6,6,6,4,6,6 ಒಂದೇ ಓವರ್‌ನಲ್ಲಿ ಶತಕ ಬಾರಿಸಿ ತಂಡವನ್ನು ಗೆಲ್ಲುವಂತೆ ಮಾಡಿದ ಆಟಗಾರ!

Martin Guptill Century: ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024ರಲ್ಲಿ ಮಾರ್ಟಿನ್ ಗಪ್ಟಿಲ್ ಸ್ಫೋಟಕ ಬ್ಯಾಟಿಂಗ್ ಮೂಲಕ ಅದ್ಭುತ ಶತಕವನ್ನು ಗಳಿಸಿದರು. ತಮ್ಮ ಬಿರುಸಿನ ಬ್ಯಾಟಿಂಗ್ ಮೂಲಕ ಸದರ್ನ್ ಸೂಪರ್ ಸ್ಟಾರ್ಸ್ ತಂಡಕ್ಕೆ ಅಮೋಘ ಗೆಲುವು ತಂದುಕೊಟ್ಟರು.

Written by - Puttaraj K Alur | Last Updated : Oct 3, 2024, 09:08 AM IST
  • ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಮಾರ್ಟಿನ್‌ ಗಪ್ಟಿಲ್‌ ಸ್ಫೋಟಕ ಬ್ಯಾಟಿಂಗ್
  • ಒಂದೇ ಓವರ್‌ನಲ್ಲಿ 34 ತಂಡವನ್ನು ಗೆಲ್ಲುವಂತೆ ಮಾಡಿದ ಆಟಗಾರ!‌
  • ಕೊರ್ನಾಕ್ ಸೂರ್ಯ ತಂಡದ ವಿರುದ್ಧ ಸದರ್ನ್ ಸೂಪರ್ ಸ್ಟಾರ್ಸ್‌ಗೆ ಗೆಲುವು
6,6,6,4,6,6 ಒಂದೇ ಓವರ್‌ನಲ್ಲಿ ಶತಕ ಬಾರಿಸಿ ತಂಡವನ್ನು ಗೆಲ್ಲುವಂತೆ ಮಾಡಿದ ಆಟಗಾರ! title=
ಮಾರ್ಟಿನ್ ಗಪ್ಟಿಲ್ ಶತಕ

Martin Guptill Century: ಲೆಜೆಂಡ್ಸ್ ಲೀಗ್ ಕ್ರಿಕೆಟ್ 2024ರಲ್ಲಿ ಇರ್ಫಾನ್ ಪಠಾಣ್ ನಾಯಕತ್ವದ ಕೊರ್ನಾಕ್ ಸೂರ್ಯ ಒಡಿಶಾ ತಂಡವನ್ನು ದಕ್ಷಿಣ ಸೂಪರ್‌ಸ್ಟಾರ್ಸ್ 8 ವಿಕೆಟ್‌ಗಳಿಂದ ಸೋಲಿಸಿತು. ಮೊದಲು ಬ್ಯಾಟಿಂಗ್ ಮಾಡಿದ ಕೊರ್ನಾಕ್ ಸೂರ್ಯ ತಂಡ ನಿಗದಿತ 20 ಓವರ್‌ಗಳಲ್ಲಿ ೯ ವಿಕೆಟ್‌ ಕಳೆದುಕೊಂಡು 192 ರನ್ ಗಳಿಸಿತು. ಈ ಗುರಿಯನ್ನು ಸದರ್ನ್ ಸೂಪರ್ ಸ್ಟಾರ್ಸ್ ತಂಡ ಕೇವಲ 2 ವಿಕೆಟ್ ಕಳೆದುಕೊಂಡು ಸುಲಭವಾಗಿ ತಲುಪಿತು. ಮಾರ್ಟಿನ್ ಗಪ್ಟಿಲ್ ಅವರು ತಂಡದ ಪರ ಸ್ಫೋಟಕ ಬ್ಯಾಟಿಂಗ್ ಮಾಡಿದರು. ಮೈದಾನದ ಮೂಲೆಮೂಲೆಗೂ ಅವರು ಸಿಕ್ಸರ್‌ ಮತ್ತು ಬೌಂಡರಿ ಬಾರಿಸಿ ಅಬ್ಬರಿಸಿದರು. ಅವರ ಸ್ಫೋಟಕ ಶತಕದಿಂದಲೇ ತಂಡವು ಭರ್ಜರಿ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. 

ಆರನೇ ಓವರ್‌ನಲ್ಲಿ ಒಟ್ಟು 34 ರನ್‌! 

ಇನಿಂಗ್ಸ್‌ನ ಆರಂಭದಿಂದಲೂ ಮಾರ್ಟಿನ್ ಗಪ್ಟಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಓವರ್‌ನಲ್ಲಿಯೇ ಎರಡು ಬೌಂಡರಿಗಳನ್ನು ಬಾರಿಸುವ ಮೂಲಕ ಅವರು ಸ್ಫೋಟಕ ಆರಂಭ ಒದಗಿಸಿದರು. ಒಡಿಶಾ ತಂಡದ ಪರ ನವೀನ್ ಸ್ಟೀವರ್ಟ್ ಅವರ ಆರನೇ ಓವರ್‌ನಲ್ಲಿ ಅಕ್ಷರಶಹಃ ಅಬ್ಬರಿಸಿದರು. ನವೀನ್ ಅವರ ಓವರ್‌ನಲ್ಲಿ ಮಾರ್ಟಿನ್ ಒಟ್ಟು 34 ರನ್ ಗಳಿಸಿದರು. ಮೊದಲ ಮೂರು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು. ಇದಾದ ಬಳಿಕ ನಾಲ್ಕನೇ ಎಸೆತದಲ್ಲಿ ಬೌಂಡರಿ ಹಾಗೂ ಕೊನೆಯ ಎರಡು ಎಸೆತಗಳಲ್ಲಿ ಸಿಕ್ಸರ್ ಬಾರಿಸಿದರು.

