ಬೆಂಗಳೂರು: ಹುಟ್ಟು ಸಾವು, ಬದುಕಿನ ಅನುಭವಗಳು ಒಂದಾ ಎರಡಾ, ಒಂದಷ್ಟು ಜನಕ್ಕೆ ಬದುಕು ಅಬ್ಬಬ್ಬಾ ಸಾಕಪ್ಪಾ ಅನಿಸಿದರೆ, ಇನ್ನೊಂದಿಷ್ಟು ಜನಕ್ಕೆ ಇಷ್ಟೇನ ಜೀವ್ನ ಅಂತನಿಸುತ್ತೆ. ಅದ್ರಲ್ಲೂ ಹುಟ್ಟೋ ಮುನ್ನ ಏನಾಗಿದ್ದೊ ಸತ್ತ ನಂತರ ಏನಾಗ್ತೇವೆ ಅನ್ನೋ ಕುತೂಹಲ ಒಂದಲ್ಲಾ ಒಂದು ಬಾರಿ ಅನಿಸಿರುತ್ತೆ, ಯಾಕಂದ್ರೆ ಈ ಭೂಮಿ ಮೇಲೆ ಸತ್ತ ನಂತರ ಹಿಂದಿರುಗಿದವರು ಯಾರೂ ಇಲ್ಲಾ.ಹೌದು ಮನುಷ್ಯ ಮೃತನಾದ ಮೇಲೆ ದೇಹದಿಂದ ಹೋರ ಹೋದಂತಹ ಆತ್ಮ ಮತ್ತೇ ಮರು ಜನ್ಮ ಪಡೆಯುತ್ತಾ? ಇಲ್ಲಿದೇ ನೋಡಿ.
ಕೆಲ ಧರ್ಮಗಳು ಹೇಳುತ್ತವೆ ಸತ್ತ ನಂತರ ಮೂರನೇ ಜಗತ್ತಿನ ಪ್ರವೇಶವನ್ನ ಪಡೆಯುತ್ತೇವೆ ಅಂತಾ, ಇನ್ನೂ ಕೆಲವು ಧರ್ಮಗಳು ಇದನ್ನ ಸ್ವರ್ಗ-ನರಕಗಳೆಂದು ವಿಂಗಡಿಸಿವೆ. ಆದರೆ ವಿಜ್ನಾನಿಗಳು ಇದ್ಯಾವುದನ್ನು ಸಾಕ್ಷಿ-ಆಧಾರ ಗಳಿಲ್ಲದೆ ಯಾವುದೇ ಕಾರಣಕ್ಕೂ ನಂಬೋದಿಲ್ಲ, ಹಾಗೂ ಅದನ್ನ ತಿರಸ್ಕರಿಸುತ್ತವೆ. ಈ ಹುಟ್ಟು ಸಾವಿನ ಮಧ್ಯೆ ಹುಟ್ಟೋ ಕುತೂಹಲಕಾರಿ ಸಂಗತಿ ಎಂದರೆ ಮರಣದ ನಂತರ ಭೂತಗಳಾಗೋದು!
ಇದನ್ನೂ ಓದಿ: Samantha: ನಟಿ ಸಮಂತಾ ಫಿಟ್ನೆಸ್ ಸಿಕ್ರೇಟ್ ಇಲ್ಲಿದೆ ನೋಡಿ.. ನೀವೂ ಒಮ್ಮೆ ಟ್ರೈ ಮಾಡಿ
ಹೌದು, ಮರಣದ ನಂತರ ಭೂತ ಎಂಬೋದನ್ನ ಸುಳ್ಳು ಎಂದು ತಳ್ಳಿ ಹಾಕೊ ಜನಕ್ಕೆ ಗಾಬರಿ ಎಂಬಂತ್ತೆ ಜಗತ್ತಿನಾದ್ಯಂತ ಪ್ರತೀ ದಿನ ಹಲವು ಭೂತ ಇರುವಿಕೆಯ ಪ್ರಕರಣಗಳೂ ಸಿಗುತ್ತವೆ. ಈ ಭೂತ ಪ್ರೇತಾತ್ಮ ಇರುವುದು ಸುಳ್ಳಾ ನಿಜಾನಾ? ಎಂಬುವುದು ಅವರವರಿಗೆ ಬಿಟ್ಟಿದ್ದು. ಏಕೆಂದರೆ ಈ ಎರಡಕ್ಕೂ ಸಮನಾಗಿ ಸಾಕ್ಯ್ಷಾಧಾರಗಳೂ ಸಿಗುತ್ತಿವೆ. ಈ ಭೂತ ಪ್ರೇತಾತ್ಮದ ಬಗ್ಗೆ ಸ್ವಲ್ಪ ತಿಳಿಯೋಣ, ಆದರೆ ಇದನ್ನ ನಂಬೋದು ಬಿಡೋದು ನಿಮಗೆ ಬಿಟ್ಟದ್ದು. ನಮ್ಮ ಜೀವನದಲ್ಲಿ ಏನೇ ಏಳು-ಬೀಳು ಆದ್ರೂ ಎಲ್ಲಾ ವಿಧಿ ಆಟ ಎನ್ನುವ ನಾವು ಹುಟ್ಟು ಸಾವು ಕೂಡ ವಿಧೀ ಬರಹ ಎನ್ನುತ್ತೇವೆ.
