Shani Vakri: ಜೂನ್ 17ರ ಬಳಿಕ ಶನಿಯ ಹಿಮ್ಮುಖ ಚಲನೆ ಆರಂಭ, ನಿಮ್ಮ ಮೇಲೆ ಏನು ಪರಿಣಾಮ

Shani Vakri Effect: ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮೂವತ್ತು ವರ್ಷಗಳ ಬಳಿಕ ತನ್ನದೇ ಆದ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಶನಿಯು ಇದೇ ತಿಂಗಳು ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಇದರ ಪ್ರಭಾವ ಎಲ್ಲಾ ರಾಶಿಯವರ ಮೇಲೆ ಕಂಡು ಬರುತ್ತದೆ. 

Written by - Yashaswini V | Last Updated : Jun 7, 2023, 12:51 PM IST
  • ಜೂನ್ 17, 2023 ರಂದು ಶನಿಯ ವಕ್ರ ನಡೆ ಆರಂಭವಾಗಲಿದೆ
  • ಶನಿಯ ಹಿಮ್ಮುಖ ಚಲನೆಯು ದ್ವಾದಶ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ
  • ಶನಿಯ ಹಿಮ್ಮುಖ ಚಲನೆಯಿಂದ ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ತಿಳಿಯಿರಿ
Shani Vakri: ಜೂನ್ 17ರ ಬಳಿಕ ಶನಿಯ ಹಿಮ್ಮುಖ ಚಲನೆ ಆರಂಭ, ನಿಮ್ಮ ಮೇಲೆ ಏನು ಪರಿಣಾಮ  title=
Saturn restrograde effect on zodiac signs

Saturn Retrograde Effect On All Zodiac Signs: ವೈದಿಕ ಜ್ಯೋತಿಷ್ಯದಲ್ಲಿ ಕರ್ಮಫಲದಾತ, ನ್ಯಾಯದ ದೇವರು ಎಂದು ಪರಿಗಣಿಸಲ್ಪಟ್ಟಿರುವ ಶನಿ ದೇವನು ಜೂನ್ 17, 2023ರಿಂದ ಕುಂಭ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನು ಆರಂಭಿಸಲಿದ್ದಾನೆ. ಇದರಿಂದ ಶಶ ರಾಜಯೋಗವೂ ನೀರ್ಮಾಣವಾಗಲಿದೆ. 2023ರ ನವೆಂಬರ್ 4ರವರೆಗೂ ತನ್ನದೇ ರಾಶಿಯಲ್ಲಿ ಶನಿ ದೇವನ ವಕ್ರ ನಡೆಯು ಎಲ್ಲಾ 12 ರಾಶಿಯವರ ಮೇಲೆ ಮಹತ್ವದ ಪರಿಣಾಮವನ್ನು ಬೀರಲಿದೆ. ಶನಿಯ ಹಿಮ್ಮುಖ ಚಲನೆಯಿಂದ ನಿಮ್ಮ ರಾಶಿಯ ಮೇಲೆ ಏನು ಪರಿಣಾಮ ತಿಳಿಯಿರಿ. 

ಹತ್ತು ದಿನಗಳ ಬಳಿಕ ಹಿಮ್ಮುಖವಾಗಲಿರುವ ಶನಿ: ದ್ವಾದಶ ರಾಶಿಗಳ ಮೇಲೆ ಏನು ಪರಿಣಾಮ:-
ಮೇಷ ರಾಶಿ: 

ಶನಿಯ ಹಿಮ್ಮುಖ ಚಲನೆಯು ಮೇಷ ರಾಶಿಯವರ ಜೀವನದಲ್ಲಿ ಹಲವು ಸಂಕಷ್ಟಗಳನ್ನು ತರಲಿದೆ. ಹಾಗಾಗಿ, ಮುಂದಿನ 140 ದಿನಗಳವರೆಗೆ ಈ ರಾಶಿಯವರು ತುಂಬಾ ಎಚ್ಚರಿಕೆಯಿಂದ ಇರಬೇಕು ಎಂದು ಸಲಹೆ ನೀಡಲಾಗಿದೆ. 

ವೃಷಭ ರಾಶಿ: 
ತನ್ನದೇ ರಾಶಿಯಲ್ಲಿ ಶನಿದೇವನ ವಕ್ರ ನಡೆಯು ವೃಷಭ ರಾಶಿಯವರಿಗೆ ವಿದೇಶ ಯೋಗವನ್ನು ಕರುಣಿಸಬಹುದು. ಈ ಸಮಯದಲ್ಲಿ ಉದ್ಯೋಗ ಕ್ಷೇತ್ರದಲ್ಲಿ ತಲೆದೂರಿರುವ ನಿಮ್ಮ ಸಮಸ್ಯೆಗಳು ಬಗೆಹರಿಯಲಿದ್ದು, ಭಾರೀ ಹಣಕಾಸಿನ ಪ್ರಯೋಜನವನ್ನು ನೀಡಲಿದೆ ಎಂದು ಹೇಳಲಾಗುತ್ತಿದೆ. 

