Viral Video: ಒಬ್ಬ ನಾಯಿ ಹಿಡಿತಿದ್ರೆ, ಮತ್ತೊಬ್ಬ ಪಕ್ಷಿ ಕಂಡು ಓಡೋದ! ಇಂಡೋ-ಆಸೀಸ್ ಪಂದ್ಯದ ವೇಳೆ ನಡೆಯಿತು ಸಖತ್ ಫನ್ನಿ ಘಟನೆ

Indo-Aussie match: ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ತಮಾಷೆಯ ಸನ್ನಿವೇಶವೊಂದು ನಡೆದಿದೆ. ಆಸ್ಟ್ರೇಲಿಯಾದ ಇನಿಂಗ್ಸ್‌’ನ 43ನೇ ಓವರ್‌’ನಲ್ಲಿ ನಾಯಿಯೊಂದು ಆಟದ ಮೈದಾನಕ್ಕೆ ನುಗ್ಗಿದೆ.

Written by - Bhavishya Shetty | Last Updated : Mar 22, 2023, 11:01 PM IST
    • ಮೂರನೇ ಏಕದಿನ ಪಂದ್ಯದಲ್ಲಿ ತಮಾಷೆಯ ಸನ್ನಿವೇಶವೊಂದು ನಡೆದಿದೆ.
    • ಆಸ್ಟ್ರೇಲಿಯಾದ ಇನಿಂಗ್ಸ್‌’ನ 43ನೇ ಓವರ್‌’ನಲ್ಲಿ ನಾಯಿಯೊಂದು ಆಟದ ಮೈದಾನಕ್ಕೆ ನುಗ್ಗಿದೆ.
    • ಇದನ್ನು ಓಡಿಸಲೆಂದೆ ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಬೇಕಾದ ಪ್ರಮೇಯ ಬಂದೊದಗಿದೆ.
Viral Video: ಒಬ್ಬ ನಾಯಿ ಹಿಡಿತಿದ್ರೆ, ಮತ್ತೊಬ್ಬ ಪಕ್ಷಿ ಕಂಡು ಓಡೋದ! ಇಂಡೋ-ಆಸೀಸ್ ಪಂದ್ಯದ ವೇಳೆ ನಡೆಯಿತು ಸಖತ್ ಫನ್ನಿ ಘಟನೆ title=
Dog on IND vs AUS

Funny Videos: ಕ್ರಿಕೆಟ್ ಮೈದಾನದಲ್ಲಿ ಮಳೆಯ ಅಡಚಣೆಗಳು ಆಗುವುದು ಅಪರೂಪವೇನಲ್ಲ. ಒಂದು ವೇಳೆ ಮಳೆ ಬಂದು ಪಂದ್ಯ ನಿಂತರೆ ಅಭಿಮಾನಿಗಳಿ ಬೇಸರವಾಗೋದು ಖಂಡಿತ. ಆದರೆ ಇತರ ಕಾರಣಗಳಿಂದಾಗಿ ಕ್ರಿಕೆಟ್ ಪಂದ್ಯಗಳು ಆಗಾಗ್ಗೆ ಸ್ವಲ್ಪ ಸಮಯ ಸ್ಥಗಿತಗೊಳ್ಳುವುದುಂಟು. ಇಂದೂ ಸಹ ಅಂತಹ ಘಟನೆ ನಡೆದಿದೆ

ಇದನ್ನೂ ಓದಿ: IND vs AUS: ಆಸೀಸ್ ವಿರುದ್ಧ ಸೋಲುಂಡ ಭಾರತ: ಏಕದಿನ ಟ್ರೋಫಿ ಸೇರಿ ನಂ.1 ಪಟ್ಟ ಕಳೆದುಕೊಂಡ ಟೀಂ ಇಂಡಿಯಾ!

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಏಕದಿನ ಪಂದ್ಯದಲ್ಲಿ ತಮಾಷೆಯ ಸನ್ನಿವೇಶವೊಂದು ನಡೆದಿದೆ. ಆಸ್ಟ್ರೇಲಿಯಾದ ಇನಿಂಗ್ಸ್‌’ನ 43ನೇ ಓವರ್‌’ನಲ್ಲಿ ನಾಯಿಯೊಂದು ಆಟದ ಮೈದಾನಕ್ಕೆ ನುಗ್ಗಿದೆ. ಇದನ್ನು ಓಡಿಸಲೆಂದೆ ಸ್ವಲ್ಪ ಸಮಯದವರೆಗೆ ಆಟವನ್ನು ನಿಲ್ಲಿಸಬೇಕಾದ ಪ್ರಮೇಯ ಬಂದೊದಗಿದೆ. ಕಡೆಗೆ ಭದ್ರತಾ ಸಿಬ್ಬಂದಿಗಳು ನಾಯಿಯನ್ನು ಹಿಡಿಯಲು ಮೈದಾನ ತುಂಬಾ ಓಡಾಡಿದ್ದಾರೆ. ಈ ಸಂದರ್ಭದಲ್ಲಿ ಟೀಂ ಇಂಡಿಯಾ ಆಟಗಾರ ರವೀಂದ್ರ ಜಡೇಜಾ ಕೂಡ ನಾಯಿ ಹಿಡಿಯಲು ಪ್ರಯತ್ನಿಸಿದ್ದಾರೆ. ಆದರೆ ನಾಯಿ ಅಲ್ಲಿಂದ ಕೂಡ ತಪ್ಪಿಸಿಕೊಂಡು ಓಡಿದೆ.

 

ಮತ್ತೊಂದೆಡೆ ಟೀಂ ಇಂಡಿಯಾ ಬ್ಯಾಟಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಗರುಡ ಎಂಟ್ರಿ ಕೊಟ್ಟಿದೆ. ಇದನ್ನು ಕಂಡ ಆಸೀಸ್ ಬೌಲರ್ ಭಯದಿಂದ ಬಾಲ್ ಮಾಡೋದನ್ನು ಬಿಟ್ಟು ಓಡಿಹೋಗಿದ್ದಾರೆ. ಸದ್ಯ ಈ ಎರಡು ಘಟನೆಗಳು ಪ್ರೇಕ್ಷಕರಲ್ಲಿ ನಗು ತರಿಸಿದೆ.

ಇದನ್ನೂ ಓದಿ: IPL 2023 ಪ್ರಾರಂಭಕ್ಕೂ ಮುನ್ನ ಬದಲಾಯ್ತು ಕ್ರಿಕೆಟ್’ನ ಈ ದೊಡ್ಡ ನಿಯಮ: ಹಿಂದೆಂದೂ ಕಂಡಿರದ ವಿಚಿತ್ರ ರೂಲ್ಸ್ ಇದು!

ಆಸೀಸ್ ವಿರುದ್ಧ ಸೋಲುಂಡ ಟೀಂ ಇಂಡಿಯಾ:

ಇಂದು ಚೆನ್ನೈನಲ್ಲಿ ನಡೆದ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ಗೆಲುವು ಕಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 269 ರನ್ ಕಲೆಹಾಕಿತು. ಬಳಿಕ ಗುರಿ ಬೆನ್ನತ್ತಿದ್ದ ಭಾರತ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 248 ರನ್ ಕಲೆ ಹಾಕಿದೆ. ಈ ಮೂಲಕ ಆಸೀಸ್ ವಿರುದ್ಧ ಸೋಲು ಕಂಡ ಟೀಂ ಇಂಡಿಯಾ, ಏಕದಿನ ಶ್ರೇಯಾಂಕದಲ್ಲೂ ಕುಸಿತ ಕಂಡಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News