Car Vastu tips: ಕಾರಿನಲ್ಲಿ ದೇವರ ವಿಗ್ರಹ ಇಡುವುದು ಇಂತಹ ಜನರಿಗೆ ನಷ್ಟವನ್ನುಂಟು ಮಾಡಬಹುದು!

ಕಾರಿನಲ್ಲಿ ದೇವರ ವಿಗ್ರಹ: ಸಾಮಾನ್ಯವಾಗಿ ಜನರು ಕಾರಿನ ಡ್ಯಾಶ್‌ಬೋರ್ಡ್‌ನಲ್ಲಿ ದೇವರ ವಿಗ್ರಹವನ್ನು ಇಡುವುದನ್ನು ನೀವು ನೋಡಿರಬಹುದು. ಆದರೆ ವಾಸ್ತು ಶಾಸ್ತ್ರದ ಪ್ರಕಾರ ಕಾರಿನಲ್ಲಿ ದೇವರ ವಿಗ್ರಹವನ್ನು ಇರಿಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ ಅದು ನಿಮ್ಮ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. 

Written by - Puttaraj K Alur | Last Updated : Feb 28, 2024, 04:57 PM IST
  • ದೇವರ ಮೂರ್ತಿ ಇಟ್ಟರೆ ಯಾವುದೇ ಕಾರಣಕ್ಕೂ ಕಾರಿನಲ್ಲಿ ಮದ್ಯ ಸೇವನೆ ಮಾಡಬಾರದು
  • ವಾಸ್ತುಶಾಸ್ತ್ರದ ಪ್ರಕಾರ ಕಾರಿನಲ್ಲಿ ದೇವರ ಮೂರ್ತಿ ಇಟ್ಟುಕೊಂಡವರು ಧೂಮಪಾನ ಮಾಡಬಾರದು
  • ದೇವರ ವಿಗ್ರಹ, ಫೋಟೋ ಇರುವ ಕಾರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ & ಮಾಂಸಾಹಾರಿ ಸೇವನೆ ನಿಷಿದ್ಧ
Car Vastu tips: ಕಾರಿನಲ್ಲಿ ದೇವರ ವಿಗ್ರಹ ಇಡುವುದು ಇಂತಹ ಜನರಿಗೆ ನಷ್ಟವನ್ನುಂಟು ಮಾಡಬಹುದು!  title=
ಕಾರಿನಲ್ಲಿ ದೇವರ ವಿಗ್ರಹ

ಕಾರಿನ ವಾಸ್ತು ಸಲಹೆಗಳು: ಬಣ್ಣ, ವೈಶಿಷ್ಟ್ಯಗಳು ಇತ್ಯಾದಿಗಳನ್ನು ನೋಡಿದ ನಂತರವೇ ನಾವು ಕಾರನ್ನು ಖರೀದಿಸುತ್ತೇವೆ. ಪ್ರತಿಯೊಬ್ಬ ವ್ಯಕ್ತಿಯು ಹೊಸ ಕಾರು ಅವರಿಗೆ ಶುಭವಾಗಬೇಕೆಂದು ಬಯಸುತ್ತಾನೆ. ಇದಕ್ಕಾಗಿ ಮೊದಲು ಕಾರು ಖರೀದಿಸಿದ ನಂತರ ದೇವರ ಆಶೀರ್ವಾದ ಪಡೆಯಲು ದೇವಸ್ಥಾನಕ್ಕೆ ಬರುತ್ತಾರೆ. ಅದೇ ರೀತಿ ಅನೇಕ ಜನರು ಕಾರಿನಲ್ಲಿ ದೇವರ ವಿಗ್ರಹವನ್ನು ಪ್ರತಿಷ್ಠಾಪಿಸುತ್ತಾರೆ. ಆದ್ದರಿಂದ ದೇವರ ಅನುಗ್ರಹ ದೊರೆಯುತ್ತದೆ ಎಂಬ ನಂಬಿಕೆಯನ್ನಿಟ್ಟುಕೊಂಡಿರುತ್ತಾರೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಜನರು ಸಾಮಾನ್ಯವಾಗಿ ಕಾರಿನಲ್ಲಿ ಗಣೇಶನ ವಿಗ್ರಹ, ಶಿವ ದೇವರ ಸಣ್ಣ ವಿಗ್ರಹ, ತಾಯಿ ದುರ್ಗಾದೇವಿ ಮುಂತಾದ ವಿಗ್ರಹಗಳನ್ನು ಪ್ರತಿಷ್ಠಾಪಿಸುತ್ತಾರೆ. ಇದರಿಂದ ದೇವರು ಅವರ ಮೇಲೆ ಬರುವ ತೊಂದರೆಗಳು ಮತ್ತು ಅಡೆತಡೆಗಳಿಂದ ರಕ್ಷಿಸುತ್ತಾನೆಂದು ನಂಬಿರುತ್ತಾರೆ. ಆದರೆ ಕಾರಿನಲ್ಲಿ ದೇವರ ಮೂರ್ತಿ ಇಡುವಾಗ ಕೆಲವೊಂದು ವಿಷಯಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಬಹಳ ಮುಖ್ಯ ಎನ್ನುತ್ತಾರೆ ವಾಸ್ತು ತಜ್ಞರು. ವಾಸ್ತು ಶಾಸ್ತ್ರದ ಪ್ರಕಾರ ಕೆಲವರು ದೇವರ ಮೂರ್ತಿಯನ್ನು ಕಾರಿನಲ್ಲಿ ಇಡಬಾರದು. ಯಾವ ಜನರು ದೇವರ ಮೂರ್ತಿಯನ್ನು ಕಾರಿನಲ್ಲಿ ಇಡುವುದನ್ನು ತಪ್ಪಿಸಬೇಕು ಎಂಬುದರ ಬಗ್ಗೆ ತಿಳಿಯಿರಿ. 