ಇದನ್ನೂ ಓದಿ: ದಿನಾ ಬೆಳಿಗ್ಗೆ ಈ ಒಣಹಣ್ಣಿನ ರಸ ಕುಡಿಯೋದಕ್ಕೆ ಇಷ್ಟೊಂದು ಫಿಟ್ ಆಗಿದ್ದಾರಂತೆ ವಿರಾಟ್ ಕೊಹ್ಲಿ! ಸಣ್ಣ ಆಗೋಕೆ ಪರದಾಡೋರಿಗೆ ಸ್ವತಃ ಅವರೇ ಹೇಳಿದ ಟಿಪ್ಸ್ ಇದು

ಮಾರ್ಟಿನ್ ಗಪ್ಟಿಲ್ ಒಂದೇ ಓವರ್‌ನಲ್ಲಿ 34 ರನ್

ಮೊದಲ ಎಸೆತ - ಸಿಕ್ಸರ್
ಎರಡನೇ ಎಸೆತ - ಸಿಕ್ಸರ್
ಮೂರನೇ ಎಸೆತ - ಆರು
ನಾಲ್ಕನೇ ಎಸೆತ - ಬೌಂಡರಿ
ಐದನೇ ಎಸೆತ - ಸಿಕ್ಸರ್
ಆರನೇ ಎಸೆತ - ಸಿಕ್ಸರ್

131 ರನ್ ಗಳಿಸಿದ ಮಾರ್ಟಿನ್ ಗಪ್ಟಿಲ್ 

ಈ ಪಂದ್ಯದಲ್ಲಿ ಮಾರ್ಟಿನ್ ಗಪ್ಟಿಲ್ ಕೇವಲ 54 ಎಸೆತಗಳಲ್ಲಿ 9 ಬೌಂಡರಿ ಹಾಗೂ 11 ಸಿಕ್ಸರ್ ಒಳಗೊಂಡ 131 ರನ್ ಗಳಿಸಿದರು. ಅವರಿಂದಲೇ ತಂಡ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಗುಪ್ಟಿಲ್ ಹೊರತುಪಡಿಸಿ ಉಳಿದ ಬ್ಯಾಟ್ಸ್‌ಮನ್‌ಗಳು 20ಕ್ಕಿಂತ ಹೆಚ್ಚು ರನ್ ಗಳಿಸಲು ಸಾಧ್ಯವಾಗಲಿಲ್ಲ. ತಂಡದ ಗೆಲುವಿನಲ್ಲಿ ಗಪ್ಟಿಲ್ ಏಕಾಂಗಿ ಸ್ಫೋಟಕ ಪ್ರದರ್ಶನ ಕಂಡುಬಂತು. ಕೊರ್ನಾಕ್ ಸೂರ್ಯ ಒಡಿಶಾ ಬೌಲರ್‌ಗಳು ಕಳಪೆ ಬೌಲಿಂಗ್‌ನಿಂದ ಹೀನಾಯವಾಗಿ ಸೋತರು. ಈ ಪಂದ್ಯದಲ್ಲಿ ಅವರು ಉತ್ತಮ ಬೌಲಿಂಗ್ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ.

ಇದನ್ನೂ ಓದಿ:  "ಒಡೆದ ಮನಸುಗಳ ಸಮ್ಮಿಲನ" ವಿರಾಟ್‌ ಕೊಹ್ಲಿಯನ್ನು ಅಪ್ಪಿಕೊಂಡು ಭಾವುಕರಾದ ಗೌತಮ್‌ ಗಂಭೀರ್‌! ವಿಡಿಯೋ ನೋಡಿ

ಕೊರ್ನಾಕ್ ತಂಡದ ಪರ ರಿಚರ್ಡ್ ಲೆವಿ 63 ರನ್ ಗಳಿಸಿದ್ದರು. ಇವರ ಹೊರತಾಗಿ ಯೂಸುಫ್ ಪಠಾಣ್ 33 ರನ್ ಹಾಗೂ ನಾಯಕ ಇರ್ಫಾನ್ ಪಠಾಣ್ 10 ರನ್ ಮಾತ್ರ ಕೊಡುಗೆ ನೀಡಿದರು. ವಿನಯ್ ಕುಮಾರ್ 18 ರನ್ ಗಳಿಸಲಷ್ಟೇ ಶಕ್ತರಾದರು. ಹೀಗಾಗಿ ತಂಡವು 192 ರನ್ ಗಳಿಸಲು ಸಾಧ್ಯವಾಯಿತು. ದಕ್ಷಿಣ ಸೂಪರ್ ಸ್ಟಾರ್ಸ್ ಪರ ಸುಬೋಧ್ ಭಾಟಿ ಗರಿಷ್ಠ ಮೂರು ವಿಕೆಟ್ ಪಡೆದರು. ಇದಲ್ಲದೇ ಚತುರಂಗ ಡಿ ಸಿಲ್ವಾ 2 ವಿಕೆಟ್ ಪಡೆದು ಮಿಂಚಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News