ರಾಮಲಾಲನಿಗೆ ಬಲು ಪ್ರಿಯವಂತೆ ಈ ಬಣ್ಣದ ಬಟ್ಟೆಗಳು

Ram Poshak: ಜನವರಿ 22, 2024ರಂದು ರಾಮಮಂದಿರ ಉದ್ಘಾಟನೆಯಾಗಿದೆ. ಅಯೋಧ್ಯೆಯ ರಾಮಜನ್ಮಭೂಮಿಯಲ್ಲಿ ನಿರ್ಮಿಸಲಾಗಿರುವ ರಾಮಮಂದಿರದಲ್ಲಿ ರಾಮಲಾಲಾನನ್ನು ವಿಧ್ಯುಕ್ತವಾಗಿ ಪ್ರತಿಷ್ಠಾಪಿಸಲಾಯಿತು. ಇಂದಿನಿಂದ (ಜನವರಿ 23) ಅಯೋಧ್ಯೆ ಶ್ರೀರಾಮನ ದರ್ಶನಕ್ಕೆ ಭಕ್ತಾದಿಗಳಿಗೂ ಅವಕಾಶ ಕಲ್ಪಿಸಲಾಗಿದೆ. 

Written by - Yashaswini V | Last Updated : Jan 23, 2024, 06:43 AM IST
  • ಅಯೋಧ್ಯೆಯಲ್ಲಿ ನೂತನ ರಾಮಮಂದಿರದ ಗರ್ಭಗುಡಿಯಲ್ಲಿ ರಾಮಲಾಲಾ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ.
  • ಇದರೊಂದಿಗೆ 5 ಶತಮಾನಗಳ ರಾಮಮಂದಿರ ನಿರ್ಮಾಣದ ಕನಸು ನನಸಾಗಿದೆ
  • ರಾಮಲಾಲ ವಿಗ್ರಹ ಪ್ರತಿಷ್ಠಾಪನೆ ಬಳಿಕ ಇಡೀ ದೇಶದಲ್ಲಿ ದೀಪಾವಳಿಯಂತಹ ವಾತಾವರಣ ಕಂಡು ಬಂದಿತ್ತು.
ರಾಮಲಾಲನಿಗೆ ಬಲು ಪ್ರಿಯವಂತೆ ಈ ಬಣ್ಣದ ಬಟ್ಟೆಗಳು  title=

Ramlala Pran Pratishtha: ಇಡೀ ದೇಶಾದ್ಯಂತ ಮಾತ್ರವಲ್ಲದೆ, ವಿಶ್ವದ ನಾನಾ ಭಾಗಗಳಲ್ಲಿ ಅಯೋಧ್ಯೆಯಲ್ಲಿ ರಾಮಲಾಲ ಪ್ರತಿಷ್ಠಾಪನೆ ಸಂಭ್ರಮವನ್ನು ವಿಜೃಂಭಣೆಯಿಂದ ಆಚರಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಾಲ ವಿಗ್ರಹ ಪ್ರತಿಷ್ಠಾಪನೆ ಬಳಿಕ ಇಡೀ ದೇಶದಲ್ಲಿ ದೀಪಾವಳಿಯಂತಹ ವಾತಾವರಣ ನಿರ್ಮಾಣವಾಗಿತ್ತು. 

ಸೋಮವಾರ (ಜನವರಿ 22) ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯಲ್ಲಿ ಅಭಿಜಿತ್ ಮುಹೂರ್ತದಲ್ಲಿ ರಾಮಲಲ್ಲಾನ ಮಹಾಮಸ್ತಕಾಭಿಷೇಕ ನೆರವೇರಿತು. ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ , ಉತ್ತರ ಪ್ರದೇಶದ ರಾಜ್ಯಪಾಲ ಆನಂದಿಬೆನ್ ಪಟೇಲ್ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಮೊದಲಾದವರು ಇದರಲ್ಲಿ ಭಾಗವಹಿಸಿದ್ದರು.