ಮಿಥುನ ರಾಶಿ: 
ಶನಿಯ ಹಿಮ್ಮುಖ ಚಲನೆಯು ಮಿಥುನ ರಾಶಿಯವರ ಜೀವನದಲ್ಲಿ ವಕ್ರ ದೃಷ್ಟಿಯನ್ನು ಬೀರಲಿದ್ದು ಈ ಸಮಯದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡಚಣೆ ಉಂಟಾಗಬಹುದು. ಆದಾಗ್ಯೂ, ನೀವು ನಿಮ್ಮ ಪ್ರಯತ್ನವನ್ನು ಮುಂದುವರೆಸಿದರಷ್ಟೇ ಮುಂದಿನ ದಿನಗಳಲ್ಲಿ ಪ್ರಯೋಜನ ಪಡೆಯಬಹುದು ಎಂಬುದನ್ನೂ ನೆನಪಿನಲ್ಲಿಡಿ. 

ಕರ್ಕಾಟಕ ರಾಶಿ: 
ಶನಿ ಚಲನೆಯಲ್ಲಿನ ಬದಲಾವಣೆಯಿಂದಾಗಿ ಈ ಸಮಯದಲ್ಲಿ ನಿಮ್ಮ ಸಣ್ಣ ತಪ್ಪು ಕೂಡ ನಿಮಗೆ ಭಾರೀ ನಷ್ಟವನ್ನು ಉಂಟು ಮಾಡಬಹುದು. ಯಾವುದೇ ರೀತಿಯ ಹೂಡಿಕೆ ಮಾಡುವಾಗ ತುಂಬಾ ಬುದ್ದಿವಂತಿಕೆ ಅಗತ್ಯ, ಇಲ್ಲದಿದ್ದರೆ, ಭಾರೀ ನಷ್ಟ ಅನುಭವಿಸಬೇಕಾಗಬಹುದು, ಎಚ್ಚರ. 

ಇದನ್ನೂ ಓದಿ- 2024ರ ಏಪ್ರಿಲ್ ತಿಂಗಳವರೆಗೂ ಈ ರಾಶಿಯವರಿಗೆ ಭಾರೀ ಸಂಪತ್ತನ್ನು ಕರುಣಿಸಲಿದ್ದಾನೆ ಗುರು

ಸಿಂಹ ರಾಶಿ: 
ಶನಿಯ ಹಿಮ್ಮುಖ ಚಲನೆಯು ಸಿಂಹ ರಾಶಿಯವರಿಗೆ ಫಲಪ್ರದವಾಗಿದೆ. ಈ ಸಮಯದಲ್ಲಿ ಪಾಲುದಾರಿಕೆ ವ್ಯವಹಾರಗಳಲ್ಲಿ ಪ್ರಯೋಜನವಾಗಲಿದೆ. ಹಣಕಾಸಿನ ಲಾಭ ಸಾಧ್ಯತೆ ಇದ್ದು, ನಿಮ್ಮ ಬಲು ದಿನದ ಕನಸುಗಳು ನನಸಾಗಲಿವೆ.

ಕನ್ಯಾ ರಾಶಿ: 
ಶನಿಯ ವಕ್ರ ನಡೆಯು ಕನ್ಯಾ ರಾಶಿಯವರಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟು ಮಾಡಲಿದೆ. ಈ ಸಮಯದಲ್ಲಿ ನಿಮ್ಮ ಹಳೆಯ ರೋಗಗಳು ಉಲ್ಬಣಿಸಬಹುದು. ಹೂಡಿಕೆಗಳಿಂದ ಕೈ ಸುಟ್ಟುಕೊಳ್ಳುವ ಸಾಧ್ಯತೆ ಇರುವುದರಿಂದ ಎಚ್ಚರಿಕೆಯಿಂದ ಯೋಚಿಸಿ ಹೂಡಿಕೆ ಮಾಡುವುದು ಒಳಿತು. 

ತುಲಾ ರಾಶಿ: 
ಶನಿಯ ಹಿಮ್ಮುಖ ಚಲನೆಯು ತುಲಾ ರಾಶಿಯವರಿಗೆ ಲಾಭದಾಯಕವಾಗಿರಲಿದೆ. ಇದು ನಿಮಗೆ ಬಂಗಾರದ ಸಮಯವಾಗಿರುವುದರಿಂದ ನೀವು ಯಾವುದೇ ಕೆಲಸವನ್ನು ಆರಂಭಿಸಿದರೂ ವಿಜಯಲಕ್ಷ್ಮಿ ಒಲಿಯಲಿದ್ದಾಳೆ. ನಿಮ್ಮ ಮಕ್ಕಳಿಂದ ಶುಭ ಸುದ್ದಿ ಪಡೆಯುವ ನಿರೀಕ್ಷೆಯಿದೆ. 