ಇದನ್ನೂ ಓದಿ: Megha Shetty: ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಮೇಘಾ ಶೆಟ್ಟಿ!
ವೇದಗಳ ಪ್ರಕಾರ ಸತ್ತ ನಂತರ ಶರೀರಕ್ಕೆ ಮಾತ್ರ ಸಾವು, ಆತ್ಮಕ್ಕೆ ಸಾವಿಲ್ಲ. ದೇಹವನ್ನ ತ್ಯಜಿಸಿ ಗಾಳಿಯಲ್ಲಿ ಆತ್ಮ ವಿರಮಿಸುತ್ತವಂತೆ. ಕಾಲಕ್ಕೆ ತಕ್ಕಂತೆ ವಿಧಿ ಕರೆ ಬಂದಾಗ ಗರ್ಭದಲ್ಲಿರುವ ಶಿಶುವಿನ ಶರೀರವನ್ನು ಪ್ರವೇಶಿಸುತ್ತವೆ ಎಂದು ಹೇಳಾಲಾಗುತ್ತೆ. ಗರ್ಭವನ್ನು ಆತ್ಮ ಪ್ರವೇಶಿಸಿದ ಬಳಿಕ ಹಿಂದಿನ ಜನ್ಮದ ಹಾಗೂ ಮುಂದಿನ ಯಾವುದೇ ವಿಷಯ ತಿಳಿದಿರೋದಿಲ್ಲ, ಮುಂದೆ ಹುಟ್ಟೊ ಮಗುವಿನ ಮೂಲಕವೇ ಪ್ರತಿಯೊಂದನ್ನು ಹೊಸದಾಗಿಯೇ ಕಲಿಯಬೇಕಾಗುತ್ತೆ! ಇನ್ನೂ ಮುಖ್ಯ ಸಂಗತಿ ಎಂದರೆ ಆಯುರ್ವೇದದ ಪ್ರಕಾರ ಆತ್ಮಗಳಿಗೆ ಒಟ್ಟು ಹದಿನೆಂಟು ವಿಧಗಳು ಇರಲಿವೆಯಂತೆ.
ಅಪಘಾತ, ಕೊಲೆ, ಆತ್ಮಕತ್ಯೆ, ತಮ್ಮ ಜೀವಿತಾ ಅವದಿಗೂ ಮುನ್ನವೇ ಸಾವನ್ನಪ್ಪಿರುವವರೇ ಭೂತಗಳಾಗ್ತಾರೆ ಎಂಬ ನಂಬಿಕೆ ಇದೆ. ಗರುಢ ಪುರಾಣದ ಪ್ರಕಾರ ಭೂತಗಳೀಗಂತಾನೆ ವಿಶಿಷ್ಟವಾದ ಪ್ರದೇಶವಿದೆಯಂತೆ, ಅವು ಅಲ್ಲಿಂದಲೇ ಆತ್ಮಗಳೂ ಶಾಂತಿಗಾಗಿ ಅಲೆದಾಡುತ್ತಾ ಇರುತ್ತವೆ ಎಂದು ಉಲ್ಲೇಖಿಸಲಾಗಿದೆ.ಆದ್ರೆ ಒಂದಂತೂ ಸತ್ಯ ಸತ್ತವರು ನರಕ-ಸ್ವರ್ಗ ಅನುಭವಿಸಿ ಮರಳಿ ಬಂದು ಹೇಳಿರೋ ಒಂದೇ ಒಂದು ಪುರಾವೆಯನ್ನು ನಾವು ಇದುವರೆಗೆ ನೋಡಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.