ಗೆ ಚಿಂತಿಸಬೇಡಿ, ಏಕೆಂದರೆ ಅದು ನಿಮಗೆ ಹೊಸ ಅವಕಾಶಗಳು ಮತ್ತು ಪ್ರಯೋಜನಗಳನ್ನು ನೀಡುತ್ತದೆ. ಕೌಟುಂಬಿಕ ಜೀವನ ಉತ್ತಮವಾಗಿರಲಿದೆ.

3. ಸಿಂಹ ರಾಶಿ: ಸಿಂಹ ರಾಶಿಯ ಜನರ ವೃತ್ತಿಜೀವನಕ್ಕೆ ಇದು ಉತ್ತಮ ಸಮಯ ಎಂದು ಸಾಬೀತಾಗಲಿದೆ. ನಿಮಗೆ ವೃತ್ತಿಜೀವನದಲ್ಲಿ ನೀವು ನಂಬಲಾರದಷ್ಟು ಮುಂದುವರಿಯುವ ಅವಕಾಶಗಳು ಒದಗಿಬರಲಿವೆ. ಅದೃಷ್ಟವು ನಿಮ್ಮ ಬೆಂಬಲಕ್ಕೆ ಇರಲಿದೆ ಮತ್ತು ನೀವು ದೊಡ್ಡ ಪ್ರಗತಿಯನ್ನು ಸಾಧಿಸಬಹುದು. ಈ ಸದಾವಕಾಶವನ್ನು ಉಪಯೋಗಿಸದೆಯೇ ಬಿಡಬೇಡಿ. ಏಕೆಂದರೆ ಈ ಅವಧಿಯಲ್ಲಿ ನೀವು ವಿತ್ತೀಯ ಪ್ರಯೋಜನಗಳನ್ನು ಪಡೆಯುವಿರಿ ಮತ್ತು ಇದರಿಂದಾಗಿ ಆರ್ಥಿಕ ಭಾಗವು ಬಲಿಷ್ಠವಾಗಲಿದೆ.

4. ತುಲಾ ರಾಶಿ: ಈ ಅವಧಿಯಲ್ಲಿ ಶನಿ ದೇವನು ನಿಮ್ಮ ಮೇಲೆ ತುಂಬಾ ಪ್ರಸನ್ನನಾಗಿರಲಿದ್ದಾನೆ. ನೆನೆಗುಡಿಗೆ ಬಿದ್ದ ನಿಮ್ಮ ಯಾವುದೇ ಕೆಲಸವನ್ನು ಪೂರ್ಣಗೊಳಿಸಲು ಯತ್ನಿಸಿ. ಕಷ್ಟಪಟ್ಟು ಕೆಲಸ ಮಾಡಿದರೆ ಆಹ್ಲಾದಕರ ಫಲಿತಾಂಶಗಳು ನಿಮ್ಮದಾಗಲಿವೆ. ಉದ್ಯೋಗ ಮತ್ತು ವ್ಯಾಪಾರದಲ್ಲಿರುವವರಿಗೆ ಸುವರ್ಣ ಕಾಲ ಬಂದಿದೆ ಎಂದರೆ ತಪ್ಪಾಗಲಾರದು. ಆದಾಯವು ಹೆಚ್ಚಾಗಲಿದೆ ಮತ್ತು ಆಕಸ್ಮಿಕ ಧನಲಾಭವು ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಅನ್ನು ಹೆಚ್ಚಿಸಲಿದೆ. ಈ ಸಮಯದಲ್ಲಿ, ನಿಮ್ಮ ಆರ್ಥಿಕ ಸ್ಥಿತಿಯಲ್ಲಿ ಅತ್ಯುತ್ತಮ ಸುಧಾರಣೆಯನ್ನು ನೀವು ಕಾಣಬಹುದು.

ಇದನ್ನೂ ಓದಿ-ಒಂದು ವರ್ಷದ ಬಳಿಕ ಸ್ವರಾಶಿಗೆ ಬುಧನ ಪ್ರವೇಶ, 'ಭದ್ರ ರಾಜಯೋಗ'ದಿಂದ ಈ ರಾಶಿಗಳ ಜನರ ಮೇಲೆ ಹಣದ ಸುರಿಮಳೆ!

5. ಧನು ರಾಶಿ: ದೀರ್ಘ ಕಾಲದಿಂದ ನಿರುದ್ಯೋಗಿಗಳಾಗಿರುವವರಿಗೆ ಶನಿ ಮಹಾರಾಜರ ಕೃಪಾಶೀರ್ವಾದ ಪ್ರಾಪ್ತಿಯಾಗಲಿದೆ. ನಿಮಗೆ ಶೀಘ್ರದಲ್ಲೇ ಉದ್ಯೋಗ ಭಾಗ್ಯ ಸಿಗುವ ಸಾಧ್ಯತೆ ಇದೆ. ಉದ್ಯೋಗಿಗಳಿಗೆ ಹೊಸ ಉದ್ಯೋಗದ ಪ್ರಸ್ತಾಪ ಸಿಗಬಹುದು ವೃತ್ತಿಜೀವನದ ದೃಷ್ಟಿಯಿಂದ ಇದು ಉತ್ತಮ ಸಮಯ. ಉದ್ಯೋಗಸ್ಥರಿಗೆ ಮೇಲಧಿಕಾರಿಯ ಬೆಂಬಲ ಸಿಗಲಿದೆ, ನಿಮ್ಮ ಕೆಲಸಕ್ಕೆ ಅವರು ಪ್ರಶಂಸೆ ವ್ಯಕ್ತಪಡಿಸಲಿದ್ದಾರೆ ಮತ್ತು ಇದರಿಂದ ನಿಮಗೆ ಪ್ರಮೋಷನ್ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ-ತನ್ನ ಉಚ್ಛ ಭಾವದಲ್ಲಿ ಜಾಗ್ರತನಾದ ಶನಿ, ಧನಕುಬೇರನ ಕೃಪೆಯಿಂದ 4 ರಾಶಿಗಳ ಜನರ ಜೀವನದಲ್ಲಿ ಝಣಝಣಿಸಲಿದೆ ಕಾಂಚಾಣದ ಸದ್ದು!

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News