ವೃಶ್ಚಿಕ ರಾಶಿ: 
ಶನಿಯ ವಕ್ರ ನಡೆಯು ವೃಶ್ಚಿಕ ರಾಶಿಯವರ ಜೀವನದಲ್ಲಿಯೂ ಕೂಡ ಚಿನ್ನದಂತಹ ಸಮಯ ಎಂದು ಸಾಬೀತುಪಡಿಸಲಿದೆ. ಈ ಸಮಯದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ತಯಾರಿನಡೆಸುತ್ತಿರುವವರಿಗೆ ಯಶಸ್ಸು ದೊರೆಯಲಿದೆ. ಉದ್ಯೋಗದಲ್ಲಿ ಪ್ರಮೋಷನ್ ಭಾಗ್ಯವಿದ್ದರೆ, ವ್ಯಾಪಾರಸ್ಥರಿಗೆ ಆದಾಯ ಹೆಚ್ಚಾಗಲಿದೆ. ಧನಾವೃಷ್ಟಿ ಯೋಗವೂ ಇದೆ. 

ಇದನ್ನೂ ಓದಿ- Shasha Rajyoga: ಶನಿ ದೇವನ ಕೃಪೆಯಿಂದ ಈ ರಾಶಿಯವರಿಗೆ ಪ್ರಾಪ್ತಿಯಾಗಲಿದೆ ಕುಬೇರನ ಸಂಪತ್ತು

ಧನು ರಾಶಿ: 
ಶನಿಯ ಹಿಮ್ಮುಖ ಚಲನೆಯು ಈ ರಾಶಿಯವರ ಜೀವನದಲ್ಲಿ ಸಂಕಷ್ಟಗಳನ್ನು ಹೆಚ್ಚಿಸಲಿದ್ದು ಇವರು ತುಂಬಾ ಜಾಗರೂಕರಾಗಿರಬೇಕು. ಆದಾಗ್ಯೂ, ಮಿತ್ರರ ಸಹಕಾರದಿಂದ ನಿಮ್ಮ ಪ್ರಮುಖ ಕೆಲಸಗಳು ಪೂರ್ಣಗೊಳ್ಳಲಿವೆ. 

ಮಕರ ರಾಶಿ: 
ಶನಿಯ ವಕ್ರ ನಡೆಯು ಮಕರ ರಾಶಿಯವರಿಗೆ ಹಣಕಾಸಿನ ವಿಷಯಗಳಲ್ಲಿ ಉತ್ತಮ ಫಲ ನೀಡಲಿದೆ. ಆದಾಗ್ಯೂ, ಈ ಸಮಯದಲ್ಲಿ ನಿಮ್ಮ ಮಾತಿನ ಮೇಲೆ ನಿಗಾವಹಿಸುವುದು ಬಹಳ ಮುಖ್ಯ. ಇಲ್ಲವೇ, ನಿಮ್ಮ ಮಾತೇ ನಿಮಗೆ ಮುಳುವಾಗಬಹುದು. ಇದಲ್ಲದೆ, ಬೇರೆಯವರಿಗೆ ತೊಂದರೆ ನೀಡುವುದನ್ನು ತಪ್ಪಿಸಿ, ಇಲ್ಲದಿದ್ದರೆ, ಆ ತೊಂದರೆಯ ಸುಳಿಯಲ್ಲಿ ನೀವೇ ಸಿಲುಕಬಹುದು, ಎಚ್ಚರ. 

ಕುಂಭ ರಾಶಿ: 
ಮೂರು ದಶಕಗಳ ಬಳಿಕ ಕುಂಭ ರಾಶಿ ಪ್ರವೇಶಿಸಿರುವ ಶನಿ ದೇವನು ಇದೇ ರಾಶಿಯಲ್ಲಿ ಹಿಮ್ಮುಖ ಚಲನೆಯನ್ನೂ ಆರಂಭಿಸಳಿದ್ದಾನೆ. ಇದರ ಗರಿಷ್ಠ ಪರಿಣಾಮವು ಕುಂಭ ರಾಶಿಯ ಜನರ ಮೇಲೆ ಕಂಡು ಬರುತ್ತದೆ. ಈ ರಾಶಿಯವರಿಗೆ ಭೂಮಿಯಿಂದ ಲಾಭವಿದೆ. ಆದಾಗ್ಯೂ, ಯಾವುದೇ ಕೆಲಸದಲ್ಲಿ ಯಶಸ್ಸನ್ನು ಪಡೆಯಲು ನಿಮ್ಮ ಕಠಿಣ ಪರಿಶ್ರಮದ ಅಗತ್ಯವಿದೆ. 

ಮೀನ ರಾಶಿ: 
ಶನಿಯ ಹಿಮ್ಮುಖ ಚಲನೆಯು ಮೀನ ರಾಶಿಯವರಿಗೆ ಮಿಶ್ರ ಫಲಗಳನ್ನುನೀಡಲಿದೆ. ಈ ಸಮಯದಲ್ಲಿ ಹಣಕಾಸಿನ ಹೊಸ ಮೂಲಗಳು ಸೃಷ್ಟಿಯಾಗಲಿದ್ದು, ಹಣದ ಹರಿವು ಹೆಚ್ಚಾಗಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯವೂ ಇದೆ.  ನಿಮ್ಮ ಮಕ್ಕಳ ಭವಿಷ್ಯದ ಬಗೆಗಿನ ಚಿಂತೆ ನಿಮ್ಮನ್ನು ಹೆಚ್ಚು ಕಾಡಲಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News