ಇದನ್ನೂ ಓದಿ- ನೀಲವರ್ಣ ಶ್ರೀರಾಮನ ಮೂರ್ತಿ ಕಪ್ಪಾಗಿರಲು ಕಾಣರವೇನು ಗೊತ್ತೆ..? ಅದರ ವಿಶೇಷತೆ ಇಲ್ಲಿದೆ

ರಾಮಲಾಲನಿಗೆ ಬಲು ಪ್ರಿಯವಂತೆ ಈ ಬಣ್ಣದ ಬಟ್ಟೆಗಳು!
ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮಲಾಲನನ್ನು ನಿಯಮಿತವಾಗಿ ಅಲಂಕರಿಸಲಾಗುತ್ತದೆ. ದೇವಾಲಯದಲ್ಲಿ  ಭಗವಾನ್ ಶ್ರೀರಾಮ ತನ್ನ ಸಹೋದರರೊಂದಿಗೆ ಕುಳಿತಿದ್ದಾನೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಭಗವಾನ್ ರಾಮನಿಗೆ ಕೆಲವು ಬಣ್ಣಗಳನ್ನು ಬಲು ಪ್ರಿಯ ಎಂದು ಬಣ್ಣಿಸಲಾಗುತ್ತಿದೆ. ಅದರಂತೆ, ರಾಮ್‌ಲಾಲಾನ ಇಷ್ಟಕ್ಕೆ ಅನುಗುಣವಾಗಿಯೇ ಪ್ರತಿದಿನ ವೇಷಭೂಷಣವನ್ನು ಬದಲಾಯಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. 

ಇದನ್ನೂ ಓದಿ- ಮಗಳ ಕೆನ್ನೆಯ ಮೇಲೆ ಶ್ರೀರಾಮನ ಚಿತ್ರ ಬಿಡಿಸಿದ ಕಲಾವಿದ

ಭಗವಾನ್ ರಾಮ ವಾರದ ಯಾವ ದಿನ ಯಾವ ಬಣ್ಣದ ಉಡುಪನ್ನು ಧರಿಸುತ್ತಾನೆ ಗೊತ್ತಾ? 
ಭಗವಾನ್ ಶ್ರೀರಾಮನು ತನ್ನ ಸಹೋದರರೊಂದಿಗೆ ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತ್ಯಕ್ಷನಾಗಿದ್ದಾನೆ. ಆ ಪ್ರತಿಮೆಯ ಉಡುಗೆಯನ್ನು ವಾರದ ಪ್ರತಿ ದಿನ ರಾಮನ ನೆಚ್ಚಿನ ಬಣ್ಣಕ್ಕೆ ಅನುಗುಣವಾಗಿ ಬದಲಾಯಿಸಲಾಗುತ್ತದೆ. ಭಗವಾನ್ ಶ್ರೀರಾಮನು ವಾರದ ಯಾವ ದಿನ ಯಾವ ಬಣ್ಣದ ಬಟ್ಟೆಯನ್ನು ಧರಿಸುತ್ತಾನೆ. ರಾಮ್‌ಲಾಲಾನ ನೆಚ್ಚಿನ ಬಣ್ಣ ಯಾವುದು ಎಂದು ತಿಳಿಯೋಣ... 

ಸೋಮವಾರ - ಬಿಳಿ ಬಣ್ಣದ ಉಡುಗೆ.

ಮಂಗಳವಾರ- ಕೆಂಪು ಬಣ್ಣದ ಉಡುಗೆ.

ಬುಧವಾರ - ತಿಳಿ ಹಸಿರು ಬಣ್ಣದ ಉಡುಗೆ.

ಗುರುವಾರ - ಹಳದಿ ಬಣ್ಣದ ಉಡುಗೆ.

ಶುಕ್ರವಾರ - ಕೆನೆ ಬಣ್ಣದ ಉಡುಗೆ. 

ಶನಿವಾರ - ನೀಲಿ ಬಣ್ಣದ ಉಡುಗೆ.

ಭಾನುವಾರ - ಗುಲಾಬಿ ಬಣ್ಣದ ಉಡುಗೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News