ಇದನ್ನೂ ಓದಿ: ವೀಳ್ಯದೆಲೆಯನ್ನು ಈ ರೀತಿ ಬಳಸಿದರೆ ಒಂದೇ ಒಂದು ಬಿಳಿ ಕೂದಲು ಇರಲ್ಲ!

ಇಂತಹವರು ದೇವರ ಮೂರ್ತಿಯನ್ನು ಕಾರಿನಲ್ಲಿಡಬಾರದು

  • ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನೀವು ಕಾರಿನಲ್ಲಿ ದೇವರ ವಿಗ್ರಹವನ್ನು ಇಟ್ಟುಕೊಂಡಿದ್ದರೆ, ಅದನ್ನು ಕಾಲಕಾಲಕ್ಕೆ ಸ್ವಚ್ಛಗೊಳಿಸಬೇಕು ಎಂಬುದನ್ನು ನೆನಪಿನಲ್ಲಿಡಿ. 
  • ಕಾರಿನಲ್ಲಿ ದೇವರ ಮೂರ್ತಿ ಇಟ್ಟರೆ ಕಾರಿನಲ್ಲಿ ಮದ್ಯ ಸೇವನೆ ಮಾಡಬಾರದು ಎನ್ನುತ್ತಾರೆ ವಾಸ್ತು ತಜ್ಞರು. ಇದು ದೇವರನ್ನು ಅವಮಾನಿಸುತ್ತದೆ ಮತ್ತು ಅವರು ಕೋಪಗೊಳ್ಳುತ್ತಾರೆ. 
  •  ವಾಸ್ತು ಶಾಸ್ತ್ರದ ಪ್ರಕಾರ ದೇವರ ಮೂರ್ತಿಯನ್ನು ಕಾರಿನಲ್ಲಿ ಇಟ್ಟುಕೊಂಡವರು ಧೂಮಪಾನ ಮಾಡಬಾರದು. 
  • ಇದಲ್ಲದೆ ದೇವರ ವಿಗ್ರಹ ಅಥವಾ ಫೋಟೋ ಇರುವ ಕಾರಿನಲ್ಲಿ ಈರುಳ್ಳಿ, ಬೆಳ್ಳುಳ್ಳಿ ಮತ್ತು ಮಾಂಸಾಹಾರಿ ಸೇವನೆ ಮಾಡದಂತೆ ವಿಶೇಷ ಕಾಳಜಿ ವಹಿಸಬೇಕು. ಜ್ಯೋತಿಷ್ಯದಲ್ಲಿ ಇದನ್ನು ಅಶುಭವೆಂದು ಪರಿಗಣಿಸಲಾಗಿದೆ. 
  •  ವಾಸ್ತು ಶಾಸ್ತ್ರದ ಪ್ರಕಾರ ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ದೇವರ ಮೂರ್ತಿ ಇಡಬಾರದು. ಕಾರಿನ ಮೇಲೆ ದೇವರ ಫೋಟೋ ಇಡಬಹುದು. ಅದರಲ್ಲೂ ಕಾರಿನಲ್ಲಿ ಮದ್ಯ, ಸಿಗರೇಟ್ ಅಥವಾ ನಾನ್‌ವೆಜ್ ಸೇವಿಸುವವರು ದೇವರ ಮೂರ್ತಿಯನ್ನು ಕಾರಿನಲ್ಲಿಡಬಾರದು. ಇಂತಹವರು ಅಪ್ಪಿತಪ್ಪಿಯೂ ದೇವರ ಮೂರ್ತಿಯನ್ನು ಕಾರಿನಲ್ಲಿಡಬಾರದು ಎಂದು ಹೇಳಲಾಗಿದೆ. 

(ಗಮನಿಸಿರಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE KANNADA NEWS ಇದನ್ನು ದೃಢಪಡಿಸುವುದಿಲ್ಲ.) 

ಇದನ್ನೂ ಓದಿ: Tourist Places: ದಕ್ಷಿಣ ಭಾರತದ ಅದ್ಭುತ ಪ್ರವಾಸಿ ತಾಣಗಳು..! ವೀಕ್‌ ಎಂಡ್‌ ಫುಲ್‌ ಎಂಜಾಯ್‌ ಮಾಡಿ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News